ನವದೆಹಲಿ, ಜು.26 – ಬೇಟೆಗಾರರು, ನೈಸರ್ಗಿಕ ಮತ್ತು ಅಸ್ವಾಭಾವಿಕ ಕಾರಣಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ 329 ಹುಲಿಗಳು ಸಾವನ್ನಪ್ಪಿದೆ ಇದೇ ಅವಧಿಯಲ್ಲಿ 125 ಜನರು ಹುಲಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರಸರ್ಕಾರ ತಿಳಿಸಿದೆ.
ಇದೇ ಅವಧಿಯಲ್ಲಿ 307 ಆನೆಗಳು ವಿದ್ಯುದಾಘಾತ, ರೈಲು ಅಪಘಾತ, ವಿಷ ಮತ್ತು ಬೇಟೆಯಿಂದ ಸಾವನ್ನಪ್ಪಿವೆ ಎಂದು ಸೋಮವಾರ ಲೋಕಸಭೆಯಲ್ಲಿ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅಂಕಿಅಂಶ ಮಂಡಿಸಿದ್ದಾರೆ.
2019 ರಲ್ಲಿ 96, 2020 ರಲ್ಲಿ 106 ಮತ್ತು 2021 ರಲ್ಲಿ 127 ಹುಲಿಗಳು ಸಾವನ್ನಪ್ಪಿವೆ.ಇದರಲ್ಲಿ 68 ಹುಲಿ ಸಾವುಗಳು ನೈಸರ್ಗಿಕ ಕಾರಣಗಳಿಂದ, ಐದು ಅಸಹಜ ಕಾರಣಗಳಿಂದ, 29 ಬೇಟೆಯಿಂದ ಮತ್ತು 30 ಕಾರ್ಯಾಚರಣೆ ಕಾರಣವಾಗಿವೆ ಎಂದು ಸಚಿವರು ಹೇಳಿದರು. ಒಟ್ಟು 197 ಹುಲಿ ಸಾವುಗಳು ಪರಿಶೀಲನೆಯಲ್ಲಿವೆ ಆದಾಗ್ಯೂ, ಬೇಟೆಯಾಡುವ ಪ್ರಕರಣಗಳ ಸಂಖ್ಯೆಯು ವರ್ಷಗಳಲ್ಲಿ ಕಡಿಮೆಯಾಗಿದೆ ವರದಿಯಲ್ಲಿ ತೋರಿಸಲಾಗಿದೆ ಮಹಾರಾಷ್ಟ್ರದಲ್ಲಿ 61 ಮತ್ತು ಉತ್ತರ ಪ್ರದೇಶದಲ್ಲಿ 25 ಜನ ಹುಲಿ ದಾಳಿಗೆ ಬಲಿಯಾಗಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ವಿದ್ಯುದಾಘಾತದಿಂದ 222 ಆನೆಗಳು ಸಾವನ್ನಪ್ಪಿವೆ ಒಡಿಶಾ, ತಮಿಳುನಾಡು ಮತ್ತು ಅಸ್ಸಾಂನಲ್ಲಿ ಕ್ರಮವಾಗಿ 41, 34 ಮತ್ತು 33 ಇಂತಹ ಸಾವುಗಳು ವರದಿಯಾಗಿವೆ ನಂತರ ರೈಲು ಅಪಘಾತದಲ್ಲಿ 45 ಆನೆಗಳು ಸಾವನ್ನಪ್ಪಿವೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ 12 ಮತ್ತು 11 ಸಾವುಗಳು ಸಂಭವಿಸಿವೆ.
ಮೇಘಾಲಯದಲ್ಲಿ 12 ಮತ್ತು ಒಡಿಶಾದಲ್ಲಿ 7 ಆನೆಗಳು ಸೇರಿದಂತೆ 29 ಆನೆಗಳು ಬೇಟೆಯಿಂದ ಸಾವನ್ನಪ್ಪಿವೆ, ಆದರೆ ಈ ಅವಧಿಯಲ್ಲಿ 11 ಆನೆಗಳು ವಿಷ ಆಹಾರದಿಂದ ಸಾವನ್ನಪ್ಪಿವೆ.