ಭಯೋತ್ಪಾದಕರಿಗೆ ಆಶ್ರಯ ನೀಡುವುದು ಸಲ್ಲ : ಭಾರತ-ಅಮೆರಿಕ ಜಂಟಿ ಆಕ್ಷೇಪ

Social Share

ನವದೆಹಲಿ, ಡಿ.14- ವಿಶ್ವದ ಎಲ್ಲಾ ರಾಷ್ಟ್ರಗಳು ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಬೇಕು ಎಂದು ಭಾರತ ಮತ್ತು ಅಮೆರಿಕ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿವೆ.

ಭಾರತ-ಅಮೆರಿಕ ಭಯೋತ್ಪಾದನ ಪ್ರತಿಬಂಧಕ ಜಂಟಿ ಕಾರ್ಯಾಚರಣೆ ಸಮೂಹದ 19ನೇ ಹಾಗೂ ಭಾರತ- ಅಮೆರಿಕ ಪ್ರತಿನಿಧಿಗಳ 9ನೇ ಅಧಿವೇಶನದ ಮಾತುಕತೆಗಳು ಡಿ. 12 ಮತ್ತು 13ರಂದು ನಡೆದಿದ್ದು, ಬಳಿಕ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಭಯೋತ್ಪಾದಕರ ಅಂತರ್‍ರಾಷ್ಟ್ರೀಯ ಪ್ರವಾಸವನ್ನು ವಿಚಲಿತಗೊಳಿಸುವ ಹೆಜ್ಜೆಗಳನ್ನಿಡಲು ನಿರ್ಧರಿಸಲಾಗಿದೆ.

ವಿಶ್ವದ ಎಲ್ಲಾ ರಾಷ್ಟ್ರಗಳು ತಕ್ಷಣ ಮತ್ತು ಸೂಕ್ತವಾದ ಕ್ರಮಗಳ ಮೂಲಕ ತಮ್ಮ ನೆಲವನ್ನು ಭಯೋತ್ಪಾದಕರ ನೆಲೆಗೆ ಒದಗಿಸಲಾಗಿಲ್ಲ ಎಂಬುದನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಲಾಗಿದೆ. ಉಭಯ ರಾಷ್ಟ್ರಗಳು ಪರಸ್ಪರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿವೆ.

ನಮಗೆ ನೀತಿ ಪಾಠ ಅಗತ್ಯವಿಲ್ಲ : ಸಿದ್ದುಗೆ ಸಿಎಂ ಗುದ್ದು

ಭಯೋತ್ಪಾದನೆಯಿಂದಾಗುವ ಆತಂಕಗಳು ಮತ್ತು ಅನಾಹುತಗಳ ಬಗ್ಗೆ ಸುದೀರ್ಘ ಚರ್ಚೆಯಾಗಿದೆ. ಜಾಗತಿಕವಾಗಿ ಉಗ್ರ ಸಂಘಟನೆಗಳೆಂದು ಗುರುತಿಸಲಾದ ಅಲ್-ಖೈದ, ಐಸೀಸ್, ಲಸ್ಕರ್-ಇ-ತೊಯ್ಬಾ, ಜೈಷ್-ಇ- ಮೊಹಮ್ಮದ್, ಅಲ್-ಬದರ್ ಸಂಘಟನೆಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕಿದೆ.

ಈ ಸಂಘಟನೆಗಳ ಉಗ್ರರು ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಅಂತರ್‍ರಾಷ್ಟ್ರೀಯ ಎಲ್ಲಾ ಮಾದರಿಯ ಉಗ್ರವಾದವನ್ನು ತೀವ್ರವಾಗಿ ಖಂಡಿಸುವುದಾಗಿ ಉಭಯ ರಾಷ್ಟ್ರಗಳು ಸ್ಪಷ್ಟಪಡಿಸಿವೆ.

ಕ್ಯಾಂಟರ್-ಇಂಡಿಕಾ ಮುಖಾಮುಖಿ ಡಿಕ್ಕಿ, ಭೀಕರ ಅಪಘಾತದಲ್ಲಿ ನಾಲ್ವರ ಸಾವು

26/11ರ ಮುಂಬೈಮತ್ತು ಪಠಾನ್ ಕೋಟ್ ದಾಳಿಗೆ ನ್ಯಾಯಾ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡುವ ಅಗತ್ಯವಿದೆ. ಉಭಯ ರಾಷ್ಟ್ರಗಳು ತಮ್ಮ ತಂತ್ರಗಾರಿಕೆಯನ್ನು ಮತ್ತಷ್ಟು ತೀವ್ರಗೊಳಿಸುವುದು ಮತ್ತು ಆಧುನಿಕ ಭದ್ರತಾ ಸೌಲಭ್ಯಗಳನ್ನು ಪಾಲುಗಾರಿಕೆಯಲ್ಲಿ ಅನುಸರಿಸುವುದು ಈ ಮೂಲಕ ಜಾಗತಿಕ ಭಯೋತ್ಪಾದನೆಯನ್ನು ಹತ್ತಿಕ್ಕಿ ವಿಶ್ವದ ಶಾಂತಿ ಮತ್ತು ಭದ್ರತೆಯನ್ನು ದೃಢೀಕರಿಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ.

India, US, countries, take, immediate action, against, terrorism,

Articles You Might Like

Share This Article