ಬೆಂಗಳೂರು,ಫೆ.20- ಭಾರತದ ಅಚ್ಚು ಮೆಚ್ಚಿನ ಮನೋರಂಜನಾ ತಾಣವಾದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಫೆ.24 ರವರೆಗೆ ನಡೆಯಲಿರುವ ಭಾರತ-ನ್ಯೂಜಿಲೆಂಡ್ ನಡುವಿನ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಸರಣಿಯನ್ನು ಲೈವ್ ಆಗಿ ತರುತ್ತಿದೆ.
ಕ್ವೀನ್ಸ್‍ಟೌನ್‍ನ ಜಾನ್ ಡೇವಿಸ್ ಒವಲ್‍ನಲ್ಲಿ ನಡೆಯಲಿರುವ ಪಂದ್ಯಾವಳಿಗಳನ್ನು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಗಲಿದೆ. 2020ರ ನವೆಂಬರ್‍ನಲ್ಲಿ ಪ್ರೈಮ್ ವಿಡಿಯೋ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಮೂಲಕ ವಿಶೇಷ ನೇರಪ್ರಸಾರದ ಹಕ್ಕನ್ನು ಪಡೆದಿದೆ.
ಈ ಬಹು ವರ್ಷಗಳ ಸಹಯೋಗದ ಭಾಗವಾಗಿ ಅಂತಾರಾಷ್ಟ್ರೀಯ ಪುರುಷರು ಹಾಗೂ ಮಹಿಳೆಯರ ಎಲ್ಲಾ ಮಾದರಿಗಳ ಕ್ರಿಕೆಟ್ ಪಂದ್ಯಾವಳಿಗಳ ವಿಶೇಷವಾಗಿ ಪ್ರಸಾರವಾಗಲಿವೆ.
ಕ್ರಿಕೆಟ್ ಪ್ರಿಯರು ಪ್ರೈಮ್ ವಿಡಿಯೋದಲ್ಲಿ ಕ್ರಿಕೆಟ್‍ನ ಪ್ರೋ ಗ್ರಾಮಿಂಗ್ ಮತ್ತು ಹೈಲೆಟ್ಸ್ ಪಡೆಯಬಹುದಾಗಿದೆ ಮತ್ತು ಪಂದ್ಯಾವಳಿಗಳ ಪ್ರಮುಖ ಕ್ಷಣಗಳ ಕ್ಲಿಪ್‍ಗನ್ನು ಪಂದ್ಯ ಮುಗಿದ ಬಳಿಕವೇ ವೀಕ್ಷಿಸಬಹುದಾಗಿದೆ.
