ನವದೆಹಲಿ, ಫೆ. 9- ಕಳೆದ 24 ತಾಸಿನಲ್ಲಿ ಭಾರತದಲ್ಲಿ 71,365 ಜನರಿಗೆ ಹೊಸ ಕೊರೊನಾ ಸೋಂಕು ತಗುಲಿದೆ. 1,217 ಮಂದಿ ಕೊನೆಯುಸಿರೆಳೆದಿದ್ದಾರೆ.ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದ ಒಟ್ಟು ಸೋಂಕಿತರ ಸಂಖ್ಯೆ 4,24,10,976 ಕ್ಕೆ ತಲುಪಿದೆ, ಸಾವಿನ ಸಂಖ್ಯೆ 5,05,279 ಕ್ಕೆ ಏರಿದೆ ಎಂದು ತಿಳಿಸಿದೆ. ಚೇತರಿಕೆ ದರವು ಶೇ 96 ರಷ್ಟಿದೆ ನಿನ್ನೆಯ ವರದಿಗೆ ಹೋಲಿಸಿದರೆ ಸೋಂಕಿತರು ಹಾಗು ಸಾವನ್ನಪಿದವರ ಸಂಖ್ಯೆತುಸು ಏರಿಕೆಯಾಗಿದೆ.
24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಪ್ರಕರಣ 1,02,063 ಕ್ಕೆ ದಾಖಲಿಸಲಾಗಿದೆ. ಆದರೂ ಆತಂಕದ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿನ ಬಗ್ಗೆ ನಿರ್ಲಕ್ಷ್ಯ ಸಲ್ಲದ್ದು ಎಂದು ಎಚ್ಚರಿಸಿದ್ದಾರೆ. ಇನ್ನು ಕೆಲವು ದಿನ ನಿಯಮ ಪಾಲಿಸಿ ಎಂದು ಮನವಿ ಮಾಡಿದ್ದಾರೆ. ಕೇರಳದಲ್ಲಿ ಹೆಚ್ಚು ಸೋಂಕಿತರು ಬಲಿಯಾಗಿದ್ದು ಗಡಿ ರಾಜ್ಯಗಳಲ್ಲಿ ಹೆಚ್ಚಿನ ನಿಗ ವಹಿಸುವಂತೆ ತಿಳಿಸಿದ್ದಾರೆ.
