5ನೇ ಭಾರಿಗೆ ವಿಶ್ವಕಪ್‌ ಗೆದ್ದ ಭಾರತ, ಆಟಗಾರರಿಗೆ ಬಿಸಿಸಿಐ ಬಂಪರ್ ಗಿಫ್ಟ್..!

Social Share

ಆಂಟಿಗುವಾ,ಫೆ.6- ಇಲ್ಲಿನ ಸರ್ ವಿವಿಯನ್ ರಿಚಡ್ರ್ಸ್ ಕ್ರೀಡಾಂಗಣದಲ್ಲಿ ನಡೆದ 19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯ ಬೆದ್ದ ಭಾರತದ ಅಂಡರ್-1 ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಇದು ಭಾರತದ ಪಾಲಿಗೆ ದಾಖಲೆಯ 5ನೇ ಬಾರಿಯ ವಿಶ್ವಕಪ್ ಗೆಲುವಾಗಿದ್ದು ದೇಶ ಹೆಮ್ಮೆಪಡುವಂತೆ ಕಿರಿಯರು ಸಾಧನೆ ಮಾಡಿದ್ದಾರೆ.
ಭಾರತದ ವಿರುದ್ಧ ಸೋತು ಅತ್ತ ಇಂಗ್ಲೆಂಡ್ ತಂಡ ನಿರಾಸೆ ಕಂಡರೂ ತಲೆಯೆತ್ತಿ ಸ್ವದೇಶಕ್ಕೆ ಮರಳಿದೆ. ಆಂಟಿಗುವಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಂಡರ್ 19 ತಂಡ 5ನೇ ಬಾರಿಗೆ ವೀಶ್ವಕಪ್ ಟ್ರೋಫೀಗೆ ಮುತ್ತಿಕ್ಕಿತ್ತು. ರಾಜ್ ಬಾವಾ ಅವರ ಆಲ್‍ರೌಂಡ್ ಆಟ ಭಾರತದ ಗೆಲುವಿಗೆ ನೆರವು ನೀಡಿತು.


ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಯು-19 ತಂಡವು 44.5 ಓವರ್‍ಗಳಲ್ಲಿ 189 ರನ್‍ಗಳಿಗೆ ಆಲೌಟ್ ಆಯಿತು. 190 ರನ್‍ಗಳ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ಆರು ವಿಕೆಟ್ ಕಳೆದುಕೊಂಡಿತ್ತಾದರೂ 47.4 ಓವರ್‍ಗಳಲ್ಲಿ 7 ವಿಕೆಟ್‍ಗೆ 195 ರನ್ ಗಳಿಸಿ ಗೆಲುವಿನ ನಗೆಬೀರಿತು. 48ನೇ ಓವರ್‍ನ 4ನೇ ಎಸೆತದಲ್ಲಿ ದಿನೇಶ್ ಬಾಣಾ ಅವರು ಸಿಡಿಸಿದ ಸಿಕ್ಸರ್ ಭಾರತವನ್ನು ಗೆಲುವಿನ ದಡ ಸೇರಿಸಿತು. ಈ ಹಿಂದೆ ಭಾರತ 2000, 2008, 2012, 2018ರಲ್ಲಿ ಯು-19 ವಿಶ್ವಕಪ್ ಗೆದ್ದಿತ್ತು.
ಅಂತಿಮ ಪಂದ್ಯದಲ್ಲಿ ಟಾಸ್‍ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ರಾಜ್ ಬಾವಾ(31ಕ್ಕೆ 5) ಮತ್ತು ರವಿಕುಮಾರ್ (34ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ 91 ರನ್‍ಗಳಾಗುವಷ್ಟರಲ್ಲಿ 7 ವಿಕೆಟ್‍ಗಳನ್ನು ಒಪ್ಪಿಸಿತು. ಆದಾಗ್ಯೂ ಮಿಡ್ಲಸ್ ಆರ್ಡರ್ ಬ್ಯಾಟರ್ ಜೇಮ್ಸ್ ರೀವ್( 1 116 ಎಸೆತಗಳಲ್ಲಿ 12 ಬೌಂಡರಿ ಸಹಿತ 95) ಮತ್ತು ಕೆಳಕ್ರಮಾಂಕದ ಜೇಮ್ಸ್ ಸೇಲ್ಸ್(ಅಜೇಯ 34), ಅವರ ದಿಟ್ಟ ಆಟದ ಮೂಲಕ ಚೇತರಿಕೆ ಕಂಡು 44.5 ಓವರ್‍ಗಳಲ್ಲಿ 189 ರನ್ ಗಳಿಸಲು ಶಕ್ತವಾಯಿತು.


ಗುರಿ ಬೆನ್ನತ್ತಿದ ಭಾರತ ಕೆಲವು ಆತಂಕದ ಕ್ಷಣಗಳನ್ನು ಎದುರಿಸಿದರೂ ಗುರಿ ಮೀರುವಲ್ಲಿ ಎಡವಲಿಲ್ಲ. ನಿಶಾಂತ್ ಸಿಂಧು ಅವರ ಸಕಾಲಿಕ ಅರ್ಧಶತಕ(ಅಜೇಯ 50 ರನ್, 54 ಎಸೆತ, 5 ಬೌಂಡರಿ, 1 ಸಿಕ್ಸರ್) ಭಾರತಕೆ ನೆರವಾಯಿತು. ಫೈನಲ್ ಪಂದ್ಯದಲ್ಲಿ 31 ರನ್‍ಗಳಿಗೆ 5 ವಿಕೆಟ್ ಪಡೆದ 35 ರನ್ ಗಳಿಸಿದ ರಾಜ್ ಬಾವಾ ಪಂದ್ಯದ ವ್ಯಕ್ತಿ ಶ್ರೇಯ ಪಡೆದರು. ದಕ್ಷಿಣ ಆಫ್ರಿಕಾದ ಡೇವಿಡ್ ಬ್ರೇವಿಸ್ ಟೂರ್ನಿಯ ಆಟಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್:
ಇಂಡ್ಲೆಂಡ್ 44.5 ಓವರ್‍ಗಳಲ್ಲಿ 189, ಭಾರತ 47.4 ಓವರ್‍ಗಳಲ್ಲಿ 195ಕ್ಕೆ 6, ಫಲಿತಾಂಶ: ಭಾರತ ತಂಡಕ್ಕೆ ಇಂಗ್ಲೆಂಡ್ ವಿರುದ್ಧ 4 ವಿಕೆಟ್‍ಗಳ ಗೆಲುವು ಮತುತ ಪ್ರಶಸ್ತಿ.
ಯಶ್ ಧೂಳ್ ಸಂತಸ: ಭಾರತಕ್ಕಿದು ಹೆಮ್ಮೆಯ ಕ್ಷಣ.ನಾವು ಇದನ್ನು ಸಾಸಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಭಾರ ಯು-19 ತಂಡದ ನಾಯಕ ಯಶ್ ಧುಳ್ ಹೇಳಿದರು.
ಅಭಿನಂದನೆಗಳ ಮಹಾಪೂರ: ಭಾರತ ಕಿರಿಯರ ತಂಡದ ವಿಶ್ವಕಪ್ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ರಾಜಕೀಯ ಹಾಲಿ ಧುರೀಣರು ಮತ್ತು ಮಾಜಿ ಕ್ರಿಕೆಟಿಗರು, ಅಮಿತಾಬ್ ಬಚ್ಚನ್ ಸೇರಿದಂತೆ ಚಿತ್ರರಂಗದ ಸೆಲೆಬ್ರಿಟಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದ ಬರುತ್ತಿದೆ.
ಭರಪೂರ ಬಹುಮಾನ: ವಿಶ್ವಕಪ್ ವಿಜೇತ ಕಿರಿಯರ ತಂಡದ ಪ್ರತಿಯೊಬ್ಬ ಸದಸ್ಯರಿಗೂ ತಲಾ 40 ಲಕ್ಷ ರೂ.ಗಳ ನಗದು ಬಹುಮಾನವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಕಟಿಸಿದ್ದಾರೆ. ತಂಡದ ಸಿಬ್ಬಂದಿಗೆ ತಲಾ 25 ಲಕ್ಷ ರೂ.ಗಳ ನಗದು ಬಹುಮಾನವನ್ನು ಗಂಗೂಲಿ ಘೋಷಿಸಿದ್ದಾರೆ.

Articles You Might Like

Share This Article