ಭಾರತದಲ್ಲಿ ವಿವಾದ ಸೃಷ್ಟಿಸಿದ ಬಿಬಿಸಿ ಸಾಕ್ಷ್ಯ ಚಿತ್ರಗಳ ಸರಣಿ

Social Share

ನವದೆಹಲಿ,ಜ.28- ಗುಜರಾರ್ ಗಲಭೆಗೆ ಸಂಬಂಧಿಸಿದಂತೆ ಆಗಿನ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯ ಚಿತ್ರ ವಿವಾದದ ಕಿಚ್ಚು ಎಬ್ಬಿಸಿರು ನಡುವೆಯೇ ಹಿಂದೇ ಇದೇ ರೀತಿ ವಿವಾದ ಸೃಷ್ಟಿಸಿದ ಸಾಕ್ಷ್ಯ ಚಿತ್ರಗಳ ಕುರಿತು ಇಂಡಿಯಾ ಟುಡೆ ವರದಿ ಮಾಡಿದೆ.

2004ರಲ್ಲಿ ಫೈನಲ್ ಸಲ್ಯೂಷನ್, 2015ರಲ್ಲಿ ಇಂಡಿಯಸ್ ಡಾಟರ್, ರಾಮ್ ಕೆ ನಾಮ್, ಇನ್ಶಲ್ಲಾ, ಫುಟ್‍ಬಾಲ್, ಪ್ಯಾಂಟಮ್ ಇಂಡಿಯಾ ಮತ್ತು ಕಲ್ಕತ್ತಾ ಚಿತ್ರಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ನಿಧಿಷೇಸಲ್ಪಟ್ಟಿದ್ದವು. ಕೆಲವು ಕಾನೂನು ಹೋರಾಟದಲ್ಲಿ ಗೆದ್ದು ಜನಮನವನ್ನು ಗೆದ್ದವು ಎಂದು ವರದಿಯಾಗಿದೆ.

ದಶಕದ ಹಿಂದೆ ರಾಕೇಶ್ ಶರ್ಮಾ ನಿರ್ದೇಶಿಸಿದ್ದ ಫೈನಲ್ ಸಲ್ಯೂಷನ್ ಎಂಬ ಸಾಕ್ಷ್ಯ ಚಿತ್ರವೂ ನಿರ್ಬಂಧಕ್ಕೆ ಒಳಪಟ್ಟಿತ್ತು. ಗುಕರಾತ್‍ನಲ್ಲಿ 2002ರಲ್ಲಿ ನಡೆದ ಹಿಂಸಾಕೃತ್ಯಗಳಲ್ಲಿ ಬದುಕಿಳಿದವರು ಮತ್ತು ಸಾಕ್ಷಿಗಳನ್ನು ಆಧರಿಸಿ ನಿರ್ಮಿಸಲಾಗಿದ್ದ ಸಾಕ್ಷ್ಯ ಚಿತ್ರ ಕೋಮು ವಿಭಜನೆಯನ್ನು ಸ್ಪಷ್ಟವಾಗಿ ತೋರಿಸಿತ್ತು. ಆದರೆ ಆಗ ಕೇಂದ್ರ ಸೆನ್ಸಾರ್ ಮಂಡಳಿ ಅಧ್ಯಕ್ಷರಾಗಿದ್ದ ಅನುಪಮ್ ಖೇರ್ ಅದರ ಪ್ರದರ್ಶನಕ್ಕೆ ಅನುಮತಿ ನೀಡಿರಲಿಲ್ಲ.

ರಾಷ್ಟ್ರಗೀತೆಗೆ ಅಪಮಾನ : ಮೂವರ ವಿರುದ್ಧ ಪ್ರಕರಣ ದಾಖಲು

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಸಾಕ್ಷ್ಯಚಿತ್ರದಲ್ಲಿ ಪ್ರಚೋದನಕಾರಿ ಅಂಶಗಳಿವೆ ಎಂಬ ಕಾರಣ ನೀಡಿ ನಿಷೇಧಿಸಿತು. ಎನ್‍ಡಿಎ ಆಡಳಿತದ ಪ್ರಭಾವದಿಂದ ಜಾರಿಯಾಗಿದ್ದ ನಿರ್ಬಂಧವನ್ನು ಯುಪಿಎ ಆಡಳಿತಾವಧಿಯಲ್ಲಿ ತೆರವು ಮಾಡಲಾಗಿತ್ತು.

ಎಲ್ಲಾ ಅನುಮತಿಗಳನ್ನು ಪಡೆದು ಫೈನಲ್ ಸಲ್ಯೂಷನ್ 2004ರ ಅಕ್ಟೋಬರ್‍ನಲ್ಲಿ ಪ್ರದರ್ಶನಗೊಂಡಿತ್ತು. ವಿಶೇಷ ತೀರ್ಪುಗಾರರ ಪ್ರಶಸ್ತಿ (ನಾನ್-ಫೀಚರ್ ಫಿಲ್ಮ್) ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅನೇಕ ಗೌರವಗಳನ್ನು ಗಳಿಸಿತು.

2015ರ ಲೆಸ್ಲೀ ಉಡ್ವಿನ್ ತಯಾರಿಸಿದ್ದ ನಿರ್ಭಯಾ ಪ್ರಕರಣದ ಸಾಕ್ಷ್ಯ ಚಿತ್ರ ಇಂಡಿಯಾಸ್ ಡಾಟರ್ ಕೂಡ ವಿವಾದಕ್ಕೀಡಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು.

ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಕುರಿತ ಈ ಸಾಕ್ಷ್ಯ ಚಿತ್ರವನ್ನು ಆರೋಪಿಗಳಲ್ಲಿ ಒಬ್ಬನಾದ ಮುಖೇಶ್ ಸಂದರ್ಶನದ ಮೂಲಕ ತಯಾರಿಸಲಾಗಿತ್ತು. ಆ ಸಾಕ್ಷ್ಯಚಿತ್ರಕ್ಕೆ ಪೊಲೀಸರು ತಡೆಯಾಜ್ಞೆ ತಂದಿದ್ದರು. ಯಥಾ ಪ್ರಕಾರ ಬಿಬಿಸಿ ಸಾಕ್ಷ್ಯ ಚಿತ್ರವನ್ನು ಭಾರತದಲ್ಲ ಪ್ರಸಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ವಿದೇಶಗಳಲ್ಲಿ ಪ್ರದರ್ಶನಗೊಂಡಿತ್ತು. ಸರ್ಕಾರದ ನಿರ್ದೇಶನದ ಮೇರೆಗೆ ಯೂಟ್ಯೂಬ್ ನಲ್ಲಿದ್ದ ಸಾಕ್ಷ್ಯ ಚಿತ್ರವನ್ನು ತೆಗೆದು ಹಾಕಲಾಗಿತ್ತು. ಆಗ ಸಂಸತ್‍ನಲ್ಲಿ ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಿರೋಧ ಪಕ್ಷಗಳು ಸರ್ಕಾರ ನಿರ್ಧಾರವನ್ನು ಪ್ರಶ್ನಿಸಿದ್ದವರು. ಆಗಿನ ಸಂಸದೀಯ ವ್ಯವಹಾರಗಳ ಸಚಿವ ಎಂ ವೆಂಕಯ್ಯ ನಾಯ್ಡು, ವಿದೇಶಿ ಶಕ್ತಿಗಳು ಭಾರತದ ಗೌರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಗ್ಗಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದರು.

ರಾಜ್ಯಸಭೆ ಸದಸ್ಯ ಜಾವೇದ್ ಅಖ್ತರ್, ಸಾಕ್ಷ್ಯಚಿತ್ರವನ್ನು ಬೆಂಬಲಿಸಿದ್ದರು, ಇದನ್ನು ಆಕ್ಷೇಪಾರ್ಹವೆಂದು ಭಾವಿಸುವವರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.

1992 ನಿರ್ಮಿಸಲಾದ ರಾಮನ ಹೆಸರಿನಲ್ಲಿ (ರಾಮ್ ಕೆ ನಾಮ್) ಸಾಕ್ಷ್ಯ ಚಿತ್ರ ಹೆಚ್ಚು ವಿವಾದಕ್ಕೆ ಕಾರಣವಾಗಿತ್ತು. ಆನಂದ್ ಪಟವರ್ಧನ್ ನಿರ್ಮಿಸಿದ ಈ ಸಾಕ್ಷ್ಯಚಿತ್ರವು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ನಡೆಸಿದ ಅಭಿಯಾನದ ಸತ್ಯಾಂಶಗಳ ತನಿಖೆಯನ್ನು ಒಳಗೊಂಡಿತ್ತು.

ಈ ಸಾಕ್ಷ್ಯಚಿತ್ರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಮರ್ಶೆಗೀಡಾಗಿ ಮೆಚ್ಚುಗೆ ಗಳಿಸಿತು. ಅತ್ಯುತ್ತಮ ತನಿಖಾ ಸಾಕ್ಷ್ಯಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಫಿಲ್ಮ್‍ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಎಲ್ಲಾ ವಿಮರ್ಶೆಗಳ ಹೊರತಾಗಿಯೂ, ಸರ್ಕಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತದೆ ಎಂಬ ಕಾರಣಕ್ಕೆ ಸಾಕ್ಷ್ಯ ಚಿತ್ರವನ್ನು ಸರ್ಕಾರಿ ಪ್ರಾಯೋಜಿತ ದೂರದರ್ಶನದಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಿತ್ತು.

ರಾಹುಲ್ ಪಾದಯಾತ್ರೆಗೆ ಮೆಹಬೂಬಾ ಮುಫ್ತಿ ಸಾಥ್

ಯುವ ಕಾಶ್ಮೀರಿ ಫುಟ್‍ಬಾಲ್ ಆಟಗಾರನ ಕುರಿತಾದ ಇನ್ಶಾ ಅಲ್ಲಾ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಯುವ ಆಟಗಾರನ ತಂದೆ ಮಾಜಿ ಉಗ್ರಗಾಮಿ ಎಂಬ ಕಾರಣಕ್ಕೆ ಬ್ರೆಜಿಲ್‍ನಲ್ಲಿ ಫುಟ್‍ಬಾಲ್ ಆಡಬೇಕು ಎಂಬ ಯುವಕನ ಅದಮ್ಯ ಬಯಕ ಪಾಸಪೋರ್ಟ್ ನಿರಾಕರಿಸುವ ಮೂಲಕ ತಣ್ಣಿರು ಎರೆಚಲಾಗಿತ್ತು.

ಇದು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಚಿತ್ರ ತಯಾರಿಸಿದ್ದ ಅಶ್ವಿನ್ ಕುಮಾರ್ 2010 ರಲ್ಲಿ ಸೆನ್ಸಾರ್ ಮಂಡಳಿಯಿಂದ ಎ ಪ್ರಮಾಣಪತ್ರವನ್ನು ಪಡೆದಿದ್ದರು. ಆದರೆ ನಿಗದಿತ ಬಿಡುಗಡೆಗೆ ಮುನ್ನ ಸರ್ಕಾರ ಅದರ ಪ್ರದರ್ಶನವನ್ನು ನಿರ್ಬಂಧಿಸಿತ್ತು. ಸೇನೆಯಿಂದ ಜಮ್ಮು-ಕಾಶ್ಮೀರದ ಸಾಮಾನ್ಯ ಜೀವನ ಕ್ರಮಕ್ಕೆ ಧಕ್ಕೆಯಾಗಿದೆ ಎಂದು ಸಾಕ್ಷ್ಯ ಚಿತ್ರದಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆಯ್ದ ಪ್ರೇಕ್ಷಕರ ಮುಂದೆ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಕೊನೆಗೆ ಆನ್‍ಲೈನ್‍ನಲ್ಲಿ ಬಿಡುಗಡೆ ಮಾಡಲಾಯಿತು.

ಬ್ರಿಟಿಷ್ ಮೂಲದ ಬಿಬಿಸಿ ಸುದ್ದಿ ಸಂಸ್ಥೆ ಕೇಂದ್ರ ಸರ್ಕಾರದೊಂದಿಗೆ ಹಲವು ತಗಾದೆಗಳನ್ನು ಹೊಂದಿದೆ. ಮೋದಿ ಪ್ರಶ್ನೆ ಮತ್ತು ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರಗಳಿಗಿಂತಲೂ ಮೊದಲು ಬಿಬಿಸಿ 1970 ರ ದಶಕದಲ್ಲಿ ಸರ್ಕಾರದ ಹಲವು ಬಣ್ಣಗಳನ್ನು ಬಯಲು ಮಾಡಿತ್ತು.

ಲೂಯಿಸ್ ಮಲ್ಲೆ ಅವರ ಕಲ್ಕತ್ತಾ ಮತ್ತು ಫ್ಯಾಂಟಮ್ ಇಂಡಿಯಾ ಎಂಬ ಎರಡು ಸಾಕ್ಷ್ಯ ಚಿತ್ರಗಳು ಬ್ರಿಟಿಷ್ ದೂರದರ್ಶನದಲ್ಲಿ ಪ್ರಸಾರವಾಗಿದ್ದವು. ಇವು ವಲಸಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಾಕ್ಷ್ಯ ಚಿತ್ರಗಳು ಭಾರತವನ್ನು ನಕಾರಾತ್ಮಕವಾಗಿ, ಪೂರ್ವಾಗ್ರಹ ಪೀಡಿತವಾಗಿ ಚಿತ್ರಿಸಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಕಾರಣಕ್ಕೆ 1972 ರವರೆಗೆ ಬಿಬಿಸಿಯನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು.

India Today, documentary, series, India, controversy,

Articles You Might Like

Share This Article