ಭಾರತದಲ್ಲಿ ಕೊರೋನಾ ಸುನಾಮಿ, ಒಂದೇ ದಿನ 2.47 ಲಕ್ಷ ಕೇಸ್, 380 ಸಾವು..!

Social Share

ನವದೆಹಲಿ, ಜ.13- ದಿನದಿಂದ ದಿನಕ್ಕೆ ದೇಶಾದ್ಯಂತ ಕೊರೊನಾ ಸೋಂಕಿನ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಲೇ ಇದೆ. ನಿನ್ನೆ ಒಂದೇ ದಿನದಲ್ಲಿ 2.47 ಲಕ್ಷ ಜನರಿಗೆ ಕೊರೊನಾ ಸೋಂಕು ವ್ಯಾಪಿಸಿದೆ. 380 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ನಿನ್ನೆ ಒಂದೇ ದಿನ 84,825 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ಸೋಂಕಿತರ ಸಂಖ್ಯೆ 11,17,531ಕ್ಕೆ ಏರಿಕೆಯಾಗಿದೆ. ದಿನವೊಂದಕ್ಕೆ ಶೇ.11.05ರಷ್ಟು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, 380 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿರುವುದು ಸೇರಿದಂತೆ ಒಟ್ಟು ಸಾವನ್ನಪ್ಪಿರುವವರ ಸಂಖ್ಯೆ 4,25,035ಕ್ಕೆ ಏರಿಕೆಯಾಗಿದೆ.
ಹಿಂದಿನ ದಿನಕ್ಕೆ ಹೋಲಿಸಿದರೆ ಸೋಂಕಿನ ಪ್ರಮಾಣ ಶೇ.27ರಷ್ಟು ಹೆಚ್ಚಾಗಿರುವುದು ಆತಂಕ ಸೃಷ್ಟಿಸಿದೆ. ಕೊರೊನಾ ಸೋಂಕಿನ ಜತೆ ರೂಪಾಂತರಿ ವೈರಸ್ ಓಮಿಕ್ರಾನ್ ಕೂಡ ದಿನದಿಂದ ದಿನಕ್ಕೆ ತನ್ನ ಆರ್ಭಟ ತೋರಿಸುತ್ತಿದೆ. ಓಮಿಕ್ರಾನ್ ಪೀಡಿತರ ಸಂಖ್ಯೆ 5488ಕ್ಕೆ ತಲುಪಿದೆ.
ದೆಹಲಿ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಕಂಡುಬರುತ್ತಿವೆ. ಸೋಂಕು ನಿಯಂತ್ರಣಕ್ಕಾಗಿ ಲಾಕ್‍ಡೌನ್, ವೀಕೆಂಡ್ ಕಫ್ರ್ಯೂ, ಶಾಲೆಗಳನ್ನು ಬಂದ್ ಮಾಡುವುದು ಸೇರಿದಂತೆ ವಿವಿಧ ಕ್ರಮಗಳನ್ನು ಆಯಾ ಸರ್ಕಾರಗಳು ಕೈಗೊಳ್ಳುತ್ತಿವೆ.
ಇದೇ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿದ್ದರೆ ತಿಂಗಳಾಂತ್ಯಕ್ಕೆ ಸಾವು-ನೋವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.

Articles You Might Like

Share This Article