ನವದೆಹಲಿ,ಡಿ.25-ಬಾಂಗ್ಲಾದೇಶ ವಿರುದ್ಧ ಮೀರ್ಪುರ್ನಲ್ಲಿ ನಡೆದ ದ್ವಿತೀಯ ಟೆಸ್ಟ್ನಲ್ಲಿ ಭಾರತ ತಂಡವು 3 ವಿಕೆಟ್ಗಳ ರೋಚಕ ಗೆಲುವು ಸಾಧಿಸುವ ಮೂಲಕ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಿದೆ.
ಬಾಂಗ್ಲಾ ದೇಶ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಟೀಮ್ ಇಂಡಿಯಾ, 188 ರನ್ಗಳಿಂದ ಗೆಲುವು ಸಾಧಿಸಿತ್ತು, ದ್ವಿತೀಯ ಟೆಸ್ಟ್ನಲ್ಲಿ ರವಿಚಂದ್ರನ್ ಅಶ್ವಿನ್ರ ಅಜೇಯ 42 ರನ್ಗಳ ನೆರವಿನಿಂದ 3 ವಿಕೆಟ್ಗಳ ಗೆಲುವು ಸಾಧಿಸಿ 2 ಟೆಸ್ಟ್ ಪಂದ್ಯಗಳನ್ನು ಕ್ಲೀನ್ ಸ್ವೀಪ್ ಮಾಡಿತು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಪಾಯಿಂಟ್ಸ್ ಟೇಬಲ್ನಲ್ಲಿ ಭಾರತ ತಂಡವು 58.93 ಪಾಯಿಂಟ್ಸ್ಗಳೊಂದಿಗೆ 2ನೆ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆಯುವ 4 ಟೆಸ್ಟ್ ಆಡಲಿದ್ದು ಆ ಸರಣಿಯಲ್ಲಿ 3-1 ರಿಂದ ಗೆಲುವು ಸಾಧಿಸಿದರೆ ಸತತ 2ನೆ ಬಾರಿಗೆ ಟೆಸ್ಟ್ ಚಾಂಪಿಯನ್ ಟೂರ್ನಿಯ ಫೈನಲ್ ಹಂತ ತಲುಪಲಿದೆ.
1 ಕೋಟಿ ಖೋಟಾ ನೋಟು ನೀಡಿ ವಂಚಿಸಿದ್ದ ಮೂವರ ಬಂಧನ
2021 ರಿಂದ 2023ರವರೆಗೆ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿ ಯನ್ ಶಿಪ್ ರ್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಟಾಪ್ ಸ್ಥಾನದಲ್ಲಿದೆ.
3ನೆ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಕ್ಕೆ ಆಸ್ಟ್ರೇಲಿಯಾ ವಿರುದ್ಧ ನಾಳೆಯಿಂದ ನಡೆಯ ಲಿರುವ ಬಾಕ್ಸಿಂಗ್ ಡೇ ಟೆಸ್ಟ್ ನಿರ್ಣಾಯಕವಾಗಿದ್ದರೆ, ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ 2 ಟೆಸ್ಟ್ ಪಂದ್ಯಗಳನ್ನಾಡಿದ್ದು, 2 ಪಂದ್ಯಗಳಲ್ಲೂ ಗೆಲುವು ಸಾಧಿಸಿದರೂ, ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದರೆ ಪಾಕಿಸ್ತಾನದ ಫೈನಲ್ಗೇರುವ ಕನಸು ಕಮರಿ ಹೋಗಲಿದೆ.
India, strengthen, World Test Championship, Final,