ಶ್ರೀಲಂಕಾಕ್ಕೆ 2 ವಿಕೆಟ್‍ಗಳ ಸೋಲು : ಟೆಸ್ಟ್ ಫೈನಲ್‍ಗೇರಿದ ಭಾರತ

Social Share

ಕ್ರಿಸ್ಟ್‍ಚರ್ಚ್, ಮಾ. 13- ನ್ಯೂಜಿಲೆಂಡ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಶ್ರೀಲಂಕಾ ತಂಡವು 2 ವಿಕೆಟ್‍ಗಳ ಸೋಲು ಕಾಣುವ ಮೂಲಕ ಐಸಿಸಿ ಆಯೋಜನೆಯ 2ನೇ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್‍ಗೇರುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.

ಶ್ರೀಲಂಕಾದ ಈ ಸೋಲಿನಿಂದಾಗಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಫಲಿತಾಂಶಕ್ಕೆ ಕಾಯದೆಯೇ ಫೈನಲ್‍ಪಂದ್ಯದ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2 ಟೆಸ್ಟ್‍ಗಳಲ್ಲೂ ಶ್ರೀಲಂಕಾ ಕ್ಲೀನ್ ಸ್ವೀಪ್ ಮಾಡಿದ್ದರೆ ಆಗ ಫೈನಲ್‍ನಲ್ಲಿ ಆಡುವ ಅವಕಾಶ ಪಡೆಯಬಹುದಿತ್ತು. ಟೆಸ್ಟ್ ಸ್ವರೂಪದ ನಂಬರ್ 1 ತಂಡವಾಗಿರುವ ಆಸ್ಟ್ರೇಲಿಯಾ ಈಗಾಗಲೇ ಫೈನಲ್ ಹಂತ ತಲುಪಿದೆ.

ರಾಜ್ಯದಲ್ಲಿ ಮೋದಿ ಸುನಾಮಿ ಜೋರಾಗಿದೆ : ಸಿಎಂ ಬೊಮ್ಮಾಯಿ

ಜೂನ್ 7 ರಂದು ಇಂಗ್ಲೆಂಡ್‍ನ ಓವೆಲ್ ಪಿಚ್‍ನಲ್ಲಿ ನಡೆಯಲಿರುವ ನಡೆಯಲಿರುವ ಐಸಿಸಿ ಆಯೋಜನೇಯ 2ನೇ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವು ಆಸ್ಟ್ರೇಲಿಯಾದ ಸವಾಲವನ್ನು ಎದುರಿಸಲಿದೆ.

ವಿಲಿಯಮ್ಸನ್ ಶತಕ:
ಶ್ರೀಲಂಕಾ ನೀಡಿದ 285 ರನ್‍ಗಳ ಗುರಿ ಪಡೆದ ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರ ಆಕರ್ಷಕ ಶತಕ (121*, 11 ಬೌಂಡರಿ, 1 ಸಿಕ್ಸರ್) ನೆರವಿನಿಂದ ಪಂದ್ಯದ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿ 2 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿತು.

ಮೆಂಟಲ್ ಗಿರಾಕಿಗಳ ಬಗ್ಗೆ ಪ್ರತಿಕ್ರಿಯೆ ನೀಡಲ್ಲ : ಡಿಕೆಶಿ

ಪಂದ್ಯದ ಅಂತಿಮ ದಿನವಾ ಇಂದು ಆರಂಭದಲ್ಲೇ ಮಳೆ ಕಾಟ ಶುರುವಾಯಿತಾದರೂ ನಂತರ ಆರಂಭಗೊಂಡ ಪಂದ್ಯದಲ್ಲಿ ನ್ಯೂಜಿಲೆಂಡ್‍ನ ವಿಲಿಯಮ್ಸನ್‍ರ ಶತಕ ಹಾಗೂ ಡೇರೆಲ್ ಮಿಚೆಲ್( 81 ರನ್, 3 ಬೌಂಡರಿ, 4 ಸಿಕ್ಸರ್)ರ ಆಕರ್ಷಕ ಅರ್ಧಶತಕದ ನೆರವಿನಿಂದ ಗೆಲುವು ದಡ ಮುಟ್ಟಿತು.

ಶ್ರೀಲಂಕಾ ಪರ ಅಸಂತಾ ಫರ್ನಾಂಡೋ 4 ವಿಕೆಟ್ ಕೆಡವಿದರೆ, ಕುಶಾನ್ ರಂಜಿತ (2) ಹಾಗೂ ಲಹಿರು ಕುಮಾರಾ (3) ವಿಕೆಟ್ ಕಬಳಿಸಿದರು.

ಪಂದ್ಯದಲ್ಲಿ 183 ರನ್ ಗಳಿಸಿದ ಡೇರೆಲ್ ಮಿಚೆಲ್ ಪಂದ್ಯಶ್ರೇಷ್ಠರಾದರು.

India, secure, WTC, final, berth, New Zealand, beat, Sri Lanka,

Articles You Might Like

Share This Article