ನವದೆಹಲಿ, ಫೆ.5- ಭಾರತದಲ್ಲಿ ಹೊಸದಾಗಿ 1,27,952 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಕೋವಿಡ್-19 ಪ್ರಕರಣಗಳ ಸಂಖ್ಯೆ 4,20,80,664ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು ಇನ್ನಷ್ಟು ಇಳಿಕೆ ಕಂಡಿದ್ದು, 13,31,648ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ತಿಳಿಸಿದೆ.
ನಿನ್ನೆ ಒಂದೇ ದಿನ 1059 ಜನರು ಕೊರೊನಾಗೆ ಬಲಿಯಾಗಿದ್ದು, ಒಟ್ಟಾರೆ ಕೋವಿಡ್ ಮರಣ ಸಂಖ್ಯೆ 5,01,114ಕ್ಕೇರಿದೆ. ಒಟ್ಟಾರೆ ಸೋಂಕಿನ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.3.16ರಷ್ಟಿದೆ. ಕಳೆದ 24 ಗಂಟೆಗಳ ಅವಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ 1,03,921ರಷ್ಟು ಇಳಿಕೆ ಕಂಡುಬಂದಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ಪ್ರಮಾಣ ಶೇ.95.64ಕ್ಕೆ ಏರಿದೆ ಎಂದು ಸಚಿವಾಲಯ ಹೇಳಿದೆ.
ದೈನಿಕ ಪಾಸಿಟಿವಿಟಿ ದರ ಶೇ.7.98ರಷ್ಟಿದ್ದು, ವಾರದ ಪಾಸಿಟಿವಿಟಿ ದರ 11.21 ಪ್ರತಿಶತದಷ್ಟು ದಾಖಲಾಗಿದೆ. ಕೋವಿಡ್‍ನಿಂದ ಚೇತರಿಸಿಕೊಂಡವರ ಪ್ರಮಾಣ 4,02,47,902ಕ್ಕೆ ಹೆಚ್ಚಿದೆ. ಮರಣ ದರ ಶೇ.1.19ರಷ್ಟಿದೆ ಎಂದು ಸಚಿವಾಲಯ ವಿವರಿಸಿದೆ. ಇದುವರೆಗೆ ದೇಶದಲ್ಲಿ ಹಾಕಲಾಗಿರುವ ಕೋವಿಡ್ ಲಸಿಕೆಗಳ ಡೋಸ್‍ಗಳ ಸಂಖ್ಯೆ 168.98 ಕೋಟಿ ದಾಟಿದೆ.
