ನವದೆಹಲಿ, ಜ.6 , ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 90,928 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಾಗಿದ್ದು, ಇದೇ ಅವಧಿಯಲ್ಲಿ 325 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಅರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಮೂಲಕ ಭಾರತದಲ್ಲಿ ಕರೋನ ಮೂರನೇ ಅಲೆ ಆರಂಭವಾಗಿದ್ದು, ದೇಶದಲ್ಲಿ ಅರೋಗ್ಯ ತುರ್ತು ಪರಸ್ಥಿತಿ ಎದುರಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಭಾರತದಲ್ಲಿ ದೈನಂದಿನ ಧನಾತ್ಮಕತೆಯ ಪ್ರಮಾಣವು 6.43 ಪ್ರತಿಶತದಷ್ಟಿದೆ. ಕೋವಿಡ್ ಸಕ್ರಿಯ ಪ್ರಕರಣಗಳ ಈಗ 2,85,401 ಏರಿಕೆ ಆಗಿದೆ.
ಇವರೆಗೂ ಸಾಂಕ್ರಾಮಿಕ ರೋಗಕ್ಕೆ 4,82,876 ಜನರು ಬಲಿಯಾಗಿದ್ದು, 3,43,41,009 ಮಂದಿ ಚೇತರಿಕೆ ಯಾಗಿದ್ದಾರೆ.ಇದುವರೆಗೆ ರಾಷ್ಟ್ರದಾದ್ಯಂತ 148.67 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 26,538 ಹೊಸ ಕೋವಿಡ್ -19 ಪ್ರಕರಣಗಳು ಮತ್ತು ಎಂಟು ಸಾವುಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಬುಲೆಟಿನ್ ಬುಧವಾರ ತಿಳಿಸಿದೆ. ದೇಶದಲ್ಲೇ ಅತೀ ಹೆಚ್ಚು ಮುಂಬೈ ನಲ್ಲಿ ವರದಿಯಾಗಿದ್ದು ನಿನ್ನೆ 15,166 ಹೊಸ ಪ್ರಕರಣಗಳು ದೃಢ ಪಟ್ಟಿದೆ.
ದೆಹಲಿಯಲ್ಲಿ ಬುಧವಾರ 10,665 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ, ಇದು ಹಿಂದಿನ ದಿನ ದಾಖಲಾದ ಸೋಂಕುಗಳ ದ್ವಿಗುಣವಾಗಿದೆ, ಧನಾತ್ಮಕತೆಯ ದರವು ಶೇಕಡಾ 11.88 ಕ್ಕೆ ಏರಿದೆ ಎಂದು ದೆಹಲಿ ಆರೋಗ್ಯ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.
