ನಾಳೆಯಿಂದ ಇಂಡೋ- ಲಂಕಾ ಸರಣಿ ; ಜಡ್ಡು ಮೇಲೆ ಎಲ್ಲರ ಕಣ್ಣು

Social Share

ಲಖನೌ, ಫೆ. 23- ವೆಸ್ಟ್ ಇಂಡೀಸ್ ತಂಡದ ವಿರುದ್ಧ 3 ಏಕದಿನ ಹಾಗೂ 3 ಟ್ವೆಂಟಿ-20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿರುವ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ನಾಳೆಯಿಂದ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಚುಟುಕು ಸಮರವನ್ನು ಎದುರಿಸಲಿದೆ. ವಿರಾಟ್ ಕೊಹ್ಲಿ, ರಿಷಭ್‍ಪಂತ್‍ರ ಅನುಪಸ್ಥಿತಿಯಲ್ಲಿ ಯುವ ಆಟಗಾರರೇ ಕಡೆ ಹೆಚ್ಚಿನ ಗಮನ ಹರಿಸಲಿದ್ದಾರೆ, ಪಂತ್ ಅನುಪಸ್ಥಿತಿಯಲ್ಲಿ ಹಿರಿಯ ಆಟಗಾರ ಸಂಜು ಸಮನ್ಸ್‍ರವರು ತಂಡಕ್ಕೆ ಮರಳುವ ಸಾಧ್ಯತೆಗಳು ಹೆಚ್ಚಾಗಿವೆ.
ತಂಡಕ್ಕೆ ಮರಳುವರೇ ಜಡ್ಡು..?
ನ್ಯೂಜಿಲ್ಯಾಂಡ್ ವಿರುದ್ಧ 2021 ನವೆಂಬರ್‍ನಲ್ಲಿ ನಡೆದ ಟೆಸ್ಟ್ ಸರಣಿಯ ವೇಳೆ ಗಾಯಗೊಂಡಿದ್ದ ಹಿರಿಯ ಆಟಗಾರ ರವೀಂದ್ರಾ ಜಾಡೇಜಾ ಅವರು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು ಮುಂಬರುವ ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಹಾಗೂ ಟೆಸ್ಟ್ ಸರಣಿಯಲ್ಲಿ ತಂಡಕ್ಕೆ ಮರಳುವ ಲಕ್ಷಣಗಳು ದಟ್ಟವಾಗಿ ಗೋಚರಿಸಿವೆ.
ರವೀಂದ್ರಾ ಜಾಡೇಜಾ ಅವರು ಗಾಯಗೊಂಡಿದ್ದರಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಹಾಗೂ ಏಕದಿನ ಸರಣಿ ಹಾಗೂ ಸ್ವದೇಶದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಹಾಗೂ ಚುಟುಕು ಸರಣಿಯಿಂದ ಜಾಡೇಜಾ ತಂಡದಿಂದ ಹೊರಗುಳಿದಿದ್ದರು.
ಬಿಸಿಸಿಐ ಶುಭಾಶಯ:
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರವೀಂದ್ರಾ ಜಾಡೇಜಾ ಅವರು ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ನಿಶ್ಚಿತ ಎಂಬುದು ಬಿಸಿಸಿಐ ಮಾಡಿರುವ ಟ್ವೀಟ್ ಮೂಲಕ ಸಾಬೀತಾಗಿದೆ.
ಟ್ವೀಟ್ ಮಾಡಿರುವ ಬಿಸಿಸಿಐ ಗಾಯದಿಂದ ಮರಳುತ್ತಿರುವ ಅಲೌಂಡರ್ ರವೀಂದ್ರಾ ಜಾಡೇಜಾ ಹಾಗೂ ಉಪನಾಯಕನ ಜವಾಬ್ದಾರಿಯನ್ನು ಹೊರುತ್ತಿರುವ ವೇಗಿ ಜಸ್‍ಪ್ರೀತ್ ಬೂಮ್ರಾ ಅವರಿಗೆ ಅಭಿನಂದನೆಗಳನ್ನು ತಿಳಿಸಿದೆ.
ತಂಡಕ್ಕೆ ಮರಳುತ್ತಿರುವುದು ಸಂತಸವಾಗಿದೆ:
ಬಹಳ ದಿನಗಳ ನಂತರ ತಂಡಕ್ಕೆ ಮರಳುತ್ತಿರುವುದಕ್ಕೆ ನನಗೆ ತುಂಬಾ ಸಂತಸವಾಗುತ್ತಿದೆ, ಲಂಕಾ ಸರಣಿಯಲ್ಲಿ ಭಾತದ ಗೆಲುವಿಗೆ ಶ್ರಮಿಸುತ್ತೇನೆ ಎಂದು ಜಡ್ಡು ಸುದ್ದಿಗಾರರಿಗೆ ತಿಳಿಸಿದ್ದಾರೆ.

Articles You Might Like

Share This Article