ಗುವಾಹಟಿ, ಜ. 9- ಶ್ರೀಲಂಕಾ ವಿರುದ್ಧ ನಡೆದ 3 ಪಂದ್ಯಗಳ ಟಿ 20 ಸರಣಿಯನ್ನು 2-1 ರಿಂದ ಗೆದ್ದುಕೊಂಡು ಸಂಭ್ರಮದಲ್ಲಿರುವ ಭಾರತ ತಂಡವು ನಾಳೆಯಿಂದ ಇಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿದೆ.
ಕೈ ಬೆರಳ ನೋವಿನಿಂದ ಸಂಪೂರ್ಣ ಗುಣಮುಖರಾಗಿ ಫಿಟ್ನೆಸ್ ಹೊಂದಿರುವ ಕಾರಣ ರೋಹಿತ್ ಶರ್ಮಾ ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕನ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಟಿ 20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಅವರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಲಭ್ಯರಾಗಿರುವುದರಿಂದ ಟಿ 20 ಸರಣಿಯಲ್ಲಿ ಸ್ಥಾನ ಪಡೆದಿದ್ದ ಕೆಲವು ಕಿರಿಯ ಆಟಗಾರರು ಸ್ಥಳವನ್ನು ಬಿಟ್ಟುಕೊಡುವ ಸಂಭವವಿದೆ.
ಕಾಂಗ್ರೆಸ್ ಮಹಿಳಾ ನಾಯಕಿಯರ ಸಮಾವೇಶಕ್ಕೆ ಪ್ರಿಯಾಂಕ ಗಾಂಧಿ
ರೋಹಿತ್ ಶರ್ಮಾ ತಂಡಕ್ಕೆ ಮರಳಿರುವುದರಿಂದ ಇಶಾನ್ ಕಿಶನ್ ಅಥವಾ ಶುಭಮನ್ ಗಿಲ್ ಅವರು ಆಡುವ 11ರ ಬಳಗದಿಂದ ಹೊರಗುಳಿದರೆ, ಸೂರ್ಯಕುಮಾg ಯಾದವ್, ಶ್ರೇಯಸ್ ಅಯ್ಯರ್ ಇಬ್ಬರ ಪೈಕಿ ಒಬ್ಬರು ಮಾತ್ರ ಸ್ಥಾನ ಪಡೆಯಲಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದ ಇತ್ತೀಚಿನ 5 ಪಂದ್ಯಗಳ ಫಲಿತಾಂಶ ಗಮನಿಸಿದರೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 4ರಲ್ಲಿ ಗೆಲುವು ಸಾಸಿದರೆ, ಶ್ರೀಲಂಕಾ ತಂಡವು 1 ಪಂದ್ಯ ಮಾತ್ರ ಗೆದ್ದಿದೆ.
ಭಾರತ ಹಾಗೂ ಶ್ರೀಲಂಕಾ ತಂಡವು ಏಕದಿನ ಸರಣಿಯಲ್ಲಿ 3 ಪಂದ್ಯಗಳನ್ನಾಡಲಿದೆ.