ಮತ್ತೆ ಕೊರೊನಾ ಕಾಟ, ಸೋಂಕಿಗೆ ಮತ್ತೊಬ್ಬ ಬಲಿ

Social Share

ನವದೆಹಲಿ,ಜ.9- ದೇಶದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಕಾಣಿಸಿಕೊಳ್ಳತೊಡಗಿದೆ. ಕಳೆದ 24 ಗಂಟೆಗಳಲ್ಲಿ 170 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಓರ್ವ ಸೋಂಕಿನಿಂದ ಮೃತಪಟ್ಟಿದ್ದಾನೆ.
ಹೀಗಾಗಿ ಸಕ್ರಿಯ ಸೋಂಕಿನ ಪ್ರಕರಣಗಳ ಸಂಖ್ಯೆ 0.01 ರಷ್ಟಕ್ಕೆ ಏರಿಕೆಯಾಗಿದೆ.

ಇಂದು ಒಂದೇ ದಿನ 170 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 4.46 ಕೋಟಿಗೆ ಏರಿಕೆಯಾಗಿದೆ. ಇದರ ಜತೆಗೆ ಸಾವಿನ ಸಂಖ್ಯೆ 5,30,721 ರಷ್ಟಿದ್ದು, ಮಧ್ಯಪ್ರದೇಶದಲ್ಲಿ ಮತ್ತೊಂದು ಸಾವು ವರದಿಯಾಗಿದೆ.

ಸಂಕ್ರಾಂತಿ ನಂತರ ಬಿಜೆಪಿ ಕಾರ್ಯಕಾರಿಣಿ, ಚುನಾವಣಾ ಕಾರ್ಯತಂತ್ರ

ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳ ಶೇಕಡಾ 0.01 ರಷ್ಟಿದ್ದರೆ, ಕೋವಿಡ್ 19 ಚೇತರಿಕೆಯ ಪ್ರಮಾಣವು ಶೇಕಡಾ 98.80 ಕ್ಕೆ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

India, reports, 170 new, coronavirus, cases, 1 death,

Articles You Might Like

Share This Article