ಭಾರತ-ದಕ್ಷಿಣ ಆಫ್ರಿಕಾ ಪಂದ್ಯದ ಆಧಾರದ ಮೇಲೆ ಸೆಮಿಫೈನಲ್ ಲೆಕ್ಕಾಚಾರ

Social Share

ಪರ್ತ್, ಅ 30- ಸಾಂಪ್ರದಾಯಿಕ ಪಾಕಿಸ್ತಾನ ಹಾಗೂ ನೆದರ್‍ಲ್ಯಾಂಡ್ ವಿರುದ್ಧದ ಪಂದ್ಯಗಳಲ್ಲಿ ಅಮೋಘ ಗೆಲುವು ಸಾಧಿಸಿರುವ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾವು ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಗ್ರೂಪ್ 2ರ ಪಂದ್ಯವನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಹಂತವನ್ನು ಖಾತ್ರಿ ಪಡಿಸಿಕೊಳ್ಳುವತ್ತ ಚಿತ್ತ ಹರಿಸಿದೆ.

ಯುಎಇ ಹಾಗೂ ಓಮನ್ ಆತಿಥ್ಯದಲ್ಲಿ ನಡೆದಿದ್ದ 2021ರ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡು ಸೆಮಿಫೈನಲ್ ಹಂತ ತಲುಪಲು ಎಡವಿದ್ದ ರೋಹಿತ್ ಪಡೆ ಈ ಬಾರಿ ಸೆಮಿಫೈನಲ್‍ಗೇರುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ.

ಮೆಲ್ಬೋರ್ನ್‍ನಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವಿರೋಚಿತ ಆಟದಿಂದಾಗಿ 4 ವಿಕೆಟ್ ಗೆಲುವು ನಂತರ ಸಿಡ್ನಿಯಲ್ಲಿ ನೆದರ್‍ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 56 ರನ್‍ಗಳಿಂದ ಗೆಲುವು ಸಾಧಿಸಿರುವ ಭಾರತ ಒಟ್ಟು 4 ಅಂಕಗಳನ್ನು ಕಲೆ ಹಾಕಿದ್ದು, ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ 2 ಅಂಕ ಗಳಿಸಿ ಒಟ್ಟು 6 ಪಾಯಿಂಟ್ಸ್‍ಗಳೊಂದಿಗೆ ಸೆಮೀಸ್ ಸ್ಥಾನವನ್ನು ರೋಹಿತ್ ಪಡೆ ಸುಭದ್ರಪಡಿಸಿಕೊಳ್ಳಬಹುದು.

ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಕಣ್ಣೂರು ಶ್ರೀ ಅರೆಸ್ಟ್

1 ಸ್ಥಾನಕ್ಕಾಗಿ 4 ತಂಡಗಳ ಪೈಪೋಟಿ:
ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಸ್ಥಾನವನ್ನು ಸುಭದ್ರಪಡಿಸಿಕೊಂಡರೆ, ಆಗ 1 ಸ್ಥಾನಕ್ಕಾಗಿ 4 ತಂಡಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡಲಿದೆ.

ಬಾಂಗ್ಲಾಗೆ ಭಾರತ, ಪಾಕ್ ಸವಾಲು:
ಗ್ರೂಪ್ 2ರಲ್ಲಿ ಪ್ರಸ್ತುತ 2 ನೆ ಸ್ಥಾನದಲ್ಲಿರುವ ಬಾಂಗ್ಲಾದೇಶ ತಂಡವು ಈಗಾಗಲೇ 4 ಅಂಕಗಳನ್ನು ಕಲೆ ಹಾಕಿದ್ದು ಉಳಿದಿರುವ 2 ಪಂದ್ಯಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಪೈಕಿ ಒಂದರ ವಿರುದ್ಧ ಗೆಲುವು ಸಾಧಿಸಿದರೆ ಆಗ 6 ಪಾಯಿಂಟ್ಸ್‍ಗಳೊಂದಿಗೆ ಸೆಮಿಫೈನಲ್ ತಲುಪಬಹುದು, ಪಂದ್ಯದ ಗೆಲುವಿನೊಂದಿಗೆ ಉತ್ತಮ ರನ್‍ರೇಟ್‍ನತ್ತಲೂ ಶಕಿಬ್ ಅಲ್ ಹಸನ್ ತಂಡ ಗಮನ ಹರಿಸಬೇಕು.

ರಾಜ್ಯದ ದಕ್ಷಿಣ ಒಳನಾಡಿನಲ್ಲಿ 3 ದಿನ ಮಳೆ

ದಕ್ಷಿಣ ಆಫ್ರಿಕಾಗೂ ಕಠಿಣ ಸವಾಲು:
ಐಸಿಸಿ ಟಿ 20 ವಿಶ್ವಕಪ್‍ನ ಮೊದಲ ಪಂದ್ಯದಲ್ಲೇ ಜಿಂಬಾಬ್ವೆ ವಿರುದ್ಧ ತಲಾ 1 ಅಂಕ ಹಂಚಿಕೊಂಡಿರುವ ತಬುವಾ ಬಳಗ ಬಾಂಗ್ಲಾದೇಶ ವಿರುದ್ಧ 104 ರನ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಉತ್ತಮ ರನ್‍ರೇಟ್ ಅನ್ನು ತನ್ನದಾಗಿಸಿಕೊಂಡಿತು. ಪ್ರಸ್ತುತ 3ನೆ ಸ್ಥಾನದಲ್ಲಿರುವ ವಿಶ್ವಕಪ್‍ನ ಕಪ್ಪು ಕುದುರೆಗಳಾದ ದಕ್ಷಿಣ ಆಫ್ರಿಕಾ 3 ಅಂಕಗಳನ್ನು ಕಲೆ ಹಾಕಿದ್ದು ಇಂದಿನ ಪಂದ್ಯದಲ್ಲಿ ಭಾರತ ವಿರುದ್ಧ ಗೆಲುವು ಸಾಧಿಸಿದರೆ 5 ಅಂಕಗಳೊಂದಿಗೆ ಟಾಪ್ 1 ಸ್ಥಾನ ಅಲಂಕರಿಸಿ ಸೆಮೀಸ್‍ಗೆ ಹತ್ತಿರವಾಗುತ್ತದೆ. ಒಂದು ವೇಳೆ ಇಂದಿನ ಪಂದ್ಯವನ್ನು ಸೋತರೆ ಆಗ ದ.ಆಫ್ರಿಕಾವು ಪಾಕಿಸ್ತಾನ, ನೆದರ್‍ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್‍ಗೆ ತಲುಪಬಹುದು ಆದರೆ ಒಂದು ಪಂದ್ಯದಲ್ಲಿ ಸೋತರೂ ಆಗ ತಬುವಾ ಬಳಗದ ಸೆಮೀಸ್ ಹಾದಿ ಕಠಿಣವಾಗುತ್ತದೆ.

ಚೆಕ್ ಪಡೆದು ಪ್ರಭಾವಿ ಹುದ್ದೆ ನೀಡಿದ್ದ ಸಿದ್ದರಾಮಯ್ಯ : N.R.ರಮೇಶ್ ಆರೋಪ

ಜಿಂಬಾಬ್ವೆಗೂ ಛಾನ್ಸ್:
ಗ್ರೂಪ್ 2ರ ಪಾಯಿಂಟ್ಸ್ ಪಟ್ಟಿಯಲ್ಲಿ 3 ಅಂಕಗಳೊಂದಿಗೆ 4ನೆ ಸ್ಥಾನದಲ್ಲಿರುವ ಕ್ರೆಗ್ ಇರ್ವಿನ್ ಸಾರಥ್ಯದ ಜಿಂಬಾಬ್ವೆ ಸೆಮಿಫೈನಲ್‍ಗೇರಬೇಕಾದರೆ ಉಳಿದ ನೆದರ್‍ಲ್ಯಾಂಡ್ ಹಾಗೂ ಭಾರತ ವಿರುದ್ಧದ ಎರಡು ಪಂದ್ಯಗಳಲ್ಲೂ ಉತ್ತಮ ರನ್‍ರೇಟ್‍ನೊಂದಿಗೆ ಗೆಲುವು ಸಾಧಿಸಬೇಕು, ಇದರ ಜೊತೆಗೆ ದ.ಆಫ್ರಿಕಾ 2 ಹಾಗೂ ಬಾಂಗ್ಲಾದೇಶ 1 ಪಂದ್ಯದಲ್ಲಿ ಸೋಲಬೇಕು.

ನ. 1ರಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಆರಂಭ

ಪಾಕ್‍ಗೂ ಅವಕಾಶ:
ಭಾರತ ಹಾಗೂ ಜಿಂಬಾಬ್ವೆವಿರುದ್ಧ ಸೋಲು ಕಂಡಿರುವ ಬಾಬರ್ ಆಝಾಮ್ ಸಾರಥ್ಯದ ಪಾಕಿಸ್ತಾನ ತಂಡವು ಸೆಮಿಫೈನಲ್‍ಗೇರಬೇಕಾದರೆ ಪವಾಡವೇ ನಡೆಯಬೇಕು. ಇನ್ನು ಪಾಯಿಂಟ್ಸ್ ಖಾತೆಯನ್ನೇ ತೆರೆಯದೆ ಪಾಕ್ ತನ್ನ ಉಳಿದಿರುವ ನೆದರ್‍ಲ್ಯಾಂಡ್, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯಗಳಲ್ಲಿ ಉತ್ತಮ ರನ್‍ರೇಟ್‍ನೊಂದಿಗೆ ಗೆಲುವು ಸಾಧಿಸಬೇಕು. ಆದರೆ ಇದೆಲ್ಲ ನಡೆಯಬೇಕಾದರೆ ರೋಹಿತ್ ಶರ್ಮಾ ಬಳಗವು ಟಿಂಬಾ ಬವುವಾ ಸಾರಥ್ಯದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕು, ಒಂದು ವೇಳೆ ಭಾರತ ಇಂದಿನ ಪಂದ್ಯದಲ್ಲಿ ಸೋತರೆ ಆಗ ಟೀಂ ಇಂಡಿಯಾವು ಬಾಂಗ್ಲಾ , ಜಿಂಬಾಬ್ವೆ ವಿರುದ್ಧ ಪಂದ್ಯಗಳಲ್ಲಿ ಒಂದರಲ್ಲಿ
ಗೆಲುವು ಸಾಧಿಸಬೇಕಾದ ಒತ್ತಡಕ್ಕೆ ಸಿಲುಕುತ್ತದೆ.

Articles You Might Like

Share This Article