ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವತ್ತ ಭಾರತ ದಾಪುಗಾಲು

Social Share

ನವದೆಹಲಿ,ಜ.19- ಹಲವು ದಶಕಗಳಿಂದಲೂ ಜನಸಂಖ್ಯೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಚೀನಾವನ್ನು ಹಿಂದುಕ್ಕುವ ನಿಟ್ಟಿನಲ್ಲಿ ಭಾರತ ಮುನ್ನುಗ್ಗುತ್ತಿದ್ದು, ಶೀಘ್ರವೇ ವಿಶ್ವದಲ್ಲಿ ಮೊದಲ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಾಗಿದೆ.

ನಿನ್ನೆಯವರಿಗಿನ ಅಂಕಿ ಅಂಶಗಳ ಪ್ರಕಾರ ಚೀನಾ ಮತ್ತು ಭಾರತದ ನಡುವಿನ ಜನಸಂಖ್ಯೆಯ ನಡುವೆ 3.89 ಕೋಟಿ ಮಾತ್ರ ವ್ಯತ್ಯಾಸವಿದೆ. ಚೀನಾ 145 ಕೋಟಿ ಜನರನ್ನು ಹೊಂದಿದ್ದರೆ, ಭಾರತ 141 ಕೋಟಿ ಜನಸಂಖ್ಯೆ ಹೊಂದಿದೆ. ಕಳೆದೆರಡು ವರ್ಷಗಳಲ್ಲಿ ಇದ್ದ 5.93 ಕೋಟಿ ಜನಸಂಖ್ಯೆಯ ಅಂತರ ಗಣನೀಯವಾಗಿ ತಗ್ಗಿ ಹೋಗಿದೆ.

1995ರಿಂದಲೂ ಅಲ್ಲಿನ ಸರ್ಕಾರ ಕೈಗೊಂಡ ಕ್ರಮಗಳ ಪ್ರಕಾರ ಪ್ರಸ್ತುತ ಜಾಗತಿಕ ಜನಸಂಖ್ಯೆಯಲ್ಲಿ ಚೀನಾ ಶೇ.18.47ರಷ್ಟು ಪಾಲು ಹೊಂದಿದ್ದು, ಮೊದಲನೇ ಸ್ಥಾನದಲ್ಲಿದಲ್ಲೇ ಇದೆ. ಆದರೆ ಅಲ್ಲಿ ಫಲವತತ್ತೆ ಪ್ರಮಾಣದಲ್ಲಿ ಕುಸಿತ ಕಂಡು ಬರುತ್ತಿದೆ. ಚೀನಾದ ಪ್ರತಿ ಮಹಿಳೆಯ ಫಲವತತ್ತೆ ಪ್ರಮಾಣ ಶೇ.1.69ರಷ್ಟಾಗಿದ್ದರೆ, ಭಾರತದಲ್ಲಿ ಶೇ.2.24ರಷ್ಟಿದೆ.

ವ್ಯಾನ್‍ಗೆ ಡಿಕ್ಕಿ ಹೊಡೆದ ಟ್ರಕ್, ಒಂಬತ್ತು ಮಂದಿ ಸಾವು

ಮತ್ತೊಂದು ಪ್ರಮುಖ ಅಂಶವನ್ನು ವಿಶ್ವಸಂಸ್ಥೆ ಗುರುತಿಸಿದ್ದು ಭಾರತ 29,73,190 ಚದುರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿದೆ. ಪ್ರತಿ ಚದುರ ಕಿಲೋ ಮೀಟರ್‍ಗೆ ದೇಶದ ಜನಸಾಂದ್ರತೆ 464 ಮಂದಿಯಷ್ಟಿದೆ. 93,88,211 ಚದುರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿರುವ ಚೀನಾದಲ್ಲಿ ಪ್ರತಿ ಚದುರ ಕಿಲೋ ಮೀಟರ್‍ಗೆ 153 ಮಂದಿ ಜನ ಸಾಂದ್ರತೆ ಇದೆ. ಜನಸಾಂದ್ರತೆಯಲ್ಲಿ ಭಾರತ ಮುಂದಿದೆ. ಎರಡು ದೇಶಗಳ ನಡುವೆ 311 ಮಂದಿಯಷ್ಟು ವ್ಯತ್ಯಾಸಗಳಿವೆ.

ಫಲವತತ್ತೆ ಹಾಗೂ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ಅಂದಾಜಿಸಿರುವ ವಿಶ್ವಸಂಸ್ಥೆ ಭಾರತ ಶೀಘ್ರದಲ್ಲೇ ಚೀನಾವನ್ನು ಹಿಂದಿಕ್ಕುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದೆ.

ಮತ್ತೊಂದೆಡೆ ಭಾರತದಲ್ಲಿ ಜನಸಂಖ್ಯೆ ಶಾಪವಲ್ಲ, ಅದನ್ನು ಕೌಶಲ್ಯ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸಿದರೆ ಕೈಗಾರಿಕೆ ಮತ್ತು ವಾಣಿಜ್ಯ ಉತ್ಪಾದನೆಯಲ್ಲಿ ಭಾರೀ ಲಾಭ ಪಡೆಯಬಹುದು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

India, overtake, China, population,

Articles You Might Like

Share This Article