ಸವಾಲುಗಳನ್ನು ಮೆಟ್ಟಿ ನಿಂತರೆ ಸಮಗ್ರ ಅಭಿವೃದ್ಧಿ: ಪ್ರಧಾನಿ ಮೋದಿ

Social Share

ನವದೆಹಲಿ,ಮಾ.2- ಜಾಗತಿಕ ಸವಾಲುಗಳು, ಬೌಗೋಳಿಕ ರಾಜಕೀಯ ಸಂಘರ್ಷ ಮೀರಿ ಪರಸ್ಪರ ಒಮ್ಮತದ ಮೂಲಕ ಜಿ-20 ಶೃಂಗ ರಾಷ್ಟ್ರಗಳು ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಜಿ-20 ಶೃಂಗದ ಭಾರತೀಯ ಅಧ್ಯಕ್ಷೀಯ ಅವ ಭಾಗವಾಗಿ ಆಯೋಜಿಸಲಾಗಿರುವ ವಿದೇಶಾಂಗ ಸಚಿವರ ಸಭೆಯಲ್ಲಿ ಮೋದಿ ತಮ್ಮ ವೀಡಿಯೊ ಸಂದೇಶದ ಭಾಷಣ ಮಾಡಿದರು.

ತಮ್ಮ ಭಾಷಣದಲ್ಲಿ ಮಹಾತ್ಮ ಗಾಂಧಿ ಮತ್ತು ಬುದ್ಧರನ್ನು ಪ್ರಧಾನಿ ಉಲ್ಲೇಖಿಸಿದರು. ನಮ್ಮನ್ನು ವಿಭಜಿಸುವುದರ ಮೇಲೆ ಗಮನ ಕೇಂದ್ರೀಕರಿಸದೆ, ನಮ್ಮನ್ನು ಒಂದುಗೂಡಿಸುವ ಬಗ್ಗೆ ಭಾರತದ ನಾಗರಿಕತೆಯ ನೀತಿಯಿಂದ ಸೂರ್ತಿ ಪಡೆಯುವಂತೆ ಅವರು ವಿದೇಶಾಂಗ ಸಚಿವರನ್ನು ಒತ್ತಾಯಿಸಿದರು.

ಮಹಿಳೆಯರು, ಮಕ್ಕಳು ಸುರಕ್ಷಿತವಲ್ಲದಾಗ ಸಂಭ್ರಮ ಔಚಿತ್ಯವಲ್ಲ: ಕಿರಣ್ ರಿಜಿಜು

ವಿಶ್ವದ ಅತಿದೊಡ್ಡದಾಗಿ ಕೈಗಾರಿಕೀಕರಣಗೊಂಡ ರಾಷ್ಟ್ರಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ವಿದೇಶಾಂಗ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು. ಪ್ರಮುಖ ಜಾಗತಿಕ ಸವಾಲುಗಳ ಕುರಿತು ನಿರ್ಣಾಯಕ ಚರ್ಚೆಗಳನ್ನು ಸಭೆಯಲ್ಲಿ ನಡೆಸಲಾಗಿದೆ. ರಷ್ಯಾ-ಉಕ್ರೇನ್ ಸಂಘರ್ಷ, ಚೀನಾ ಆಕ್ರಮಣಗಳು, ಅಮೆರಿಕಾ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಿನ ಭೌಗೋಳಿಕ ರಾಜಕೀಯ ಸಂಘರ್ಷದಿಂದ ವಿವಾದಗಳು ಸೃಷ್ಟಿಯಾಗಬಹುದು ಎಂದು ರಾಜತಾಂತ್ರಿಕರು ವಿಶ್ಲೇಷಣೆ ನಡೆಸಿದ್ದರು.

ಅದನ್ನು ಮೀರಿ ಪ್ರಧಾನಿ ಒಗ್ಗೂಡುವಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಭಯೋತ್ಪಾದನೆ, ಆಹಾರ-ಇಂಧನ ಭದ್ರತೆ, ಬೆಳವಣಿಗೆ, ಅಭಿವೃದ್ಧಿ, ಆರ್ಥಿಕ ಸ್ಥಿತಿಸ್ಥಾಪಕತ್ವ, ವಿಪತ್ತು ಸ್ಥಿತಿಸ್ಥಾಪಕತ್ವ, ಆರ್ಥಿಕ ಸ್ಥಿರತೆ, ಪರಿವರ್ತಿತ ರಾಷ್ಟ್ರೀಯ ಅಪರಾಧ, ಭ್ರಷ್ಟಾಚಾರದ ಸವಾಲುಗಳನ್ನು ಸರಾಗಗೊಳಿಸಲು ಜಗತ್ತು ಜಿ-20 ಶೃಂಗದತ್ತ ನೋಡುತ್ತಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಈ ಎಲ್ಲಾ ಕ್ಷೇತ್ರಗಳಲ್ಲಿ ಒಮ್ಮತವನ್ನು ನಿರ್ಮಿಸುವ ಮತ್ತು ಸಮಗ್ರ ಫಲಿತಾಂಶಗಳನ್ನು ನೀಡುವ ಸಾಮಥ್ರ್ಯವನ್ನು ಜಿ-20 ಶೃಂಗ ಹೊಂದಿದೆ. ನಾವು ಒಟ್ಟಾಗಿ ಸಾಧ್ಯವಾದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ. ಬೇರೆ ರೀತಿಯ ಸಮಸ್ಯೆಗಳು ನಮ್ಮ ದಾರಿಗೆ ಅಡ್ಡಲಾಗಿ ಬರಲು ಅವಕಾಶ ನೀಡಬಾರದು ಉಕ್ರೇನ್ ಅಥವಾ ಇತರ ಸಂಘರ್ಷಗಳನ್ನು ಉಲ್ಲೇಖಿಸದೆ ಪರೋಕ್ಷವಾಗಿ ಪ್ರಧಾನಿ ಹೇಳಿದರು.

ಸಿದ್ದರಾಮಯ್ಯ ವಿಡಿಯೋ ವೈರಲ್, ರೊಚ್ಚಿಗೆದ್ದ ಬಿಜೆಪಿ

ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಚೀನಾದ ಕ್ವಿನ್ ಗ್ಯಾಂಗ್, ಬ್ರಿಟನ್‍ನ ಜೇಮ್ಸ್ ಕ್ಲೆರ್ಲಿ ಮತ್ತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಉನ್ನತ ಪ್ರತಿನಿ ಜೋಸೆಪ್ ಬೊರೆಲ್ ಫಾಂಟೆಲ್ಸ್ ಮತ್ತಿತರರು ಸಮಾವೇಶದಲ್ಲಿ ಭಾಗವಹಿಸಿದ್ದರು.

India, PM Modi, urges, G20, foreign, ministers, overcome, differences,

Articles You Might Like

Share This Article