ಭಾರತದಲ್ಲಿ ಕೊರೋನಾ 4ನೇ ಅಲೆ ಆತಂಕ, ಒಂದೇ ದಿನ 20 ಸಾವಿರ ಹೊಸ ಕೇಸ್

Social Share

ನವದೆಹಲಿ,ಜು.15- ನಾಲ್ಕನೇ ಅಲೆಯ ಆತಂಕ ಸೃಷ್ಟಿಸಿದ ಕೊರೊನಾ ಏರಿಳಿತಗಳ ನಡುವೆ ದೈನಂದಿನ ಸೋಂಕು 20 ಸಾವಿರ ದಾಟಿದ್ದು, 47 ಮಂದಿ ಪ್ರಾಣಾಹಾನಿಯಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ದಿನದ ವರದಿಯ ಪ್ರಕಾರ ನಿನ್ನೆ 20,030 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,37, 10,027ರಷ್ಟಾಗಿದೆ.

ಈ ನಡುವೆ ಸಕ್ರಿಯ ಪ್ರಕರಣಗಳು 1,39,073ರಷ್ಟಾಗಿದ್ದು, ಒಟ್ಟು ಸೋಂಕಿನಲ್ಲಿ 0.32ರಷ್ಟಾಗಿದೆ. 47 ಮಂದಿಯ ಸಾವಿನೊಂದಿಗೆ ಒಟ್ಟು ಮರಣದ ಪ್ರಮಾಣ ಶೇ.1.20ರಷ್ಟಾಗಿದ್ದು, ಈವರೆಗೂ 5,25,604 ಮಂದಿ ಜೀವ ಕಳೆದುಕೊಂಡಿದ್ದಾರೆ.

ದೈನಂದಿನ ಸೋಂಕಿನ ಪ್ರಮಾಣ ಶೇ.4.4ರಷ್ಟಾಗಿದೆ. ಈ ನಡುವೆ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೂ ಇಂದಿನಿಂದ ಉಚಿತವಾಗಿ ಮುಂಜಾಗ್ರತಾ ಲಸಿಕೆ ನೀಡುವ ಅಭಿಯಾನವನ್ನು ಆರಂಭಿಸಿದೆ.

Articles You Might Like

Share This Article