ವಿಮಾನ ನಿಲ್ದಾಣದಲ್ಲಿ ಸಿಖ್ ಚಾಲಕನ ಮೇಲೆ ಹಲ್ಲೆ : ಅಮೆರಿಕ ವಿಷಾದ

Social Share

ನ್ಯೂಯಾರ್ಕ್, ಜ.9- ಜಿಎಎಫ್‍ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಮೂಲದ ಸಿಖ್ ಕ್ಯಾಬ್ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಯಿತೆನ್ನುವ ವರದಿಗಳಿಂದ ತೀವ್ರ ಬೇಸರವಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ.
ದ್ವೇಷದ ಅಪರಾಧಗಳನ್ನೆಸಗುವವರು ಇಂಥ ಕೃತ್ಯಗಳಿಗೆ ಬೆಲೆ ತೆರಲೇಬೇಕಾಗುವುದು. ಇಂಥ ಅಪರಾಧಗಳು ಎಲ್ಲಿ ಸಂಭವಿಸುತ್ತವೆ ಎನ್ನುವುದು ಮುಖ್ಯವಲ್ಲ ಎಂದು ಅದು ಹೇಳಿದೆ.
ಈ ಸಿಖ್ ಚಾಲಕನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಪೇಟಾ ಕಿತ್ತುಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಘಟನೆ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಸಂಬವಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋ ಒಂದು ತಿಳಿಸಿದೆ.
ದಿನಾಂಕ ನಮೂದಾಗಿರದ 26 ಸೆಕೆಂಡ್‍ಗಳ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರರ ನವಜೋತ್‍ಪಾಲ್ ಕೌರ್ ಅವರು ಜನವರಿ 4ರಂದು ಮೈಕ್ರೋ ಬ್ಲಾಗಿಂಗ್ ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನು ದಾರಿಹೋಕರೊಬ್ಬರು ಚಿತ್ರೀಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Articles You Might Like

Share This Article