ವಿಶ್ವಸಂಸ್ಥೆ, ಫೆ.22- ರಷ್ಯಾ-ಉಕ್ರೇನ್ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತ ತೀವ್ರ ಆತಂಕ ವ್ಯಕ್ತಪಡಿಸಿದೆ. ಎಲ್ಲಾ ದೇಶಗಳ ಭದ್ರತಾ ಹಿತಾಸಕ್ತಿಯ ದೃಷ್ಟಿಯಿಂದ ಉದ್ವಿಗ್ನತೆಯ ಶಮನಕ್ಕೆ ಪ್ರಥಮಾದ್ಯತೆ ನೀಡಬೇಕು ಎಂದು ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನಿನ್ನೆ ಉಕ್ರೇನ್‍ನ ಡೊನೆಟ್ಕ್ಸ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್‍ಗಳನ್ನು ಸ್ವತಂತ್ರ ಎಂದು ಗುರುತಿಸುವ ಡಿಕ್ರೀಗಳಿಗೆ ಸಹಿ ಮಾಡಿದರು. ತನ್ಮೂಲಕ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಸಾಧ್ಯತೆ ಭೀತಿ ಅಕವಾಗಿದೆ. ಪುಟಿನ್ ಪೂರ್ವ ಉಕ್ರೇನ್‍ನತ್ತ ತೆರಳುವಂತೆಯೂ ತಮ್ಮ ಸೇನೆಗೆ ಆದೇಶ ನೀಡಿದ್ದಾರೆ. ಇದು ಶಾಂತಿಪಾಲನಾ ಕ್ರಮ ಎಂದು ಅವರು ಹೇಳಿಕೊಂಡಿದ್ದಾರೆ.
ನಿನ್ನೆ ರಾತ್ರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ರಾಯಭಾರಿಗೆ ಭಾರತದ ಕಾಯಂ ಪ್ರತಿನಿ ಟಿ.ಎಸ್.ತಿರುಮೂರ್ತಿ, ನಾವು ಉಕ್ರೇನ್‍ಗೆ ಸಂಬಂಸಿದ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಉಕ್ರೇನ್‍ನ ಪೂರ್ವಗಡಿಯ ಸನ್ನಿವೇಶ ಮತ್ತು ರಷ್ಯನ್ ಒಕ್ಕೂಟದ ಸಂಬಂತ ಘೋಷಣೆಯ ಮೇಲೂ ಗಮನ ಹರಿಸಿದ್ದೇವೆ ಎಂದು ಹೇಳಿದರು.
ರಷ್ಯಾ ಒಕ್ಕೂಟವು ಉಕ್ರೇನ್‍ನ ಗಡಿಯುದ್ಧಕ್ಕೂ ಹೆಚ್ಚಿಸುತ್ತಿರುವ ಉದ್ವಿಗ್ನತೆ ತೀವ್ರ ಆತಂಕದ ವಿಷಯವಾಗಿದೆ. ಈ ಬೆಳವಣಿಗೆಗಳು ಈ ಪ್ರದೇಶದ ಶಾಂತಿ ಮತ್ತು ಭದ್ರತೆಗೆ ಅಪಾಯಕಾರಿಯಾಗಿವೆ ಎಂದು ತಿರುಮೂರ್ತಿ ನುಡಿದರು.
