ಚುಟುಕು ವಿಶ್ವಕಪ್‍ಗೆ ಭಾರತ ತಂಡ ಪ್ರಕಟ : ಬಿಜಾಪುರದ ರಾಜೇಶ್ವರಿಗೆ ಸ್ಥಾನ

Social Share

ನವದೆಹಲಿ, ಜ. 6- ಮಹಿಳಾ ಚುಟುಕು ವಿಶ್ವಕಪ್‍ಗೆ ತಂಡವನ್ನು ಪ್ರಕಟಿಸಿದ್ದು ಕರ್ನಾಟಕದ ಬಿಜಾಪುರದ ರಾಜೇಶ್ವರಿ ಗಾಯಕ್‍ವಾಡ್ ಅವರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಳ್ಳಿಗಾಡಿನಿಂದ ಬಂದರೂ ಕೂಡ ಹುಟ್ಟಿನಿಂದಲೂ ಕ್ರಿಕೆಟ್ ಬಗ್ಗೆ ಒಲವು ಮೂಡಿಸಿಕೊಂಡಿದ್ದ ರಾಜೇಶ್ವರಿ ಗಾಯಕ್‍ವಾಡ್ ಅವರನ್ನು ಭಾರತ ತಂಡದಲ್ಲಿ ಆಡುವುದನ್ನು ನೋಡಬೇಕೆಂಬ ಬಯಕೆಯನ್ನು ಅವರ ತಂದೆ ಹೊಂದಿದ್ದರು. ಗಾಯಕ್‍ವಾಡ್ ಶ್ರೀಲಂಕಾ ವಿರುದ್ಧ ನಡೆಯುತ್ತಿದ್ದ ಚುಟುಕು ಸರಣಿಯ ವೇಳೆಯೇ ಅವರ ತಂದೆ ಶಿವಾನಂದ ಗಾಯಕ್‍ವಾಡ್ ಅವರು ಹೃದಯಾಘಾತದಿಂದ ಮೃತರಾದರು.
ರೈಲ್ವೇಸ್ ಉದ್ಯೋಗಿ ಯಾಗಿರುವ ಬಲಗೈ ಅರ್ಥೋಡಕ್ ಬೌಲರ್ ಆಗಿರುವ ರಾಜೇಶ್ವರಿ 2017ರಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‍ನಲ್ಲಿ ಭಾರತ ತಂಡವನ್ನು ಫೈನಲ್‍ಗೇರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರಲ್ಲದೆ ಪ್ರಶಸ್ತಿ ಸುತ್ತಿನ ಪಂದ್ಯದಲ್ಲೂ ತಮ್ಮ ಬೌಲಿಂಗ್ ಜಾದೂ ಪ್ರದರ್ಶಿಸಿದರಾದರೂ ಭಾರತ 9 ರನ್‍ಗಳಿಂದ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ಅವರು 10 ಓವರ್‍ಗಳಲ್ಲಿ 1 ಮೇಡಿನ್ ಮೂಲಕ 49 ರನ್ ನೀಡಿ 1 ರನ್ ಗಳಿಸಿದ್ದರು.
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 7.3 ಓವರ್‍ಗಳಲ್ಲಿ 15 ರನ್‍ಗಳನ್ನು ನೀಡಿ 5 ಪ್ರಮುಖ ವಿಕೆಟ್‍ಗಳನ್ನು ಕೆಡವುವ ಮೂಲಕ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ರಾಜೇಶ್ವರಿಯ ಇತ್ತೀಚಿನ ಆಟದ ವೈಖರಿಯನ್ನು ಪರಿಗಣಿಸಿ ಚುಟುಕು ವಿಶ್ವಕಪ್‍ನಲ್ಲಿ ಸ್ಥಾನ ಕಲ್ಪಿಸಲಾಗಿದ್ದು ಮುಂದಿನ ವಿಶ್ವಕಪ್‍ನಲ್ಲೂ ಅವರಿಂದ ಉತ್ತಮ ಸಾಧನೆ ಮೂಡಿಬರಲಿ.
# ಚುಟುಕು ವಿಶ್ವಕಪ್‍ಗೆ ಭಾರತ ತಂಡ ಪ್ರಕಟ: ಮಿಥಾಲಿ ನಾಯಕಿ, ಹರ್ಮನ್‍ಕೌರ್ ಉಪನಾಯಕಿ
ನವದೆಹಲಿ, ಜ. 6- ನ್ಯೂಜಿಲ್ಯಾಂಡ್‍ನಲ್ಲಿ ಮುಂದಿನ ವರ್ಷ ಮಾರ್ಚ್ 4 ರಿಂದ ಏಪ್ರಿಲ್ 3ರವರೆಗೂ ಜರುಗಲಿರುವ ಮಹಿಳೆಯರ ಚುಟುಕು ವಿಶ್ವಕಪ್‍ಗೆ ಬಿಸಿಸಿಐ ಇಂದು 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಭಾರತ ತಂಡದ ಹಿರಿಯ ಹಾಗೂ ಯಶಸ್ವಿ ನಾಯಕಿಯಾಗಿ ಬಿಂಬಿಸಿ ಕೊಂಡಿರುವ ಮಿಥಾಲಿ ರಾಜ್ ಅವರೇ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದು, ಖ್ಯಾತ ಬ್ಯಾಟರ್ ಹರ್ಮನ್‍ಪ್ರೀತ್‍ಕೌರ್ ಅವರಿಗೆ ಉಪನಾಯಕಿ ಪಟ್ಟವನ್ನು ನೀಡಲಾಗಿದೆ. ವೇಗದ ಬೌಲರ್ ಶಿಖಾಪಾಂಡೆ, ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮ್ಮಿಮ್ ರೋಡಿಗಾಸ್ ಸೇರಿದಂತೆ ಹಲವು ಆಟಗಾರ್ತಿಯರಿಗೆ ಕೊಕ್ ನೀಡಲಾಗಿದೆ.
ಚುಟುಕು ವಿಶ್ವಕಪ್‍ಗೂ ಮುನ್ನ ಭಾರತದ ಮಹಿಳಾ ತಂಡವು ನ್ಯೂಜಿಲ್ಯಾಂಡ್ ವಿರುದ್ಧ ಫೆಬ್ರುವರಿಯಲ್ಲಿ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಟ್ವೆಂಟಿ-20 ವಿಶ್ವಕಪ್‍ನಲ್ಲಿ ಭಾರತವು ತನ್ನ ಮೊದಲ ಪಂದ್ಯವನ್ನು ಮಾರ್ಚ್ 6 ರಂದು ಬೈ ಓವಲ್‍ನಲ್ಲಿ ಸಾಂಪ್ರಾದಾಯಿಕ ವೈರಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದ್ದು, ನಾಕೌಟ್ ಸುತ್ತಿಗೂ ಮುಂಚೆ ನಡೆಯುವ ರೌಂಡ್ ರಾಬಿನ್ ಸುತ್ತಿನಲ್ಲಿ 7 ಪಂದ್ಯಗಳನ್ನಾಡಲಿದೆ.
2017ರಲ್ಲಿ ನಡೆದ ಚುಟುಕು ವಿಶ್ವಕಪ್‍ನ ಸೆಮಿಫೈನಲ್‍ನಲ್ಲೂ ಮಿಥಾಲಿ ಪಡೆಯು ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಗೆಲುವು ಕಂಡರೂ ಫೈನಲ್‍ನಲ್ಲಿ ಅತಿಥೇಯ ಇಂಗ್ಲೆಂಡ್ ತಂಡಕ್ಕೆ ಶರಣಾಗಿತ್ತು.
ತಂಡದ ವಿವರ
ಮಿಥಾಲಿ ರಾಜ್ (ನಾಯಕಿ), ಹರ್ಮನ್‍ಪ್ರೀತ್ ಕೌರ್(ಉಪನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್ ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್.
ರೌಂಡ್ ರಾಬಿನ್‍ಪಂದ್ಯಗಳು
ಮಾರ್ಚ್ 6- ಪಾಕಿಸ್ತಾನ- ಬೇ ಓವಲ್
ಮಾರ್ಚ್ 10- ನ್ಯೂಜಿಲ್ಯಾಂಡ್- ಹ್ಯಾಮಿಲ್ಟನ್
ಮಾರ್ಚ್ 12- ವೆಸ್ಟ್‍ಇಂಡೀಸ್- ಹ್ಯಾಮಿಲ್ಟನ್
ಮಾರ್ಚ್ 16- ಇಂಗ್ಲೆಂಡ್-ಬೇ ಓವಲ್
ಮಾರ್ಚ್ 19- ಆಸ್ಟ್ರೇಲಿಯಾ- ಅಕ್ಲಂಡ್
ಮಾರ್ಚ್ 22- ಬಾಂಗ್ಲಾದೇಶ- ಹ್ಯಾಮಿಲ್ಟನ್
ಮಾರ್ಚ್ 27- ದಕ್ಷಿಣ ಆಫ್ರಿಕಾ- ಕ್ರಿಸ್ಟ್‍ಚರ್ಚ್

Articles You Might Like

Share This Article