ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ

Social Share

ಢಾಕಾ, ಡಿ.25- ಭಾರೀ ಕುತೂಹಲ ಕೆರಳಿಸಿದ್ದ ಬಾಂಗ್ಲಾದೇಶದ ವಿರುದ್ಧದ ದ್ವಿತೀಯ ಟೆಸ್ಟ್‍ನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಟೆಸ್ಟ್ ಸರಣಿ ಗೆದ್ದಿದೆ. ಎರಡು ಟೆಸ್ಟ್‍ಗಳ ಸರಣಿಯಲ್ಲಿ ಅಮೋಘ ಗೆಲುವು ದಾಖಲಿಸುವ ಮೂಲಕ ಕೆ.ಎಲ್. ರಾಹುಲ್ ಪಡೆ ಏಕದಿನ ಸರಣಿ ಸೋಲಿಗೆ ಪ್ರತಿಕಾರ ತೀರಿಸಿಕೊಂಡಿದೆ.

ಪಂದ್ಯಗೆಲ್ಲಲು 145 ರನ್ ಬೆನ್ನಟ್ಟಿದ ಭಾರತ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಅದ್ಭುತ ಗೆಲುವು ಸಾಧಿಸಿದೆ. ನಿನ್ನೆ ದಿನದಾಟ ಮುಗಿದಾಗ 45 ರನ್ ಗೆಲುವಷ್ಟರಲ್ಲಿಯೇ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಇಂದು ನಾಲ್ಕನೇ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್ ಐಯರ್ ಜೋಡಿ ಬಾಂಗ್ಲಾ ಬೌಲರ್‍ಗಳನ್ನು ಯಶಸ್ವಿಯಾಗಿ ಎದುರಿಸಿ ಉತ್ತಮ ಜೊತೆಯಾಟದ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಇಂದು ಬೆಳಗ್ಗೆ ಜೈದೇವ್ ಮತ್ತು ರಿಷಬ್ ಪಂಥ್ ತಾಳ್ಮೆಯಿಂದ ಬ್ಯಾಟ್ ಬೀಸಿದರಾದರೂ ಬಾಂಗ್ಲಾದ ಸ್ಪಿನ್ ದಾಳಿಗೆ ಚಡಪಡಿಸಿದರು. ಭಾರತ 54 ರನ್‍ಗಳಾಗಿದ್ದಾಗ ಶಕಿಬ್ ಹಲ್ ಹಸನ್ ಅವರು ಜೈದೇವ್ ವಿಕೇಟ್ ಉರುಳಿಸಿದಾಗ ಭಾರತದ ಐದನೇ ವಿಕೇಟ್ ಕಬಳಿಸಿ ಮತ್ತೆ ಬಾಂಗ್ಲಾ ಗೆಲುವಿನ ಆಸೆಯನ್ನು ಚಿಗುರಿಸಿದ್ದರು.

ಚಳಿಗಾಲದ ಚಂಡಮಾರುತಕ್ಕೆ ಅಮೆರಿಕ ತತ್ತರ, 18 ಮಂದಿ ಸಾವು

ಇದಾದ ಕೆಲವೇ ಹೊತ್ತಿನಲ್ಲಿ ರಿಷಬ್ ಪಂಥ್ ಕೂಡ ಹಸನ್ ಮಿರ್ಜಾ ಅವರ ಬೊಲಿಂಗ್‍ನಲ್ಲಿ ಔಟಾದಾಗ ಮತ್ತಷ್ಟು ಚಿಂತೆ ಆವರಿಸಿತ್ತು. ಆದರೆ ನಂತರ ಬಂದ ಶ್ರೇಯಸ್ ಐಯರ್ ಮತ್ತು ರವಿಚಂದ್ರನ್ ಅಶ್ವಿನ್ ಜೋಡಿ ಲೀಲಾಜಾಲವಾಗಿ ಬ್ಯಾಟ್ ಬೀಸಿ ಬಾಂಗ್ಲಾದ ಆಸೆಗೆ ತಣ್ಣೀರೆರಿಚಿದರು.

ಭರ್ಜರಿ ಹೊಡೆತಗಳ ಮೂಲಕ ಬೌಂಡರಿ ಗಿಟ್ಟಿಸುತ್ತಿದ್ದ ಈ ಜೋಡಿ ಯಾವುದೇ ಕ್ಷಣದಲ್ಲೂ ಒತ್ತಡಕ್ಕೆ ಒಳಗಾಗದೇ ಭೋಜನ ವಿರಾಮದ ವೇಳೆಗೆ ಭಾರತಕ್ಕೆ ಜಯ ತಂದುಕೊಟ್ಟಿದ್ದಾರೆ. 47 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಭಾರತ ಗೆಲುವ ದಾಖಲಿಸಿ ಬೀಗಿದೆ.

ಸಂಕ್ಷಿಪ್ತ ಸ್ಕೋರ್:
ಮೊದಲ ಬ್ಯಾಟಿಂಗ್ ಬಾಂಗ್ಲಾ ಪ್ರಥಮ ಇನ್ನಿಂಗ್ಸ್- 227
ಭಾರತ ಪ್ರಥಮ ಇನ್ನಿಂಗ್ಸ್- 304
ಬಾಂಗ್ಲಾ ದ್ವಿತೀಯ ಇನ್ನಿಂಗ್ಸ್ – 231
ಭಾರತ ದ್ವಿತೀಯ ಇನ್ನಿಂಗ್ಸ್ 7 ವಿಕೆಟ್ ನಷ್ಟಕ್ಕೆ 145
ಪಂದ್ಯ ಪುರುಷ ರವಿಚಂದ್ರನ್ ಅಶ್ವಿನ್, ಸರಣಿ ಶ್ರೇಷ್ಠ ಚೇತೇಶ್ವರ ಪೂಜಾರ
ಸರಣಿ 2-0 ಅಂತರದಲ್ಲಿ ಭಾರತಕ್ಕೆ ಸರಣಿ ಜಯ

India, Bangladesh, 2nd Test, sweep, series,

Articles You Might Like

Share This Article