ನಾಳೆಯಿಂದ ಇಂಗ್ಲೆಂಡ್- ಭಾರತ ಏಕದಿನ ಸರಣಿ ಸಮರ

Social Share

ಕೆನ್ನಿಂಗ್ಟನ್ ಓವಲ್, ಜು. 11- ಆಂಗ್ಲರ ನಾಡಿನಲ್ಲಿ ಘರ್ಜಿಸುತ್ತಿರುವ ಭಾರತದ ಹುಲಿಗಳು ನಾಳೆಯಿಂದ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. 5 ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ರಿಂದ ಸಮಬಲಗೊಳಿಸಿಕೊಂಡ ಭಾರತ ತಂಡವು ರೋಹಿತ್ ಸಾರಥ್ಯದಲ್ಲಿ 3 ಪಂದ್ಯಗಳ ಚುಟುಕು ಸರಣಿಯನ್ನು 2-1 ರಿಂದ ಗೆದ್ದು ಸರಣಿ ಗೆಲುವು ಸಾಸಿಧಿರುವ ಹುಮ್ಮಸ್ಸಿನಲ್ಲಿರುವ ಭಾರತದ ಆಟಗಾರರು ಈಗ ಏಕದಿನ ಸರಣಿಯನ್ನು ಜಯಿಸುವತ್ತ ಚಿತ್ತ ಹರಿಸಿದೆ.

ಬೌನ್ಸ್ ಪಿಚ್‍ನಲ್ಲಿ ರನ್‍ಗಳ ಸುರಿಮಳೆ:
ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣವು ಬೌನ್ಸ್ ಪಿಚ್ ಆಗಿದ್ದು ರನ್‍ಗಳ ಸುರಿಮಳೆಯೇ ಹರಿದು ಬರುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿದೆ. ಭಾರತ ಹಾಗೂ ಇಂಗ್ಲೆಂಡ್ ಎರಡು ತಂಡಗಳು ಸ್ಫೋಟಕ ಆಟಗಾರರನ್ನು ಹೊಂದಿರುವುದರಿಂದ ಪಂದ್ಯವನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ.

ಬೌನ್ಸ್ ಪಿಚ್ ಆಗಿರುವುದರಿಂದ ವೇಗ ಹಾಗೂ ಸ್ಪಿನ್ ಬೌಲರ್‍ಗಳು ತುಸು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕೂಡ ಬ್ಯಾಟ್ಸ್‍ಮನ್‍ಗಳು ಕೊಂಚ ಎಡವಿದರೂ ಬೌಲರ್‍ಗಳು ಮೇಲುಗೈ ಸಾಧಿಸುವ ಸಾಧ್ಯತೆಗಳೇ ಹೆಚ್ಚಿದೆ.

ಇಂಗ್ಲೆಂಡ್‍ಗೆ ಲಾಭ:
ಲಂಡನ್‍ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದ ಹಿಂದಿನ ಪಂದ್ಯಗಳತ್ತ ಚಿತ್ತ ಹರಿಸಿದರೆ ಭಾರತಕ್ಕಿಂತ ಇಂಗ್ಲೆಂಡ್‍ಗೆ ಹೆಚ್ಚು ಲಾಭದಾಯಕ ಪಿಚ್ ಆಗಿದೆ. ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ಈ ಪಿಚ್‍ನಲ್ಲಿ ಇದುವರೆಗೂ ಆಡಿರುವ 49 ಪಂದ್ಯಗಳಲ್ಲಿ 30ರಲ್ಲೇ ಗೆಲುವು ಸಾಧಿಸಿದ್ದರೆ, ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ 16 ಪಂದ್ಯಗಳಲ್ಲಿ 6ರಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಲಕ್ಕಿ ನಾಯಕನೆಂದೇ ಬಿಂಬಿಸಿಕೊಂಡಿರುವ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ನಂತರ ಇದುವರೆಗೂ ಸತತವಾಗಿ 6 ಸರಣಿಗಳನ್ನು ಗೆದ್ದಿದ್ದು ಈಗ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಯನ್ನು ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ.

ಟೆಸ್ಟ್ ವೀರರ ಎಂಟ್ರಿ:
ಭಾರತ ವಿರುದ್ಧ ಟೆಸ್ಟ್ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಾಜಿ ನಾಯಕ ಜೋ ರೂಟ್ ಹಾಗೂ ಜಾನಿ ಬ್ಯಾರಿಸ್ಟೋವ್ ಅವರು ಇಂಗ್ಲೆಂಡ್ ತಂಡಕ್ಕೆ ಮರಳಿರುವುದರಿಂದ ಬ್ಯಾಟಿಂಗ್ ಬಲ ಹೆಚ್ಚಾಗಿದ್ದು ಭಾರತದ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ಸೇಡು ತೀರಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ.
ಸತತ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿಗೂ ಈ ಸರಣಿ ಅಗ್ನಿಪರೀಕ್ಷೆಯಾಗಿದೆ.

Articles You Might Like

Share This Article