ನವದೆಹಲಿ, ಜ.28- ಭಾರತದಲ್ಲಿ ಹೊಸದಾಗಿ 2,51,209 ಜನರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 4.06 ಕೋಟಿಗೂ ಅಧಿಕ ಮಟ್ಟ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 627 ಮಂದಿ ಕೋವಿಡ್‍ನಿಂದ ಮರಣಿಸುವುದರೊಂದಿಗೆ ಸಮಗ್ರ ಕೋವಿಡ್-19 ಮರಣಗಳ ಪ್ರಮಾಣ 4,92,327ಗೆ ಏರಿದೆ ಎಂದು ಸಚಿವಾಲಯ ಹೇಳಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 96,861ರಷ್ಟು ಕಡಿಮೆಯಾಗಿದ್ದು, 21,05,611ಕ್ಕೆ ತಲುಪಿದೆ. ಇದು ಒಟ್ಟಾರೆ ಸೋಂಕಿನ ಪೈಕಿ ಶೇ.5.18ರಷ್ಟಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿನ ಕೊರೊನಾ ಚೇತರಿಕೆ ಪ್ರಮಾಣ 93.60 ಪ್ರತಿಶತದಷ್ಟಿದೆ. ದೈನಿಕ ಪಾಸಿಟಿವಿಟಿ ದರ ಶೇ.15.88ರಷ್ಟಿದ್ದರೆ ವಾರದ ಪಾಸಿಟಿವಿಟಿ ದರ ಶೇ.17.47ರಷ್ಟಿದೆ ಎಂದು ಸಚಿವಾಲಯ ಅಂಕಿ-ಅಂಶ ಕೊಟ್ಟಿದೆ.
