ಭಾರತದ ಸರಣಿಗೆ ಕಿವೀಸ್ ತಂಡ ಪ್ರಕಟ

Social Share

ನವದೆಹಲಿ, ನ. 15- ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಟಿ 20 ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಸೋತು ಪ್ರಶಸ್ತಿ ಆಸೆ ಕೈಚೆಲ್ಲಿದ್ದ ನ್ಯೂಜಿಲ್ಯಾಂಡ್ ತಂಡವು ಭಾರತದ ವಿರುದ್ಧದ ಏಕದಿನ ಹಾಗೂ ಟಿ 20 ಸರಣಿಗೆ 15 ಸದಸ್ಯರ ತಂಡವನ್ನು ಇಂದು ಪ್ರಕಟಿಸಿದೆ.

ತಂಡದ ಹಿರಿಯ ಆಟಗಾರರಾದ ಮಾರ್ಟಿನ್ ಗುಪ್ಟಿಲ್ ಹಾಗೂ ಟ್ರೆಂಟ್ ಬೌಲ್ಟ್ ಅವರು ತಂಡದಿಂದ ಹೊರಗಿಡಲಾಗಿದೆ. ನವೆಂಬರ್ 18 ರಿಂದ ಮೆನ್ ಇನ್ ಬ್ಲೂ ವಿರುದ್ಧ ನ್ಯೂಜಿಲ್ಯಾಂಡ್ ತಂಡವು 3 ಏಕದಿನ ಹಾಗೂ 3 ಟ್ವೆಂಟಿ 20 ಪಂದ್ಯವನ್ನು ಆಡಲಿದೆ.

ದೀರ್ಘಕಾಲದ ಕ್ರಿಕೆಟ್‍ನಲ್ಲಿ ತೊಡಗಿದ್ದ ವೇಗಿ ವ ಟ್ರೆಂಟ್ ಬೌಲ್ಟ್ ಅವರು ಕುಟುಂಬದೊಂದಿಗೆ ಸಮಯ ಕಳೆಯಲು ಇಚ್ಛಿಸಿ ಮಂಡಳಿಯನ್ನು ಕೋರಿದ್ದರಿಂದ ಅವರನ್ನು ಆಯ್ಕೆ ಮಂಡಳಿಯು ಪರಿಗಣಿಸಿಲ್ಲ ಹಾಗೂ 2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯುವ ಸಲುವಾಗಿ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ ಎಂದು ತಂಡದ ಕೋಚ್ ಗ್ಯಾರಿ ಸ್ಟೇಡ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸ್ಯಾಂಡಲ್‍ವುಡ್ ನಿರ್ದೇಶಕ ಮುರಳಿಕೃಷ್ಣ ವಿಧಿವಶ

ಏಕದಿನ ಹಾಗೂ ಟ್ವೆಂಟಿ-20 ಮಾದರಿ ಕ್ರಿಕೆಟ್‍ಗೆ ಬಹುತೇಕ ಒಂದೇ ತಂಡವನ್ನು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದ್ದು, ತಂಡದ ಸಾರಥ್ಯವನ್ನು ಕೇನ್ ವಿಲಿಯಮ್ಸ್ ಅವರ ಹೆಗಲಿಗೆ ಕಟ್ಟಿದೆ.

ತಂಡಗಳು ಇಂತಿವೆ:
ಕೇನ್ ವಿಲಿಯಮ್ಸನ್ ( ನಾಯಕ), ಫಿನ್ ಅಲೆನï, ಮೈಕೆಲ್ ಬ್ರೇಸ್ವೆಲï, ಡೆವೊನ್ ಕಾನ್ವೇ ( ವಿಕೆಟ್ ಕೀಪರ್), ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ (ಏಕದಿನ), ಟಾಮ್ ಲ್ಯಾಥಮ್ (ಏಕದಿನ) (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲï, ಆಡಮ್ ಮಿಲ್ನೆ, ಜಿಮ್ಮಿ ನೀಶಮï, ಗ್ಲೆನ್ ಫಿಲಿ¥್ಸï, ಮಿಚೆಲ್ ಸ್ಯಾಂಟ್ರ್ನರ್, ಇಶ್ ಸೋ (ಟಿ20), ಟಿಮ್ ಸೌಥಿ, ಬ್ಲೇರ್ ಟಿಕ್ನರ್ (ಟಿ20)

ಶ್ರದ್ದಾ ವಿಕೃತ ಹತ್ಯೆ ಹಿಂದೆ ಲವ್ ಜಿಹಾದ್ ಶಂಕೆ, ಗಲ್ಲು ಶಿಕ್ಷೆಗೆ ಒತ್ತಾಯ
ಟಿ 20:
ಮೊದಲ ಪಂದ್ಯ: ನವೆಂಬರ್ 18- ವೆಲ್ಲಿಂಗ್ಟನ್
ಎರಡನೆ ಪಂದ್ಯ: ನವೆಂಬರ್ 20- ಮೌಂಟ್ ಮುನುಗಲ್
ಮೂರನೆ ಪಂದ್ಯ: ನವೆಂಬರ್ 22- ನೈಪೀಯರ್
ಏಕದಿನ:
ಮೊದಲ ಪಂದ್ಯ: ನವೆಂಬರ್ 25 ಅಕ್ಲಂಡ್
ಎರಡನೆ ಪಂದ್ಯ: ನವೆಂಬರ್ 27- ಪ್ಯಾಮಿಲ್ಟನ್
ಮೂರನೆ ಪಂದ್ಯ: ನವೆಂಬರ್ 30- ಕ್ರಿಸ್ಟ್ ಚರ್ಚ್

Articles You Might Like

Share This Article