ನವದೆಹಲಿ,ಫೆ.8- ಟರ್ಕಿಯೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಭಾರತ ಮಾನವೀಯತೆ ಪರವಾಗಿ ನಿಲ್ಲುತ್ತದೆ. ಸಂಕಷ್ಟದಲ್ಲಿರುವ ಆ ದೇಶಕ್ಕೆ ನೆರವಾಗುತ್ತದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದರು.
ಟರ್ಕಿಗೆ ಪರಿಹಾರ ಒದಗಿಸುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಸುದೈವ ಕುಟುಂಬಕಂ ನೀತಿಯ ಪ್ರಕಾರ ಭಾರತವು ಮಾನವೀಯತೆ ಪರ ಸದಾ ನಿಲ್ಲುತ್ತದೆ. ಪ್ರಕತಿ ವಿಕೋಪದಂತಹ ಸಂದರ್ಭದಲ್ಲಿ ಅವರಿಗೆ ನೆರವಾಗುವುದು ಎಂದರು.
ಭೂಕಂಪ ಪೀಡಿತ ಟರ್ಕಿ ರಾಷ್ಟ್ರಕ್ಕೆ ಭಾರತ ಇಲ್ಲಿಯವರೆಗೆ 30 ಹಾಸಿಗೆಗಳ ಕ್ಷೇತ್ರ ಆಸ್ಪತ್ರೆಯನ್ನು ಸ್ಥಾಪಿಸಲು ಎನ್‍ಡಿಆರ್‍ಫ್ ಸಿಬ್ಬಂದಿ ಮತ್ತು ಘಟಕಗಳೊಂದಿಗೆ ನಾಲ್ಕು ಸಿ-17 ಹಕ್ರ್ಯುಲಸ್ ವಿಮಾನಗಳನ್ನು ಕಳುಹಿಸಿದೆ ಎಂದು ತಿಳಿಸಿದರು.
ಡ್ರೋನ್‍ಗಳ ನಿರ್ವಹಣೆಯಲ್ಲಿ ಅಮೆರಿಕಾ-ಭಾರತ ಬಾಂಧವ್ಯ ವೃದ್ಧಿ
ಅಲ್ಲದೆ 6 ಟನ್ ಜೀವರಕ್ಷಕ ಔಷಧಗಳು ಮತ್ತು ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಸಿರಿಯಾಕ್ಕೆ ರವಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇಲ್ಲಿಯವರೆಗೆ 8,000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಮತ್ತು 26,721 ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವಾರು ದೇಶಗಳಿಂದ ಸುಮಾರು 60,000 ರಕ್ಷಕರು ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದರು.
India, Stands, Forever, Humanity, Jaishankar,