ನವದೆಹಲಿ,ಡಿ.16-ಪರಮಾಣು ಸಾಮಥ್ರ್ಯದ ಅಗ್ನಿ-5 ಕ್ಷಿಪಣಿ ಪರೀಕ್ಷಾ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಅಗ್ನಿ-5 ಮೂರು ಹಂತದ ರಾಕೆಟ್ ಚಾಲಿತ ಕ್ಷಿಪಣಿ ವ್ಯವಸ್ಥೆಯಾಗಿದ್ದು, 1.5 ಟನ್ ಪರಮಾಣು ಸಿಡಿತಲೆಗಳನ್ನು ತಲುಪಿಸುವ ಸಾಮಥ್ರ್ಯ ಹೊಂದಿದೆ.
ಇದು ಅತ್ಯಂತ ಹೆಚ್ಚಿನ ಮಟ್ಟದ ನಿಖರತೆಯೊಂದಿಗೆ 5,000 ಕಿಲೋಮೀಟರ್ ಮೀರಿದ ವ್ಯಾಪ್ತಿಯಲ್ಲಿರುವ ಗುರಿಗಳನ್ನು ಹೊಡೆಯಬಲ್ಲದು ರಕ್ಷಣಾ ಇಲಾಖೆ ತಿಳಿಸಿದೆ.
ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯ ಕೆಲವು ದಿನಗಳ ನಂತರ ಕಳೆದ ರಾತ್ರಿ ಪರೀಕ್ಷಾ ಉಡಾವಣೆ ನಡೆದಿದೆ.
ಚೀನಾದ ಡಾಂಗ್‍ಫೆಂಗ್ -41 ಕ್ಷಿಪಣಿಗಳ ವಿರುದ್ಧ ಭಾರತದ ಪರಮಾಣು ನಿರೋಧಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅಗ್ನಿ-5 ಯೋಜನೆಯು 12,000-15,000 ಕಿಮೀ ವ್ಯಾಪ್ತಿಯನ್ನು ನಿರೀಕ್ಷಿಸಲಾಗಿದೆ.
#India, #Successfully, #testfires, #AgniV, #BallisticMissile,