ಕೋಲ್ಕತ್ತಾ, ಫೆ. 15- ಏಕದಿನ ಸರಣಿಯನ್ನು 3-0 ಯಿಂದ ಕ್ಲೀನ್ ಸ್ವೀಪ್ ಮಾಡಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈಗ ನಾಳೆಯಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಚುಟುಕು ಸರಣಿಯನ್ನು ವಶಪಡಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ. ಏಕದಿನದಲ್ಲಿ ಹೀನಾಯ ಸೋಲು ಕಂಡಿದ್ದರೂ ಕೂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 3-2 ರಿಂದ ವಶಪಡಿಸಿಕೊಂಡಿರುವ ಕಿರಾನ್ ಪೋಲಾರ್ಡ್ ಸಾರಥ್ಯದ ವೆಸ್ಟ್‍ಇಂಡೀಸ್ ತಂಡದಲ್ಲಿ ಚುಟುಕು ಮಾದರಿಯ ಕ್ರಿಕೆಟಿಗೆ ಹೇಳಿ ಮಾಡಿಸಿದ ಹೊಡಿ ಬಡಿ ಆಟಗಾರರೇ ಇರುವುದರಿಂದ ಭಾರತಕ್ಕೆ ಸೆಡ್ಡು ಹೊಡೆದು ಟ್ವೆಂಟಿ-20 ಸರಣಿಯನ್ನು ವಶಪಡಿಸಿಕೊಳ್ಳಲು ಕೆರಿಬಿಯನ್‍ರು ಸಜ್ಜಾಗಿದ್ದಾರೆ.
ಟ್ವೆಂಟಿ-20 ಸರಣಿ ಆರಂಭಗೊಳ್ಳುವ ಮುನ್ನವೇ ಭಾರತಕ್ಕೆ ಗಾಯದ ಸಮಸ್ಯೆ ಕಾಡುತ್ತಿದ್ದು ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಹಾಗೂ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರು ಸರಣಿಯಿಂದ ಹೊರಗುಳಿದಿದ್ದು ಕುಲ್‍ದೀಪ್ ಯಾದವ್ ಹಾಗೂ ರುತುರಾಜ್ ಗಾಯಕ್‍ವಾಡ್ ಅವರಿಗೆ ಸ್ಥಾನವನ್ನು ಕಲ್ಪಿಸಲಾಗಿದೆ.
ರೋಹಿತ್‍ರೊಂದಿಗೆ ಕಿಷನ್ ಇನ್ನಿಂಗ್ಸ್ ಆರಂಭ:
ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಇಶಾನ್ ಕಿಶನ್ ಅವರು ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದ್ದು ರುತುರಾಜ್ ಗಾಯಕ್‍ವಾಡ್ ಅವರು ಆರಂಭಿಕ ಆಟಗಾರನಾಗಿ ರೋಹಿತ್‍ರೊಂದಿಗೆ ಕ್ರೀಸ್‍ಗಿಳಿಯಲು ಸಜ್ಜಾಗಿದ್ದಾರೆ.
ಮಧ್ಯಮಕ್ರಮಾಂಕ ಬಲಿಷ್ಠ:
ವಿರಾಟ್‍ಕೊಹ್ಲಿ, ಶ್ರೇಯಾಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ವೆಂಕಟೇಶ್ ಏಯ್ಯರ್ ಅವರು ಮಧ್ಯ ಕ್ರಮಾಂಕದಲ್ಲಿ ರನ್ ಹೆಚ್ಚಿಸುವ ಹೊರೆ ಹೊತ್ತಿದ್ದರೆ ಬಾಲಂಗೋಚಿಗಳಾದ ಶಾರ್ದುಲ್‍ಠಾಕೂರ್, ಹರ್ಷಲ್‍ಪಟೇಲ್, ಅಕ್ಷರ್‍ಪಟೇಲ್‍ರವರು ವಹಿಸಿಕೊಂಡಿದ್ದಾರೆ.
ಚುಟುಕು ಸರಣಿಯಲ್ಲೂ ಹಿರಿಯ ಬೌಲರ್‍ಗಳು ವಿಶ್ರಾಂತಿ ಪಡೆದಿರುವುದರಿಂದ ಏಕದಿನದಲ್ಲಿ ಸಾರಥ್ಯ ವಹಿಸಿದ್ದ ಮೊಹಮ್ಮದ್ ಶಿರಾಜ್‍ಗೆ ಮೇಲೆ ಹೊರೆ ಹೆಚ್ಚಾಗಲಿದೆ.
ವೆಸ್ಟ್‍ಇಂಡೀಸ್ ಅಬ್ಬರ:
ಚುಟುಕ ಮಾದರಿ ಕ್ರಿಕೆಟ್‍ನಲ್ಲಿ ಭಾರತದಷ್ಟೇ ಬಲಿಷ್ಠವಾಗಿರುವ ವೆಸ್ಟ್‍ಇಂಡೀಸ್ ಆಟಗಾರರ ಅಬ್ಬರ ಜೋರಾಗಿಯೇ ಇದೆ, ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಚುಟುಕು ಸರಣಿ ಗೆದ್ದಿರುವುದು ಪೆÇೀಲಾರ್ಡ್ ಪಡೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ವೆಸ್ಟ್‍ಇಂಡೀಸ್‍ನಲ್ಲಿ ಬ್ರೆಂಡನ್ ಕಿಂಗ್, ಕೇಲ್ ಮೇಯರ್ಸ್, ಡೇರೆನ್ ಬ್ರಾವೋ ಅವರು ಆರಂಭಿಕ ಆಟಗಾರರ ರೂಪದಲ್ಲಿ ರನ್ ಸುರಿಮಳೆ ಸುರಿಸಲು ಸಜ್ಜಾಗಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ನಾಯಕ ಕಿರಾನ್ ಪೆÇೀಲಾರ್ಡ್, ಉಪನಾಯಕ ನಿಕೋಲಸ್ ಪೂರನ್, ಶೈ ಹೋಪ್, ಬಾಲಂಗೋಚಿಗಳ ರೂಪದಲ್ಲಿ ಜೇಸನ್ ಹೋಲ್ಡರ್, ಒಡೆನ್ ಸ್ಮಿತ್ ಅವರು ಇದ್ದು ಭಾರತದ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸುವ ಚಾಕಚಕ್ಯತೆಯನ್ನು ಹೊಂದಿದ್ದಾರೆ.
ಇನ್ನು ಹೋಲ್ಡರ್, ಶೆಲ್ಡನ್‍ಕಾರ್ಟಲ್, ರೋಮಾರಿಯೋ ಶೆಪಾರ್ಟ್ ಅವರು ಭಾರತದ ಬ್ಯಾಟ್ಸ್‍ಮನ್‍ಗಳಿಗೆ ಲಗಾಮು ಹಾಕಲು ಸಜ್ಜಾಗಿರುವುದರಿಂದ ನಾಳೆಯಿಂದ ಆರಂಭಗೊಳ್ಳಲಿರುವ ಚುಟುಕು ಸರಣಿ ಕುತೂಹಲ ಮೂಡಿಸಿದೆ.
ರಿಷಭ್‍ಪಂತ್‍ಗೆ ಉಪನಾಯಕ ಹೊಣೆ
ಕೋಲ್ಕತ್ತಾ, ಫೆ. 15- ಭಾರತ ತಂಡದ ಉಪನಾಯಕ, ಕನ್ನಡಿಗ ಕೆ.ಎಲ್.ರಾಹುಲ್ ಅವರು ಗಾಯಗೊಂಡು ವೆಸ್ಟ್‍ಇಂಡೀಸ್ ವಿರುದ್ಧದ ಚುಟುಕು ಸರಣಿಯಿಂದ ಹೊರಗುಳಿದಿರುವುದರಿಂದ ವಿಕೆಟ್ ಕೀಪರ್ ರಿಷಭ್ ಪಂತ್‍ಗೆ ಉಪನಾಯಕನ ಜವಾಬ್ದಾರಿಯನ್ನು ಬಿಸಿಸಿಐ ವಹಿಸಿದೆ.
ಫೆ.16 ರಿಂದ 20ರವರೆಗೂ ಕೋಲ್ಕತ್ತಾದ ಈಡನ್ ಗಾರ್ಡನ್‍ನಲ್ಲಿ 3 ಪಂದ್ಯಗಳ ಚುಟುಕು ಸರಣಿ ನಡೆಯಲಿದ್ದು ರಿಷಭ್ ಪಂತ್ ಅವರು ಇದೇ ಮೊದಲ ಬಾರಿಗೆ ಉಪನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಭಾರತ ತಂಡದ ಭವಿಷ್ಯದ ನಾಯಕನೆಂದೇ ಬಿಂಬಿಸಿಕೊಂಡಿರುವ ರಿಷಭ್ ಪಂತ್ ಅವರು ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನ ಜವಾಬ್ದಾರಿಯನ್ನು ಹೊತ್ತು ತಂಡವನ್ನು ಫೈನಲ್ ಹಂತಕ್ಕೆ ಕೊಂಡೊಯ್ದಿದ್ದರು, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‍ಗೆ ರಾಜೀನಾಮೆ ನೀಡಿದ ನಂತರ ಇನ್ನು ನಾಯಕನ ಆಯ್ಕೆ ಆಗಿಲ್ಲವಾದರೂ ರಿಷಭ್ ಪಂತ್ ಅವರು ಕೂಡ ನಾಯಕನ ರೇಸ್‍ನಲ್ಲಿದ್ದಾರೆ ಎಂಬ ಗುಸುಗುಸು ಹಬ್ಬಿರುವ ಬೆನ್ನಲ್ಲೇ ಪಂತ್‍ಗೆ ವೆಸ್ಟ್‍ಇಂಡೀಸ್ ವಿರುದ್ಧ ಚುಟುಕು ಸರಣಿಯ ಉಪನಾಯಕನ ಪಟ್ಟ ವಹಿಸಿರುವುದು ಮಹತ್ವ ಪಡೆದುಕೊಂಡಿದೆ.
