ಭಾರತದಲ್ಲಿ 8 ಲಕ್ಷದ ಒಳಗೆ ಕುಸಿದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ

Social Share

ನವದೆಹಲಿ, ಫೆ.10- ದೇಶದಲ್ಲಿ ದೈನಂದಿನ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವಂತೆಯೇ, ಸಕ್ರಿಯ ಪ್ರಕರಣಗಳು ಕ್ಷೀಣಿಸಿವೆ. ನಿನ್ನೆ 67,084 ಹೊಸ ಪ್ರಕರಣಗಳು ಕಂಡು ಬಂದಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿನ ಸಂಖ್ಯೆ 4,24,78,060 ಏರಿಕೆಯಾಗಿದೆ.
ಸಮಾದಾನಕರ ಅಂಶವೆಂದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 7,90,789 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ. ಆದರೆ ಕೋವಿಡ್ ಸಾವಿನ ಸಂಖ್ಯೆಗಳು ಯಥಾರೀತಿ ಮುಂದುವರೆದಿರುವುದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ 1,241 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಒಟ್ಟು ಸಂಖ್ಯೆ 5,06,520 ಕ್ಕೆ ಏರಿದೆ ಎಂದು ತಿಳಿಸಲಾಗಿದೆ.
ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ ಸಂಖ್ಯೆ ಶೇ.1.86ರಷ್ಟಿದೆ. ರಾಷ್ಟ್ರೀಯ ಚೇತರಿಕೆ ದರ ಶೇ.96.95 ಸುಧಾರಿಸಿದೆ. 24 ಗಂಟೆಗಳ ಅವಧಿಯಲ್ಲಿ 1,02,039 ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ. ದಿನದ ಪಾಸಿಟಿವಿಟಿ ದರ ಶೇ.4.44ರಷ್ಟಿದೆ. ಸಾಪ್ತಾಹಿಕ ಧನಾತ್ಮಕ ದರವು ಶೇಕಡಾ 6.58 ರಷ್ಟಿದೆ. ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,11,80,751ರಷ್ಟು. ಸಾವಿನ ಪ್ರಮಾಣ ಶೇ.1.19ರಷ್ಟು ಎಂದು ತಿಳಿಸಲಾಗಿದೆ.
ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನದಡಿಯಲ್ಲಿ ಇದುವರೆಗೆ 171.28 ಕೋಟಿ ಡೋಸ್‍ಗಳನ್ನು ನೀಡಲಾಗಿದೆ. ದಿನದ 1,241 ಸಾವಿನ ಪ್ರಕರಣಗಳ ಪೈಕಿ ಕೇರಳದಲ್ಲಿ 854, ಮಹಾರಾಷ್ಟ್ರದಲ್ಲಿ 92 ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 5.06 ಲಕ್ಷ ಸಾವಿನಲ್ಲಿ ಈವರೆಗೂ ಮಹಾರಾಷ್ಟ್ರ 1,43,247, ಕೇರಳ 60,793, ಕರ್ನಾಟಕ 39,495, ತಮಿಳುನಾಡು 37,837, ದೆಹಲಿ 26,023, ಉತ್ತರ ಪ್ರದೇಶ 23,359 ಮತ್ತು ಪಶ್ಚಿಮ ಬಂಗಾಳದಲ್ಲಿ 20,912 ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ.

Articles You Might Like

Share This Article