ಭಾರತದಲ್ಲಿ ಮತ್ತೆ ತೀವ್ರವಾಗಿ ಹೆಚ್ಚುತ್ತಿದೆ ಕರೋನಾ ಸೋಂಕಿತರ ಸಂಖ್ಯೆ..!
ನವದೆಹಲಿ, ಮೇ 1 -ಕಳೆದ ಒಂದು ದಿನದಲ್ಲಿ 3,324 ಕರೋನವೈರಸ್ ಸೋಂಕಿತರು ಪತ್ತೆಯಾಗಿದ್ದು,40 ಜನ ಸಾವನ್ನಪ್ಪಿದ್ದಾರೆ.ಸಕ್ರಿಯ ಪ್ರಕರಣಗಳ ಸಂಖ್ಯೆ 19,092 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇಂದು ಬೆಳಿಗ್ಗೆ 8 ಗಂಟೆಗೆ ವರಧೀ ಪ್ರಕಾರ ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ ಶೇಕಡಾ 0.04 ರಷ್ಟಿದ್ದರೆ, ರಾಷ್ಟ್ರೀಯ ಚೇತರಿಕೆ ಪ್ರಮಾಣವು ಶೇ.98.74 ಎಂದು ದಾಖಲಾಗಿದೆ ಪ್ರತಿ ದಿನ ಸೋಂಕಿತರ ಸಂಖ್ಯ ಏರುಗತಿಯಲ್ಲಿ ಸಾಗಿದೆ.
ಒಟ್ಟಾರೆ ಸಾವಿನ ಪ್ರಕರಣದ ಪ್ರಮಾಣವು ಶೇಕಡಾ 1.22 ರಷ್ಟಿದೆ ಎಂದು ತಿಳಿಸಲಾಗಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಡಿ ಇದುವರೆಗೆ 189.17 ಕೋಟಿ ಡೋಸ್ ಮೀರಿದೆ. ದೇಶದ ಬಹುತೇಖ ಎಲ್ಲಾ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಮತ್ತು ಸೋಂಕು ಪತ್ತೆ ಕೇಂದ್ರ ಮತ್ತೆ ಆರಂಭಗೊಂಡಿದೆ.ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೊಡಿಸಲಾಗುತ್ತಿದೆ.ಮುಂದಿನ ಕೆಲವೇ ವಾರದಲ್ಲಿ ಸೋಂಕು ಹೆಚ್ಚಾಗಲಿದೆ ಎಂದು ಆರೋಗ್ಯ ಅಕಾರಿಗಳು ತಿಳಿಸಿದ್ದಾರೆ.
Facebook Comments