ಭಾರತದಲ್ಲಿ 24 ಗಂಟೆಯಲ್ಲಿ 2.38 ಲಕ್ಷ ಮಂದಿಗೆ ಕೊರೋನಾ, 310 ಸಾವು..!

Social Share

ನವದೆಹಲಿ,ಜ.18- ಕಳೆದ 24 ತಾಸಿನ ವೇಳೆ ದೇಶದಲ್ಲಿ 2,38,018 ಜನರಿಗೆ ಕೊರೊನಾ ಕಣಿಸಿಕೊಂಡಿದೆ.310 ಜನರು ಸಾವನ್ನಪಿದ್ದಾರೆ. ಸತತ 3 ದಿನದಿಂದ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದೆ.ಭಾನುವಾರಕ್ಕೆ ಹೋಲಿಸಿದರೆ ದೈನಂದಿನ ಪ್ರಕರಣಗಳು ಶೆ 7% ರಷ್ಟು ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದೇ ವೇಳೆ ಓಮಿಕ್ರಾನ್ ರೂಪಾಂತರದ ಸೋಂಕಿತರ ಸಂಖ್ಯ 8,891 ಮುಟ್ಟಿದೆ .ಮುನೆಚ್ಚರಿಕ ಕ್ರಮಗಳಿಂದ ಸೋಂಕು ಕಮ್ಮಿಯಾಗಿರಬಹುದು ಆದರೆ ಮುಂದಿನ ತಿಂಗಳು ಏರಿಕೆ ಕಾಣಬಹುದು ಎಂದು ತಿಳಿಸಲಾಗಿದೆ .ರಾಜಧಾನಿ ದೆಹಲಿ ,ಮುಂಬೈನಲ್ಲಿ ಸೋಂಕು ಕಮ್ಮಿಯಾಗುತ್ತಿದೆ.
ಸಕ್ರಿಯ ಪ್ರಕರಣಗಳು ಶೇ.4.62 ಇದ್ದರೆ , ಚೇತರಿಕೆ ದರವು ಶೇ.94.09 ಕ್ಕೆ ಇಳಿದಿದೆ.ಬರುವ ದಿನಗಳು ಎಚ್ಚರಿಕೆ ವಹಿಸಬೇಕಾಗಿದ್ದು ಜನರು ಮಾಸ್ಕ್ ಹಾಗು ಅಂತರ ಕಾಪಾಡುವುದು ,ಗುಂಪು ಸೇರದಂತೆ ತಡೆಯಬೇಕಿದೆ ಇನ್ನು ಕೆಲ ದಿನ ಸಭೆ ,ಸಮಾರಂಭ ಬಂದ್ ಮಾಡಬೇಕು ಎಂದು ರಾಜ್ಯಸರ್ಕಾರಗಳಿಗೆ ಸಲಹೆ ನೀಡಲಾಗಿದೆ.
ಪ್ರತಿ ದಿನ ದೇಶದಲ್ಲಿ 2.50 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತಿರುವುದು ಕಡಾ ಕಳವಳಕಾರಿ ಆದರೆ ಜನರು ಸಹಕಾರ ನೀಡಿ ನಿಯಮ ಪಾಲಿಸಿದರೆ ಕೊರೊನಾ ಬೇಗ ನಿಯಂತ್ರಿಸಬಹುದು

Articles You Might Like

Share This Article