ದೇಶದಾದ್ಯಂತ ಹೆಚ್ಚುತ್ತಿದೆ ಕೊರೋನಾ ಸಾವಿನ ಸಂಖ್ಯೆ, 24 ಗಂಟೆಯಲ್ಲಿ 959 ಸಾವು..!

Social Share

ನವದೆಹಲಿ, ಜ-31- ದೇಶದಲ್ಲಿ ಒಂದೇ ದಿನ 2,09,918 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು 959 ಸಾವನ್ನಪ್ಪಿದ್ದಾರೆ.ಕಳೆದ ಮೂರು ದಿನದಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳ ಮೂಡಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು ಕೊರೊನಾ ಬಾತರ ಸಂಖ್ಯೆ 4.13 ಕೋಟಿಗೆ ಏರಿದೆ. ಸಾವಿನ ಸಂಖ್ಯೆ 4,95,050 ಕ್ಕೆ ಏರಿದೆ ಎಂದು ತಿಳಿಸಲಾಗಿದೆ.
ಸಕ್ರಿಯ ಪ್ರಕರಣಗಳು 53,669 ರಷ್ಟು ಕಡಿಮೆಯಾಗಿ 18,31,268 ಕ್ಕೆ ತಲುಪಿದೆ ಚೇತರಿಕೆಯ ಪ್ರಮಾಣವು ಶೇಕಡಾ 94.37 ರಷ್ಟಿದೆ .ಕೇರಳದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ.ರಾಜ್ಯದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸೂಚಿಸಿದೆ.ಮೆಟ್ರೂ ನಗರಗಳಲ್ಲಿ ಬಿಗಿ ಕ್ರಮ ಅವಶ್ಯಕ ಎಂದು ಹೇಳಿದೆ. ಏತನ್ಮಧ್ಯೆ, ದೇಶದಲ್ಲಿ ಇದುವರೆಗೆ ನೀಡಲಾದ ಲಸಿಕೆ ಪಡೆದವರ ಸಂಖ್ಯೆ 166.03 ಕೋಟಿ ದಾಟಿದೆ.

Articles You Might Like

Share This Article