ಮೌಂಟ್ ಮೌಂಗನುಯಿ, ಮಾ.6- ಭಾರತೀಯ ವನಿತೆಯರ ಸಾಂಘಿಕ ಹೋರಾಟದಿಂದ ಪಾಕ್ ಎದುರು ಮಿಥಾಲಿ ರಾಜ್ ಪಡೆಯು ಇಂದಿಲ್ಲಿ ನಡೆದ ವಿಶ್ವಕಪ್‍ನ ಆರಂಭಿಕ ಪಂದ್ಯದಲ್ಲೇ 108 ರನ್‍ಗಳ ಭರ್ಜರಿ ಗೆಲುವು ಸಾಸುವ ಮೂಲಕ ಶುಭಾರಂಭ ಮಾಡಿದೆ.ಭಾರತದ ಬ್ಯಾಟರ್‍ಗಳು ನೀಡಿದ 244 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಪಾಕ್‍ನ ವನಿತೆಯರು ರಾಜೇಶ್ವರಿ ಗಾಯಕ್ವಾಡ್ ( 10-0- 31-4 ವಿಕೆಟ್) ಅವರ ಬೌಲಿಂಗ್ ಮೋಡಿಗೆ ಸಿಲುಕಿ 137 ರನ್‍ಗಳಿಗೆ ಅಲೌಟ್ ಆಗುವ ಮೂಲಕ 108 ರನ್‍ಗಳಿಂದ ಸೋಲು ಕಂಡರು.
ಪಾಕಿಸ್ತಾನದ ಪರ ಆರಂಭಿಕ ಆಟಗಾರ್ತಿ ಸಿದ್ರಾ ಅಮನ್ (30ರನ್, 3 ಬೌಂಡರಿ) ಬಿಟ್ಟರೆ ಉಳಿದ ಆಟಗಾರ್ತಿಯರು ಭಾರತದ ವೇಗಿ ಹಾಗೂ ಸ್ಪಿನ್ ಮೋಡಿಗೆ ಸಿಲುಕಿ ರನ್ ಗಳಿಸಲು ಪರದಾಡಿದರು. ಬಾಲಂಗೋಚಿ ಬ್ಯಾಟರ್ ಆದ ದಿನಾ ಬೇಗ್ (24 ರನ್, 2 ಬೌಂಡರಿ) ಅವರು ಮಿಂಚಿನ ಬ್ಯಾಟಿಂಗ್ ನಡೆಸಿದರಾದರೂ ತಂಡವನ್ನು ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ.
ಭಾರತದ ಪರ ರಾಜೇಶ್ವರಿ ಗಾಯಕ್ವಾಡ್ 4 ವಿಕೆಟ್ ಕಬಳಿಸಿದರೆ, ಜುಲಾನ್ ಗೋಸ್ವಾಮಿ ಹಾಗೂ ಸ್ನೇಹಾ ರಾನಾ ತಲಾ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಹಾಗೂ ಮೇಘನಾ 1 ವಿಕೆಟ್ ಕೆಡವಿದರು.
# ಮಂದನಾ, ರಾಣಾ, ಪೂಜಾ ಆಕರ್ಷಕ ಅರ್ಧಶತಕ:
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ವನಿತೆಯರು ಆರಂಭಿಕ ಆಘಾತ ಅನುಭವಿಸಿದರು. ಖಾತೆಯನ್ನು ತೆರೆಯುವ ಮುನ್ನವೇ ಶೆಫಾಲಿ ವರ್ಮಾ ಅವರು ದೀನಾ ಬೇಗ್ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡ್ ಆದರೆ, ನಾಯಕಿ ಮಿಥಾಲಿ ರಾಜ್ (9 ರನ್), ಹರ್ಮಿತ್ ಕೌರ್ ( 5 ರನ್),ವಿಕೆಟ್‍ಕೀಪರ್ ರೀಚಾ ಘೋಷ್ (1 ರನ್)ಗೆ ತಮ್ಮ ಆಟವನ್ನು ಸ್ಥಗಿತಗೊಳಿಸಿದರೆ,
ಸ್ಮೃತಿ ಮಂದಾನಾ (52ರನ್, 3 ಬೌಂಡರಿ, 1 ಸಿಕ್ಸರ್), ಸ್ನೇಹಾ ರಾಣಾ ( ಅಜೇಯ 53 ರನ್, 4 ಬೌಂಡರಿ), ಪೂಜಾ ವಸ್ತ್ರಕರ್ (67 ರನ್, 8 ಬೌಂಡರಿ), ದೀಪ್ತಿ ಶರ್ಮಾ (40 ರನ್, 2 ಬೌಂಡರಿ) ಗಳಿಸುವ ಮೂಲಕ ತಂಡದ ಮೊತ್ತವನ್ನು ನಿಗತ 50 ಓವರ್‍ಗಳಲ್ಲಿ 7 ವಿಕೆಟ್‍ಗಳ ನಷ್ಟಕ್ಕೆ 244 ರನ್‍ಗಳಿಗೆ ಮುಟ್ಟಿಸಿದರು.
ಪಾಕಿಸ್ತಾನ ಪರ ನಿದಾ ದಾರ್ ಹಾಗೂ ನಶ್ರಾ ಸಂಧು 2, ದಿನಾ ಬೇಗ್, ಅನಮ್ ಅಮಿನ್ ಹಾಗೂ ಫಾತಿಮಾ ಸಾನಾ ತಲಾ 1 ವಿಕೆಟ್ ಕೆಡವಿದರು.
