ಭಾರತ ತಂಡದ ‘ಸೂಪರ್ ಸ್ಟಾರ್’ಗಳ ಬಗ್ಗೆ ಎಚ್ಚರವಹಿಸಿ

Social Share

ನವದೆಹಲಿ, ನ. 16- ಟಿ 20 ವಿಶ್ವಕಪ್ ನಂತರ ಸೆಮಿಫೈನಲ್ ಸೋತು ಪ್ರಶಸ್ತಿ ಕೈಚೆಲ್ಲಿರುವ ನ್ಯೂಜಿಲ್ಯಾಂಡ್ ಹಾಗೂ ಭಾರತ ತಂಡಗಳು ಈಗ ಟ್ವೆಂಟಿ-20 , ಏಕದಿನ ಸರಣಿಗಳನ್ನು ಆಡಲು ಸಜ್ಜಾಗಿದೆ.

ಸರಣಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್, ಭಾರತ ತಂಡವು ಟಿ-20 ಮುಕುಟ ಗೆಲ್ಲುವಲ್ಲಿ ಎಡವಿದ್ದರೂ ಕೂಡ ಆ ತಂಡದಲ್ಲಿ ಸೂಪರ್ ಸ್ಟಾರ್ಗಳ ದಂಡೇ ಇರುವುದರಿಂದ ನಾವು ಅವರನ್ನು ಲಘುವಾಗಿ ಪರಿಗಣಿಸುವುದಿಲ್ಲ' ಎಂದು ಹೇಳಿದ್ದಾರೆ.

ಟೀಂ ಇಂಡಿಯಾವು ಕಳೆದೆರಡು ವರ್ಷಗಳಿಂದ ಟಿ 20 ಮಾದರಿಯಲ್ಲಿ ಹೆಚ್ಚು ಪಂದ್ಯಗಳನ್ನು ಆಡಿ ಸಾಕಷ್ಟು ಸರಣಿಗಳನ್ನು ಗೆದ್ದಿದೆ. ಆ ತಂಡದ ಬೌಲಿಂಗ್ ಹಾಗೂ ಬ್ಯಾಟಿಂಗ್ ಕೂಡ ಬಲಿಷ್ಠವಾಗಿರುವುದರಿಂದ ನಾವು ಸುಲಭವಾಗಿ ಸರಣಿಯನ್ನು ಗೆಲ್ಲುತ್ತೇವೆ’ ಎಂದು ಭಾವಿಸುವುದು ತಪ್ಪು ಎಂದು ಕೇನ್ ಪ್ರತಿಕ್ರಿಯಿಸಿದ್ದಾರೆ.

ಚಿಕಿತ್ಸೆ ನೆಪದಲ್ಲಿ ಮಹಿಳೆಯರ ಅಂಗಾಗ ಮುಟ್ಟುತ್ತಿದ್ದ ಆರೋಪಿ ಬಂಧನ

ಟ್ವೆಂಟಿ ಹಾಗೂ ಏಕದಿನ ಸರಣಿಗೆ ಅಲಭ್ಯರಾಗಿರುವ ಕಿವೀಸ್ನ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರ ಬಗ್ಗೆ ಪ್ರತಿಕ್ರಿಯಿಸಿದ ಕೇನ್, ` ಟ್ರೆಂಟ್ ಬೌಲ್ಟ್ ಅವರು ನಮ್ಮ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದು, ಅವರ ಅಲಭ್ಯತೆ ಟೂರ್ನಿಯಲ್ಲಿ ಕಾಡಲಿದೆ. ಮುಂದಿನ ಸರಣಿಗಳಿಗೆ ಅವರ ಸೇವೆ ತಮ್ಮ ತಂಡಕ್ಕೆ ದೊರೆಯುತ್ತದೆ ಎಂದು ಭಾವಿಸುತ್ತೇನೆ.

ಪ್ರತಿಯೊಬ್ಬ ಆಟಗಾರರು ತಮ್ಮ ಕ್ರಿಕೆಟ್ ಜೀವನದಲ್ಲಿ ವಿಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಯ ಬೇಕಾಗುತ್ತದೆ, ಅದರಂತೆ ಬೌಲ್ಟ್ ತಂಡಕ್ಕೆ ಮರಳಲು ಅವರೇ ಸ್ವಇಚ್ಛೆ ನಿರ್ಣಯ’ ತೆಗೆದುಕೊಳ್ಳಬೇಕೆಂದು ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

ಚುನಾವಣೆಯಲ್ಲಿ ಗೆಲವು ಕಷ್ಟವಾಗಬಹುದು : ಸಿದ್ದರಾಮಯ್ಯಗೆ ಮುನಿಯಪ್ಪ ಎಚ್ಚರಿಕೆ

ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ 3 ಟ್ವೆಂಟಿ, 3 ಏಕದಿನ ಪಂದ್ಯಗಳ ಸರಣಿ ನಡೆಯಲಿದ್ದು, ನವೆಂಬರ್ 18 ರಂದು ಮೊದಲ ಟಿ 20 ಪಂದ್ಯ ನಡೆಯಲಿದ್ದು ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದರೆ, ಏಕದಿನದ ನಾಯಕತ್ವವನ್ನು ಶಿಖರ್ ಧವನ್ ವಹಿಸಿಕೊಂಡಿದ್ದಾರೆ.

Articles You Might Like

Share This Article