ನವದೆಹಲಿ,ಜ.2- ಭಾರತದಲ್ಲಿ ಇದುವರೆಗೆ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಒಟ್ಟಾರೆ 1,525 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಈ ಸೋಂಕಿತರ ಪೈಕಿ 560 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಗರಿಷ್ಠ (460) ಪ್ರಕರಣಗಳು ವರದಿಯಾಗಿವೆ. ದೆಹಲಿ (351), ಗುಜರಾತ್ (136), ತಮಿಳುನಾಡು (117) ಮತ್ತು ಕೇರಳ (109) ಅನಂತರದ ಸ್ಥಾನಗಳಲ್ಲಿವೆ.
ಕಳೆದ 24 ಗಂಟೆಗಳಲ್ಲಿ 27,553 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ದೇಶದ ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 3,48,89,132ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,22,801ಕ್ಕೆ ಏರಿಕೆಯಾಗಿದೆ.
ಕಳೆದ ಒಂದು ದಿನದಲ್ಲಿ 284 ಮಂದಿ ಕೋವಿಡ್ಗೆ ಬಲಿಯಾಗುವುದರೊಂದಿಗೆ ಒಟ್ಟಾರೆ ಕೋವಿಡ್-19 ಮರಣಗಳ ಸಂಖ್ಯೆ 4,81,770ಕ್ಕೆ ತಲುಪಿದೆ ಎಂದು ಸಚಿವಾಲಯ ಇಂದು ಬೆಳಗ್ಗೆ 8 ಗಂಟೆಗೆ ತಾಜಾ ಮಾಹಿತಿ ನೀಡಿದೆ.
