1000ನೇ ಏಕದಿನ ಪಂದ್ಯ, ಭಾರತ ಶುಭಾರಂಭ ಮಾಡುವುದೇ..?

Social Share

ಅಹಮದಾಬಾದ್,ಫೆ.5- ನೂತನ ನಾಯಕನಾ ರೋಹಿತ್ ಶರ್ಮ ಉಪಸ್ಥಿತಿ, ಮಧ್ಯಮ ಕ್ರಮಾಂಕದ ಕುಸಿತದಿಂದ ಹೊರಬರುವುದು- ಇದು ಇಲ್ಲಿ ಭಾನುವಾರ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ ಅವಶ್ಯಕ ಅಂಶಗಳಾಗಿವೆ.
ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ಸರಣಿಯಲ್ಲಿ ಸೋತ ಬಳಿಕ ಭಾರತ ತಂಡ ಈಗ ನೂತನ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಅವರ ನೇತೃತ್ವದಲ್ಲಿ ಗೆಲುವಿನ ಹಳಿಗೆ ಮರಳುವ ತವಕದಲ್ಲಿದೆ.
ಈ ಸರಣಿಯ ಉದ್ಘಾಟನಾ ಪಂದ್ಯವು ಭಾರತಕ್ಕೆ ಐತಿಹಾಸಿಕ 1000ನೇ ಏಕದಿನ ಪಂದ್ಯವಾಗಿದೆ. 2015 ಮತ್ತು 2019ರಲ್ಲಿ ಪ್ರತಿಷ್ಠಿತ ಐಸಿಸಿ ಒಡಿಐ ಟ್ರೋಫಿ ಗೆಲ್ಲಲು ವಿಫಲವಾಗಿರುವ ಭಾರತ ಈ ಪಂದ್ಯದ ಮೂಲಕ 2023ರ ವಿಶ್ವಕಪ್‍ಗೆ ತಯಾರಿ ಆರಂಭಿಸುವ ನಿರೀಕ್ಷೆ ಇದೆ.
ರೋಹಿತ್-ದ್ರಾವಿಡ್ ಜೋಡಿ ಮುಂದಿನ ಕೆಲವು ತಿಂಗಳುಗಳ ಕಾಲ ತಂಡವನ್ನು ಹೇಗೆ ಮುನ್ನಡೆಸಲಿದೆ. ಎಷ್ಟು ಗೆಲುವುಗಳನ್ನು ಗಳಿಸಿಕೊಡಲಿದೆ ಎಂಬ ಅಂಶದತ್ತ ಕ್ರಿಕೆಟ್ ಪ್ರಿಯರ ಕುತೂಹಲ ನೆಟ್ಟಿದೆ.

Articles You Might Like

Share This Article