ಟೀಮ್ ಇಂಡಿಯಾ ವರುಣನ ಕಾಟ

Social Share

ಹ್ಯಾಮಿಲ್ಟನ್, ನ. 27-ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ 2 ಪಂದ್ಯದಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾಗುವ ಮೂಲಕ ಶಿಖರ್ ಧವನ್ ಸಾರಥ್ಯದ ಟೀಂ ಇಂಡಿಯಾಗೆ ಕಾಟ ಕೊಟ್ಟಿದೆ.

3 ಟ್ವೆಂಟಿ-20 ಸರಣಿಯೂ ಮಳೆ ಕಾಟದಿಂದಾಗಿ 2 ಪಂದ್ಯಗಳು ರದ್ದಾದರೂ ಕೂಡ 2ನೆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಟೀಮ್ ಇಂಡಿಯಾ ತಂಡವು ಗೆಲುವು ಸಾಧಿಸಿದ್ದ 1-0 ಯಿಂದ ಸರಣಿ ಕೈ ವಶಪಡಿಸಿಕೊಂಡಿತ್ತು.

ಅಕ್ಲೆಂಡ್‍ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‍ಗಳಿಂದ ಸೋತು 3 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಹಿನ್ನೆಡೆ ಅನುಭವಿಸಿತ್ತು. ಹ್ಯಾಮಿಲ್ಟನ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 1-1ರಿಂದ ಸಮಬಲ ಸಾಸುವ ಹೆಬ್ಬಯಕೆಯನ್ನು ಭಾರತ ತಂಡದ ನಾಯಕ ಶಿಖರ್ ಧವನ್ ಹೊಂದಿದ್ದರು. ಆದರೆ ಮಳೆಯ ಕಾಟದಿಂದಾಗಿ ಪಂದ್ಯವು 12.5 ಓವರ್‍ಗಳ ಆಟ ನಡೆಸಲು ಮಾತ್ರ ಸಾಧ್ಯವಾಯಿತು.

ಮಳೆಯ ಕಾಟ:
ಹ್ಯಾಮಿಲ್ಟನ್ ನಿನ್ನೆ ಎಡೆಬಿಡದೆ ಮಳೆ ಸುರಿದಿತ್ತು, ಇಂದು ಕೂಡ ವರುಣನ ಪ್ರತ್ಯಕ್ಷಗೊಂಡಿದ್ದರಿಂದ ಟಾಸ್ ಸ್ವಲ್ಪ ನಿಧಾನವಾಯಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡದ ನಾಯಕ ಶಿಖರ್ ಧವನ್ 3 ರನ್‍ಗಳಿಗೆ ಔಟಾಗುವ ಮೂಲಕ ಆಘಾತ ಅನುಭವಿಸಿತು.

ಇಂಧೋರ್ ತಲುಪಿದ ಕಾಂಗ್ರೆಸ್ ‘ಐಕ್ಯತಾ ಯಾತ್ರೆ’

ಭಾರತ ತಂಡವು 4.5 ಓವರ್‍ಗಳಲ್ಲಿ 22 ರನ್‍ಗಳನ್ನು ಗಳಿಸಿದ್ದಾಗ ಸುರಿದ ಮಳೆಯಿಂದಾಗಿ ಆಟವನ್ನು ಸ್ವಲ್ಪ ಸಮಯ ಸ್ಥಗಿತಗೊಳಿಸಲಾಯಿತು. ನಂತರ 29 ಓವರ್‍ಗಳ ಪಂದ್ಯವನ್ನು ನಿಗಧಿಗೊಳಿಸಲಾಯಿತು.

ಬ್ಯಾಟಿಂಗ್‍ಗೆ ಇಳಿದ ಶಿಖರ್ ಧವನ್ 5.1 ಓವರ್‍ನಲ್ಲಿ ಮ್ಯಾಟ್ ಹೇರಿ ಬೌಲಿಂಗ್‍ನಲ್ಲಿ ಫಗ್ರ್ಯೂಸನ್ ಬೌಲಿಂಗ್‍ನಲ್ಲಿ ಔಟಾದರು.

ಸೂರ್ಯ- ಗಿಲ್ ಮಿಂಚು:
ಶಿಖರ್ ಧವನ್ ಔಟಾಗುತ್ತಿದ್ದಂತೆ ಮೈದಾನಕ್ಕಿಳಿದ ಸೂರ್ಯಕುಮಾರ್ ಯಾದವ್ ಆರಂಭದಿಂದಲೂ ಸ್ಪೋಟಕ ಆಟಕ್ಕೆ ಮುಂದಾದರು. 2 ಬೌಂಡರಿ, 3 ಸಿಕ್ಸರ್‍ಗಳ ಸಹಿತ 25 ಎಸೆತಗಳಲ್ಲೇ 34 ರನ್‍ಗಳನ್ನು ಗಳಿಸಿದ್ದ ಯಾದವ್‍ಗೆ, ಆರಂಭಿಕ ಆಟಗಾರ ಶುಭಮನ್ ಗಿಲ್ (45 ರನ್, 4 ಬೌಂಡರಿ, 1 ಸಿಕ್ಸರ್) ಉತ್ತಮ ಸಾಥ್ ನೀಡಿದರು.

ಲಾಕ್‍ಡೌನ್ ಖಂಡಿಸಿ ಪಂಜು ಹಿಡಿದು ಬೀದಿಗಿಳಿದ ಚೀನಾ ಜನ

ಆದರೆ ತಂಡದ ಮೊತ್ತ 12.5 ಓವರ್‍ಗಳಲ್ಲಿ 89 ರನ್ ಗಳಿಸಿದ್ದಾಗ ಮತ್ತೆ ಮಳೆಯ ಆಗಮನವಾಯಿತು. ಈ ನಡುವೆ ಮೈದಾನ ಪರೀಕ್ಷಿಸಿದ ಅಂಪೈರ್‍ಗಳು ಪಂದ್ಯವನ್ನು ಮೊಟಕುಗೊಳಿಸಿದರು.

ಪ್ಲಾಸ್ಟಿಕ್ ಮುಕ್ತವಾಗಿರಲಿದೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ನವೆಂಬರ್ 30 ರಂದು ಕ್ರಿಸ್ಟ್ ಚರ್ಚ್‍ನಲ್ಲಿ ನಡೆಯಲಿರುವ 3ನೆ ಏಕದಿನ ಪಂದ್ಯದ ಮೇಲೆ ಈಗ ಎಲ್ಲರ ಚಿತ್ತ ಹರಿದಿದ್ದು, ಶಿಖರ್ ಧವನ್ ಪಡೆಗೆ ಸರಣಿ ಉಳಿಸಿಕೊಳ್ಳಲು ಈ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ನ್ಯೂಜಿಲೆಂಡ್ ಸರಣಿ ಕೈವಶಪಡಿಸಿಕೊಳ್ಳಲಿದೆ.

India, New Zealand, Match, called, off, due, rain,

Articles You Might Like

Share This Article