ಜೋಹಾನ್ಸ್‍ಬರ್ಗ್, ಜ.27- ನಮೀಬಿಯಾದಿಂದ ಎಂಟು ಚೀತಾಗಳು ಭಾರತದ ಕಾಡಿಗೆ ಬಂದ ಕೆಲ ತಿಂಗಳ ಬೆನ್ನಲ್ಲೇ ಇನ್ನೂ ನೂರು ಚಿರತೆಗಳನ್ನು ಭಾರತಕ್ಕೆ ಕಳುಹಿಸಲು ದಕ್ಷಿಣ ಆಫ್ರಿಕಾ ಒಪ್ಪಂದ ಮಾಡಿಕೊಂಡಿದೆ.
ಅದರ ಪ್ರಕಾರ, ಮುಂದಿನ ತಿಂಗಳು 12 ಚೀತಾಗಳನ್ನು ಭಾರತಕ್ಕೆ ಕಳುಹಿಸಿಕೊಡಲಾಗುವುದು ಎಂದು ಸೌತ್ ಆಫ್ರಿಕಾದ ಪರಿಸರ ಮಂತ್ರಾಲಯ ಹೇಳಿದೆ.
ಒಟ್ಟು ನೂರು ಚೀತಾಗಳನ್ನು ಸೌತ್ ಆಫ್ರಿಕಾದಿಂದ ಭಾರತಕ್ಕೆ ಏಳೆಂಟು ಹಂತಗಳಲ್ಲಿ ಕರೆತರಲು ಯೋಜನೆ ರೂಪಿಸಲಾಗಿದೆ. ಚೀತಾಗಳು ಹೊಂದಿಕೊಳ್ಳುವ ಪರಿಸರವನ್ನು ಸೃಷ್ಟಿಸಬೇಕಾಗಿದ್ದರಿಂದ ಹಂತ ಹಂತವಾಗಿ ಭಾರತಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಚಿರತೆ ಮತ್ತು ಚೀತಾ ಒಂದೇ ತರನಾದ ಪ್ರಾಣಿಯಾಗಿದ್ದರೂ ಕೂಡ ಕೆಲವೊಂದಿಷ್ಟು ಭಿನ್ನತೆ ಹೊಂದಿದೆ. ಚಿರತೆಗಳು ಭಾರತದಲ್ಲಿ ಹೇರಳವಾಗಿ ಸಿಗುತ್ತವೆ. ಚೀತಾಗಿಂತ ಇದು ದೊಡ್ಡ ಪ್ರಾಣಿ. ಆದರೆ, ಚೀತಾ ಸಣ್ಣದಾದರೂ ಬಹಳ ವೇಗವಾಗಿ ಓಡುತ್ತದೆ.
ಪತ್ನಿ-ಇಬ್ಬರು ಮಕ್ಕಳೊಂದಿಗೆ ಬಿಜೆಪಿ ನಾಯಕ ಆತ್ಮಹತ್ಯೆ
ಈ ಹಿಂದೆ ಚೀತಾ ಭಾರತದಲ್ಲಿ ಅಸ್ತಿತ್ವದಲ್ಲಿದ್ದು, 1952ರಲ್ಲಿ ಇದರ ಸಂತತಿ ಕಣ್ಮರೆಯಾಗಿತ್ತು. ಆಫ್ರಿಕಾದಲ್ಲಿ ಇವು ಹೆಚ್ಚಿವೆ. ಈ ಸಂತತಿಯನ್ನು ಮತ್ತೆ ಬೆಳೆಸುವ ನಿಟ್ಟಿನಲ್ಲಿ ದೇಶಕ್ಕೆ ಚೀತಾವನ್ನು ಕರೆತರಲಾಗುತ್ತಿದೆ.
ಸುಪ್ರೀಂಕೋರ್ಟ್ ಕೂಡ ಇದಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಎಂಟು ಚೀತಾಗಳನ್ನು ಭಾರತಕ್ಕೆ ತಂದು ಮಧ್ಯ ಪ್ರದೇಶದ ಕೋನೋ ನ್ಯಾಷನಲ್ ಪಾರ್ಕ್‍ನಲ್ಲಿ ಬಿಡಲಾಗಿದೆ. ಇವುಗಳು ಬೇಟೆಯಾಡಬೇಕಾದ ಪ್ರಾಣಿಗಳು. ಈ ಪರಿಸರದಲ್ಲಿ ಇವೆ. ಈ ಚೀತಾಗಳು ಈ ಪರಿಸರಕ್ಕೆ ಹೊಂದಿಕೊಂಡಿವೆ. ಬೇರೆ ಪ್ರಾಣಿಗಳಿಂದ ಈ ಚೀತಾಗಳಿಗೆ ಅಪಾಯ ಉಂಟಾಗಬಹುದೆಂಬ ಆತಂಕ ಕೂಡ ಕಡಿಮೆಯಾಗಿದೆ.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮೇಳೈಸಿದ ಮಕ್ಕಳ ಕಲರವ
ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದಿಂದ ಮತ್ತಷ್ಟು ಚೀತಾಗಳನ್ನು ತರುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ನೂರು ಚಿರತೆಗಳು ಮುಂದಿನ ವರ್ಷ ಭಾರತಕ್ಕೆ ಬರಲಿವೆ. ಆದರೆ, ಯಾವ ಕಾಡಿನಲ್ಲಿ ಬಿಡಬೇಕು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ.
India, agreement, 100cheetahs, SouthAfrica,