ಗರೀಬ್ ಕಲ್ಯಾಣ್ ಯೋಜನೆಗೆ ಬೇಕು 108 ಮಿಲಿಯನ್ ಟನ್ ಆಹಾರ

Social Share

ಹೈದರಾಬಾದ್, ಅ.29- ದೇಶದ 80 ಕೋಟಿ ಜನರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತಿ ತಿಂಗಳು ನೀಡುವ 10 ಕೆಜಿ ಅಕ್ಕಿ ಅಥವಾ ಗೋಧಿಗಾಗಿ ಪ್ರತಿ ವರ್ಷ 108 ಮಿಲಿಯನ್ ಟನ್ ಆಹಾರ ಧಾನ್ಯಗಳ ಅಗತ್ಯವಿದೆ ಎಂದು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ತೆಲಂಗಾಣ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಫೆಡರೇಶನ್‍ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅಕಾಲಿಕ ಮಳೆಯಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

80 ಕೋಟಿ ಜನರು ಈಗಾಗಲೇ ಸುಮಾರು 5 ಕೆಜಿ ಅಥವಾ ಕಡು ಬಡ ಅಂತ್ಯೋದಯ ಕುಟುಂಬಗಳಿಗೆ 35 ಕೆಜಿಯಷ್ಟು ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಈ ಕೋಟಾಕ್ಕೆ ಹೆಚ್ಚುವರಿ 5 ಕೆಜಿ ಸೇರಿಸಲಾಗಿದೆ ಎಂದು ಸಚಿವರು ಹೇಳಿದರು.

ತಾರಕಕ್ಕೆರಿದ ಅಮೆರಿಕ-ಉತ್ತರ ಕೊರಿಯಾ ಶೀತಲ ಸಮರ

ಹೆಚ್ಚುವರಿ ಆಹಾರಧಾನ್ಯಗಳಿಗಾಗಿ ಪ್ರತಿ ತಿಂಗಳು 40 ಲಕ್ಷ ಟನ್‍ಗಳು ಬೇಕು. ಅದರ ಜೊತೆಗೆ 50 ಲಕ್ಷ ಟನ್ ಹೆಚ್ಚುವರಿ ಆಹಾರಗಳು ಬೇಕು. ಅಂದರೆ ನಮಗೆ ಪ್ರತಿ ತಿಂಗಳು 90 ಲಕ್ಷ ಟನ್‍ಗಳಷ್ಟು ಆಹಾರ ಧಾನ್ಯಗಳು ಬೇಕಾಗುತ್ತವೆ. ಆದ್ದರಿಂದ, ಒಂದು ವರ್ಷದಲ್ಲಿ ಅದು 108 ಲಕ್ಷ ಟನ್‍ಗಳಾಗುತ್ತದೆ ಎಂದಿದ್ದಾರೆ.

ಆದರೆ ಇಡೀ ಜಗತ್ತು ಇಂದು ಬಿಕ್ಕಟ್ಟಿನಲ್ಲಿದೆ, ಸರ್ಕಾರವು ಜನರಿಗೆ ಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕಾಗಿದೆ ಎಂದ ಗೋಯಲ್ ಅವರು, ಅಕ್ಕಿ ರಫ್ತಿನ ಮೇಲೆ 20 ಪರ್ಸೆಂಟ್ ಲೆವಿ ವಿಧಿಸಿರುವುದನ್ನು ಅವರು ಸಮರ್ಥಿಸಿಕೊಂಡರು.

ಪಾಕಿಸ್ತಾನವನ್ನು ಗ್ರೇ ಲಿಸ್ಟ್ ನಿಂದ ಮುಕ್ತಗೊಳಿಸುವ ಮುನ್ನ ಪರಾಮರ್ಶಿಸಬೇಕು : ಭಾರತ

ಕಳೆದ ವರ್ಷ ಮೊದಲ ಬಾರಿಗೆ ಭಾರತೀಯ ರಫ್ತು ದರ 675 ಬಿಲಿಯನ್ ಟನ್ ಆಗಿತ್ತು. ಸೆಪ್ಟೆಂಬರ್ ವರೆಗೆ, ನಾವು ಮೊದಲ ಆರು ತಿಂಗಳುಗಳಲ್ಲಿ ಸುಮಾರು ಶೇ. 17ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದೇವೆ ಮತು ಭಾರತದ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಅಂಗವಾಗಿ ನಾವು 750 ಶತಕೋಟಿ ಟನ್‍ಗೂ ಆಹಾರ ರಫ್ತು ಮಾಡಲು ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದರು.

Articles You Might Like

Share This Article