ನವದೆಹಲಿ, ಆಗಸ್ಟï 4 – ವೇಗವಾಗಿ ವಿಕಸನಗೊಳ್ಳುತ್ತಿರುವ ಪ್ರಾದೇಶಿಕ ಭದ್ರತಾ ಸನ್ನಿವೇಶದ ಮಧ್ಯೆ ಭಾರತ ಮತ್ತು ಅಮೆರಿಕ ಅಕ್ಟೋಬರ್‍ನಲ್ಲಿ ಉತ್ತರಾಖಂಡದ ಔಲಿಯಲ್ಲಿ ಎರಡು ವಾರಗಳ ಕಾಲ ಮೆಗಾ ಮಿಲಿಟರಿ ಸಮರಾಭ್ಯಾಸ ನಡೆಸಲಿವೆ.
18ನೇ ಆವೃತ್ತಿಯ ಯುದ್ಧ ಅಭ್ಯಾಸ ಅಕ್ಟೋಬರ್ 14 ರಿಂದ 31 ರವರೆಗೆ ನಡೆಯಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಹಲವಾರು ಸಂಕೀರ್ಣ ಕಸರತ್ತು ಯೋಜಿಸಲಾಗಿದೆ ಎಂದು ಅವರು ಹೇಳಿದರು. 2021 ರ ಅಕ್ಟೋಬರ್‍ನಲ್ಲಿ ಅಮೆರಿಕದ ಅಲಾಸ್ಕಾದಲ್ಲಿ ನಡೆದಿತ್ತು ಭಾರತ ಮತ್ತು ಅಮೆರಿಕ ಸೇನೆಗಳ ನಡುವೆ ತಿಳುವಳಿಕೆ, ಸಹಕಾರ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಈ ಯುದ್ದಾಬ್ಯಾಸ ಹೊಂದಿದೆ ಪೂರ್ವ ಲಡಾಖ್‍ನ ಭಾರತ- ಚೀನಾ ಗಡಿ ರೇಖೆಯ ಸಮೀಪವೇ ನಡೆಯುತ್ತಿರುವುದು ಮಹತ್ವ ಪಡೆದಿದೆ.
ಕಳೆದ ಕೆಲವು ವರ್ಷಗಳಿಂದ ಭಾರತ-ಅಮೆರಿಕ ರಕ್ಷಣಾ ಸಂಬಂಧಗಳು ಏರುಮುಖದಲ್ಲಿವೆ. ಜೂನ್ 2016 ರಲ್ಲಿ ಅಮೆರಿಕವು ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ಎಂದು ಗೊತ್ತುಪಡಿಸಿತು. ಕಳೆದ ಕೆಲವು ವರ್ಷಗಳಿಂದ ಉಭಯ ದೇಶಗಳು ಪ್ರಮುಖ ರಕ್ಷಣಾ ಮತ್ತು ಭದ್ರತಾ ಒಪ್ಪಂದಗಳಿಗೆ ಸಹಿ ಹಾಕಿವೆ.
2016 ರಲ್ಲಿ, ತಮ್ಮ ಮಿಲಿಟರಿ ನೆಲೆಗಳ ಪರಸ್ಪರರ ದುರಸ್ತಿ ಮತ್ತು ಸರಕು ಸರಬರಾಜು ಮರುಪೂರ್ಣವಾಗಿ ಬಳಸಲು ಅನುಮತಿ ಸಹಕಾರ ಇದಲ್ಲದೆ ಉಭಯ ದೇಶಗಳು 2018 ರಲ್ಲಿ ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿದ್ದು ಇದು ಎರಡು ಮಿಲಿಟರಿಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಒದಗಿಸುತ್ತದೆ ಮತ್ತು ಅಮೆರಿಕದಿಂದ ಭಾರತಕ್ಕೆ ಉನ್ನತ-ಮಟ್ಟದ ತಂತ್ರಜ್ಞಾನವನ್ನು ಮಾರಾಟ ಮಾಡಲು ಅವಕಾಶ ಒದಗಿಸುತ್ತದೆ.
ಅಕ್ಟೋರ್ಬ 2020 ರಲ್ಲಿ, ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಭಾರತ ಮತ್ತು ಯುಎಸ್ ಬಿಇಸಿಎ (ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ) ಕ್ಕೆ ಮುದ್ರೆ ಹಾಕಿದವು. ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಮಿಲಿಟರಿ ತಂತ್ರಜ್ಞಾನ, ಲಾಜಿಸ್ಟಿಕ್ಸ ಮತ್ತು ಜಿಯೋಸ್ಪೇಷಿಯಲ್ ನಕ್ಷೆಗಳನ್ನು ಹಂಚಿಕೊಳ್ಳಲು ಒಪ್ಪಂದವು ಇದಾಗಿದೆ