ಮುಂಬೈ,ಮೇ.12- ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ನಂತರ ಹೂಡಿಕೆದಾರರಿಗೆ ನಿರಾಳತೆಯನ್ನುಂಟು ಮಾಡಿದ್ದು, ಇಂದು ಷೇರು ಮಾರುಕಟ್ಟೆ ವಹಿವಾಟು ಅದ್ಭುತವಾಗಿ ಪ್ರಾರಂಭವಾಗಿ ಸೂಚ್ಯಂಕ ಭಾರಿ ಏರಿಕೆ ಕಂಡಿದೆ.
ಬೆಳಿಗ್ಗೆ 9:59 ರ ಸುಮಾರಿಗೆ ಬಿಎಸ್‌ಇ ಸೆನ್ಸೆಕ್‌್ಸ 2270.26 ಪಾಯಿಂಟ್‌ಗಳ ಏರಿಕೆಯಾಗಿ 81,724.73 ಕ್ಕೆ ತಲುಪಿತು, ಆದೇ ರೀತಿ ಎನ್‌ಎಸ್‌ಇ ನಿಫ್ಟಿ ಕೂಡ 50 714.10 ಪಾಯಿಂಟ್‌ಗಳ ಏರಿಕೆಯಾಗಿ 24,722.30 ಕ್ಕೆ ವಹಿವಾಟು ನಡೆಸಿತು.
ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಸಡಿಲಿಕೆ, ಸಕಾರಾತಕ ಜಾಗತಿಕ ಸೂಚನೆಗಳಿಂದ ಬಹುತೇಕ ಎಲ್ಲಾ ಕಂಪನಿಗಳ ಕ್ಷೇರು ಒಮಲೆ ಗಗನಕ್ಕೇರಿದವು ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ.
ಆಕ್ಸಿಸ್ ಬ್ಯಾಂಕ್, ಬಜಾಜ್‌ಫಿನ್‌ಸರ್ವ್, ಬಜಾಜ್ ಫೈನಾನ್ಸ್ , ಅದಾನಿ ಪೋರ್ಟ್ಸ್ ಮತ್ತು ರಿಲಯನ್ಸ್ ನಂತಹ ಹೆವಿವೇಯ್ಟ್ ಷೇರುಗಳು ಸಹ 4% ರಷ್ಟು ಏರಿತು.ವಾರಾಂತ್ಯದ ಬೆಳವಣಿಗೆಗಳಿಂದಾಗಿ ಷೇರು ಮಾರುಕಟ್ಟೆ ಬಲವಾದ ಚೇತರಿಕೆ ಕಾಣುವ ನಿರೀಕ್ಷೆಯಿದೆ ಎಂದು ಬಹುತೇಕ ಎಲ್ಲಾ ವಿಶ್ಲೇಷಕರು ಸೂಚಿಸಿದ್ದರು.
ಹೂಡಿಕೆದಾರರಲ್ಲಿ ಉತ್ಸಾಹ ಕಂಡುಬಂದಿದ್ದು ,ಕಳೆದ ವಾರದ ಕಹಿ ಅನುಭವ ಮರೆತಂತಾಗಿದೆ .ಆದರೆ ಭಾರತ -ಪಾಕ್ ನಡುವೆ ಇಂದು ನಡೆಯುವ ಮಾತುಕತೆ ಮತ್ತು ನಂತರ ಬೆಳವಣಿಗೆ ಭಾರಿ ಮಹತ್ವ ಪಡೆದಿದೆ.