ಚತ್ತೋಗ್ರಾಮ್, ಡಿ. 15- ರವಿಚಂದ್ರನ್ ಅಶ್ವಿನ್ (58 ರನ್, 2 ಬೌಂಡರಿ, 2 ಸಿಕ್ಸರ್) ಹಾಗೂ ಕುಲ್ದೀಪ್ ಯಾದವ್ ( 40 ರನ್, 5 ಬೌಂಡರಿ) ರ 92 ರನ್‍ಗಳ ಜೊತೆಯಾಟದಿಂದಾಗಿ ಭಾರತ ತಂಡವು ಮೊದಲ ಇನ್ನಿಂಗ್ಸ್‍ನಲ್ಲಿ 404 ರನ್‍ಗಳಿಗೆ ಅಲೌಟ್ ಆಗಿದೆ.
ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿದ್ದ ಭಾರತ ತಂಡವು ಶ್ರೇಯಸ್ ಅಯ್ಯರ್ ( 86 ರನ್, 10 ಬೌಂಡರಿ)ರವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಶ್ರೇಯಸ್ ಅಯ್ಯರ್ ಅವರು ಎಡಬೋಟ್ ಹೊಸೇನ್ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಶತಕ ವಂಚಿತರಾದರು. ನಿನ್ನೆ ಚೇತೇಶ್ವರ ಪೂಜಾರ ಕೂಡ 90 ರನ್ ಗಳಿಸಿ ಶತಕ ವಂಚಿತರಾಗಿದ್ದರು.
ಪ್ರೇಯಸಿ ಮೇಲಿನ ಕೋಪಕ್ಕೆ ಸ್ಕೂಟರ್‌ಗೆ ಬೆಂಕಿಯಿಟ್ಟ ಪ್ರಿಯಕರ
ಅಶ್ವಿನ್- ಕುಲ್ದೀಪ್ ಜುಗಲ್‍ಬಂದಿ:
ಶ್ರೇಯಸ್ ಅಯ್ಯರ್ ಔಟಾಗುತ್ತಿದ್ದಂತೆ ಕ್ರೀಸ್‍ಗೆ ಇಳಿದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ( 40 ರನ್, 5 ಬೌಂಡರಿ) ರವಿಚಂದ್ರನ್ ಅಶ್ವಿನ್( 58 ರನ್, 2 ಬೌಂಡರಿ, 2 ಸಿಕ್ಸರ್)ರೊಂದಿಗೆ 6 ವಿಕೆಟ್‍ಗೆ 92 ರನ್‍ಗಳ ಜೊತೆಯಾಟ ನೀಡಿದರು. ಅಶ್ವಿನ್ ಅವರು ಮೆಹ್ದಿನಿ ಹಸನ್ ಮಿರ್ಜಾ ಬೌಲಿಂಗ್‍ನಲ್ಲಿ ಔಟಾದ ನಂತರ ಮೊತ್ತ ಹೆಚ್ಚಿಸುವ ಆತುರದಲ್ಲಿ ಕುಲ್ದೀಪ್ ಯಾದವ್ ಟೈಜುಲ್ ಇಸ್ಲಾಮ್ ಬೌಲಿಂಗ್ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು. ನಂತರ ಉಮೇಶ್ ಯಾದವ್ 2 ಭರ್ಜರಿ ಸಿಕ್ಸರ್‍ಗಳ ನೆರವಿನಿಂದ 15 ರನ್ ಗಳಿಸಿ ತಂಡವನ್ನು 404ರ ಗಡಿ ಮುಟ್ಟಿಸಿದರು.
ಬೊಮ್ಮಾಯಿ -ಬಿಎಸ್‍ವೈ ನಡುವೆ ಶೀತಲ ಸಮರ..!
ಬಾಂಗ್ಲಾಗೆ ಆಘಾತ:
ಭಾರತ ತಂಡ ಆಲೌಟ್ ಆದ ನಂತರ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ದೇಶ ಆರಂಭದಲ್ಲೇ ವೇಗಿಗಳ ಬಲೆಗೆ ಬಿದ್ದು 8 ರನ್‍ಗಳಾಗುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಆರಂಭಿಕ ನಜಮುಲ್ ಸ್ಯಾಂಟೊ ರನ್ ಗಳಿಸದೇ ಮೊಹಮ್ಮದ್‍ಶಿರಾಜ್‍ಗೆ ವಿಕೆಟ್ ಒಪ್ಪಿಸಿದರೆ, ಯಶರ್ ಅಲಿ (4ರನ್) ಉಮೇಶ್ ಯಾದವ್ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡ್ ಆದರು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಬಾಂಗ್ಲಾದೇಶ 6 ಓವರ್‍ಗಳಲ್ಲಿ 12 ರನ್ ಗಳಿಸಿತ್ತು.
India vs Bangladesh, 1st Test,