ಭಾರತ ತಂಡಕ್ಕೆ ಹರ್ಮಿತ್ ನಾಯಕಿ

Spread the love

ನವದೆಹಲಿ : ಭಾರತದ ಮಹಿಳಾ ವನಿತೆಯರ ನಾಯಕಿ ಮಿಥಾಲಿ ರಾಜ್‍ರ ದಿಢೀರ್ ನಿವೃತ್ತಿಯಿಂದಾಗಿ ಉಪನಾಯಕಿಯಾಗಿದ್ದ ಹರ್ಮಿತ್ ಕೌರ್ ಅವರನ್ನು ನೂತನ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.

ಶ್ರೀಲಂಕಾದ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟ್ವೆಂಟಿ-20 ಸರಣಿಗಾಗಿ ಹರ್ಮಿತ್ ಕೌರ್‍ರಿಗೆ ನಾಯಕಿಯ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಹರ್ಮಿತ್ ಕೌರ್ ಈಗಾಗಲೇ ಟ್ವೆಂಟಿ-20 ಮಾದರಿ ಕ್ರಿಕೆಟಿಗೆ ನಾಯಕಿಯಾಗಿದ್ದು ಈಗ ಹೆಚ್ಚುವರಿ ಏಕದಿನ ಕ್ರಿಕೆಟ್‍ಗೂ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.

Facebook Comments