ವಿಶ್ವಸಂಸ್ಥೆ,ಫೆ.24- ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉಕ್ರೇನ್ ಕುರಿತ ವಿಶೇಷ ಅವೇಶನದಲ್ಲಿ ಜಮ್ಮು-ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿರುವ ಭಾರತ ಭಯೋತ್ಪಾದಕರಿಗೆ ರಕ್ಷಣೆ ಮತ್ತು ಆಶ್ರಯ ಒದಗಿಸುವ ದೇಶದಿಂದ ಇಂತಹ ಮಾತುಗಳನ್ನು ನಿರೀಕ್ಷಿರಲಿಲ್ಲ ಎಂದು ತಿರುಗೇಟು ನೀಡಿದೆ.
ಪಾಕಿಸ್ತಾನದ ಚೇಷ್ಟೆಯ ಪ್ರಚೋದನೆಗಳಿಗೆ ಪ್ರತಿಕ್ರಿಯಿಸದಿರಲು ನಾವು ತೀರ್ಮಾನಿಸಿದ್ದೇವೆ. ವಿಶೇಷ ಸಭೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿರುವ ಪಾಕಿಸ್ತಾನದ ಪ್ರತಿನಿಗೆ ನಮ್ಮ ಸಲಹೆಯೆಂದರೆ, ನಾವು ಹಿಂದೆ ಚಲಾಯಿಸಿದ ನಮ್ಮ ಹಲವಾರು ಪ್ರತ್ಯುತ್ತರ ಹಕ್ಕುಗಳನ್ನು ಉಲ್ಲೇಖಿಸುವದಾಗಿದೆ ಎಂದು ಭಾರತದ ಖಾಯಂ ಮಿಷನ್‍ನ ಸಲಹೆಗಾರ ಪ್ರತೀಕ್ ಮಾಥುರ್ ಹೇಳಿದ್ದಾರೆ.
ತುರ್ತು ವಿಶೇಷ ಅವೇಶನದಲ್ಲಿ ಉಕ್ರೇನ್ ಕುರಿತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಮೇಲೆ ಮತದ ವಿವರಣೆಯನ್ನು ನೀಡುವಾಗ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಅವರು ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಉಲ್ಲೇಖಿಸಿದಕ್ಕೆ ಮಾಥುರ್ ಅವರು ಈ ತಿರುಗೇಟು ನೀಡಿದ್ದಾರೆ.
ಭಯೋತ್ಪಾದಕರಿಗೆ ಆಶ್ರಯ ನೀಡುವ ಮತ್ತು ಸುರಕ್ಷಿತ ನೆಲೆಗಳನ್ನು ಒದಗಿಸುವ ಪಾಕಿಸ್ತಾನವು ತನ್ನದೇ ಆದ ದಾಖಲೆಯನ್ನು ಮಾತ್ರ ನೋಡಬೇಕಾಗಿದೆ. ಎರಡು ದಿನಗಳ ತೀವ್ರ ಚರ್ಚೆಗಳ ನಂತರ ಇಂತಹ ಪ್ರಚೋದನೆಗೆ ಕರೆ ನೀಡದಿರುವುದು ವಿಶೇಷವಾಗಿ ವಿಷಾದನೀಯ ಮತ್ತು ಖಂಡಿತವಾಗಿಯೂ ತಪ್ಪಾಗಿದೆ. , ಸಂಘರ್ಷ ಮತ್ತು ಅಪಶ್ರುತಿಯನ್ನು ಪರಿಹರಿಸಲು ಶಾಂತಿಯ ಮಾರ್ಗವು ಏಕೈಕ ಮಾರ್ಗವಾಗಿದೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ ಎಂದು ಮಾಥುರ್ ತಿಳಿ ಹೇಳಿದರು.
#India, #slams, #Pakistan, #JammuAndKashmir, #UNGA #session, #Ukraine,