ನವದೆಹಲಿ, ಜುಲೈ 14 -ಭಾರತದಲ್ಲಿ ಕಳೆದ 24 ತಾಸಿನಲ್ಲಿ 20,000 ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, 38 ಮಂದಿ ಅಸುನೀಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ದೈನಂದಿನ ಕೋವಿಡ ಪ್ರಕರಣಗಳು 145 ದಿನಗಳ ಅಂತರದ ನಂತರ 20,000 ಕ್ಕಿಂತ ಹೆಚ್ಚು ದಾಖಲಾಗಿವೆ ಮತ್ತು ಸಕ್ರಿಯ ಪ್ರಕರಣಗಳು 1,36,076 ಕ್ಕೆ ಏರಿದೆ.
ಒಂದೇ ದಿನ ಒಟ್ಟು 20,139 ಜನರಿಗೆ ಕರೋನಾ ಪತ್ತೆ ವರದಿಯಾಗಿದ್ದು, ಇದುವರೆಗೆ ಸೋಂಕಿಗೆ ಒಳಗಾದವರು ಒಟ್ಟು ಸಂಖ್ಯೆ 4,36,89,989 ಏರಿದೆ.ಸಕ್ರಿಯ ಪ್ರಕರಣಗಳು ಕಳೆದ ದಿನಕ್ಕೆ ಹೊಲಿಸಿದರೆ 3,619 ಪ್ರಕರಣಗಳ ಹೆಚ್ಚಳ ದಾಖಲಾಗಿದೆ.
ಒಂದು ಕಡೆ ಭಾರಿ ಮಳೆ ದೇಶದ ಹಲವಡೆ ಸಂಕಷ್ಟ ತಂದರೆ ಇಮ್ಮೊಂದೆಡೆ ಕರೋನಾ ಹೆಚ್ಚಳವಾಗುತ್ತಿದೆ.ಈಶಾನ್ಯ ರಾಜ್ಯಗಳು ಸಹ ಸೋಂಕು ಉಲ್ಬಣವಾಗುತ್ತಿರುವುದು ಆತಂಕ ಮೂಡಿಸಿದೆ,ದೇಶದಲ್ಲಿ ಲಸಿಕೆ ಅಬಿಯಾನ ಮುಂದುವರೆದಿದ್ದು ಇನ್ನು ಕೆಲವೇ ದಿನದಲ್ಲಿ ಭಾರತ 200 ಕೋಟಿ ಡೋಸ್ ನೀಡಿಕೆ ವಿಶ್ವದಾಖಲೆ ಗುರಿ ದಾಟಲಿದೆ.