ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ : ಮೊದಲ ಪಂದ್ಯ ಗೆದ್ದು 1-0 ಮುನ್ನಡೆ ಸಾಧಿಸಿದ ಭಾರತ

Social Share

ಚಿತ್ತಗಾಂಗ್,ಡಿ.18- ಇಲ್ಲಿ ನಡೆದ ಅತಿಥೇಯ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಭಾರತ ಜಯಸಾಧಿಸಿದೆ. ಗೆಲುವಿಗಾಗಿ 513 ರನ್‍ಗಲ 4ನೇ ದಿನದಾಟ ಮುಗಿದಾಗ 6 ವಿಕೆಟ್ ನಷ್ಟಕ್ಕೆ 272 ರನ್ ಮಾಡಿತ್ತು ಕೊನೆಯ ದಿನವಾದ ಇಂದು ಮೆಹಿದಿ ಹಸನ್ ಮಿರಾಜ್ ಮತ್ತು ಅರ್ಧಶತಕ ಸಿಡಿಸಿದ್ದ ಶಕೀಬ್ ಅಲ್‍ಹಸನ್ ಕಣಕಿಳಿದು ತಾಳ್ಮಯ ಆಟಕ್ಕೆ ಮುಂದಾದರು ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ಸ್ಪಿನ್ ಜೋಡಿ ಬೇಗನೇ ಔಟ್ ಮಾಡಿ ಪೆವೀಲಿನ್‍ಗೆ ಅಟ್ಟಿದರು.

ಮೊದಲು ವೇಗಿ ಸಿರಾಜ್ ಬಾಂಗ್ಲಾ ಭರವಸೆ ಆಟಗಾರ ಮೆಹಿದಿ ಹಸನ್ ಮಿರಾಜ್ ವಿಕೆಟ್ ಕಬಳಿಸಿದರೆ ನಂತರ ಶಕೀಬ್ ಅಲ್‍ಹಸನ್‍ಗೆ ಕುಲ್ದೀಪ್ ಯಾದವ್ ಪೆವೀಲಿಯನ ಹಾದಿ ತೋರಿದರು.

ಆಟವಾಡುತ್ತಿದ್ದಾಗ ನಾಡ ಬಂದೂಕಿನಿಂದ ಗುಂಡು ಹಾರಿ ಬಾಲಕ ಸಾವು

ಉಳಿದ ಕೆಳ ಕ್ರಮಾಂಕದ ಆಟಗಾರು ಪ್ರತಿರೋದ ತೋರದ ಔಟಾದರು ಬೋಜನ ವಿರಾಮಕ್ಕೂ ಮುನ್ನವೇ ಬಾಂಗ್ಲಾ 324 ರನ್‍ಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು. ಭಾರತ 188 ರನ್‍ಗಳ ಜಯ ಸಾಸಿ ಎರಡು ಪಂದ್ಯಗಳ ಟೆಸ್ಟ್‍ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.ಬ್ಯಾಟಿಂಗ್ ಹಾಗು ಬೌಲಿಂಗ್‍ನಲ್ಲಿ ಅಮೋಘ ಪ್ರದರ್ಶನ ತೋರಿದ ರಾಹುಲ್ ಪಡೆ ಸಂಭ್ರಮಿಸಿದೆ.

#India, #Bangladesh, #1stTest, #Highlights,

Articles You Might Like

Share This Article