ದೇಶದಲ್ಲಿ 5 ಲಕ್ಷ ದಾಟಿದ ಕೋವಿಡ್ ಮರಣ ಪ್ರಕರಣಗಳು

Social Share

ನವದೆಹಲಿ, ಫೆ.4- ಭಾರತವು 5 ಲಕ್ಷಕ್ಕೂ ಅಧಿಕ ಕೋವಿಡ್ ಮರಣಗಳು ಸಂಭವಿಸಿದ ಪ್ರಪಂಚದ ಮೂರನೆ ದೇಶವಾಗಿದೆ. ಅಮೆರಿಕ, ಬ್ರೆಜಿಲ್ ಮೊದಲ ಎರಡು ಸ್ಥಾನಗಳಲ್ಲಿವೆ. ಭಾರತದಲ್ಲಿ 1,49,394 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 4,19,52,712ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ತಿಳಿಸಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನಷ್ಟು ಇಳಿದಿದ್ದು, 14,35,369ಕ್ಕೆ ತಲುಪಿದೆ. ನಿನ್ನೆ ಒಂದೇ ದಿನ 1072 ಜನರು ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟಾರೆ ಕೋವಿಡ್ ಮರಣಗಳ ಸಂಖ್ಯೆ 5,00,005ಕ್ಕೇರಿದೆ ಎಂದು ಸಚಿವಾಲಯ ಹೇಳಿದೆ. ಸಕ್ರಿಯ ಪ್ರಕರಣಗಳು ಒಟ್ಟಾರೆ ಸೋಂಕಿನ ಶೇ.3.42ರಷ್ಟಿವೆ. ರಾಷ್ಟ್ರೀಯ ಕೋವಿಡ್-19 ಚೇತರಿಕೆ ಪ್ರಮಾಣ 95.39 ಪ್ರತಿಶತ ಇದೆ ಎಂದು ಸಚಿವಾಲಯ ನುಡಿದಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ 98,352ರಷ್ಟು ಇಳಿಕೆ ಕಂಡುಬಂದಿದೆ ಎಂದು ಸಚಿವಾಲಯ ಇಂದು 8 ಗಂಟೆಗೆ ತಾಜಾ ಮಾಹಿತಿ ನೀಡಿದೆ.

Articles You Might Like

Share This Article