ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್..!

Spread the love

ನವದೆಹಲಿ,ಮೇ15- ಪೈಲೆಟ್‍ಗಳನ್ನು ನಂಬಿ ವಿಮಾನ ಏರಿ ಸೀಟ್‍ಬೆಲ್ಟ್ ಹಾಕಿಕೊಂಡು ನೆಮ್ಮದಿಯಾಗಿ ಪ್ರಯಾಣಿಸುವ ಮುನ್ನ ಒಮ್ಮೆ ಯೋಚಿಸಿ. ಏಕೆಂದರೆ ಭಾರತೀಯ ವಿಮಾನಗಳಲ್ಲಿ ಕೆಲಸ ಮಾಡುವ ಪೈಲೆಟ್‍ಗಳಲ್ಲಿ 54 ಮಂದಿ ಮದ್ಯಪಾನ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
ಪಿಟಿಐ ಸುದ್ದಿ ಸಂಸ್ಥೆ ಸಂಗ್ರಹಿಸಿರುವ ದತ್ತಾಂಶಗಳ ಪ್ರಕಾರ ಹಾಲ್ಕೋಹಾಲ್ ಪರೀಕ್ಷೆಯಲ್ಲಿ ವಿಫಲರಾದವರ ಪೈಕಿ ಶೇ.64ರಷ್ಟು ಮಂದಿ ಪೈಲೆಟ್‍ಗಳಿದ್ದಾರೆ.

ವಿಮಾನಯಾನ ಮಹಾನಿರ್ದೇಶಕರು(ಡಿಜಿಸಿಎ) ಸೂಚನೆ ಮೇರೆಗೆ ವಿವಿಧ ವಿಮಾನಯಾನ ನಿರ್ವಹಣಾ ಸಂಸ್ಥೆಗಳು ವರದಿ ನೀಡಿವೆ.
2021ರ ಜನವರಿಯಿಂದ 2022ರ ಮಾರ್ಚ್ ನಡುವೆ ವಿಮಾನಯಾನ ಪ್ರಾಕಾರ(ಎಎಐ) ನಿರ್ವಹಿಸುತ್ತಿರುವ 35 ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುವ 56, ಅದಾನಿ ಗ್ರೂಪ್ ನಿರ್ವಹಿಸುತ್ತಿರುವ 4 ವಿಮಾನ ನಿಲ್ದಾಣಗಳಲ್ಲಿ 17 , ಜಿಎಂಆರ್ ಗ್ರೂಪ್ ನಿರ್ವಹಿಸುತ್ತಿರುವ ಎರಡು ವಿಮಾನ ನಿಲ್ದಾಣಗಳಲ್ಲಿ 19 ಹಾಗೂ ಫೇರ್‍ಫ್ಯಾಕ್ಸ್ ಇಂಡಿಯಾ ಗ್ರೂಪ್ ನಿರ್ವಹಿಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಮಂದಿ ಬ್ರಿಥ್ ಅನಲೈಸರ್(ಬಿಎ) ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.

2019ರಿಂದ ವಿಮಾನಯಾನ ನಿಯಂತ್ರಕ ಮಹಾನಿರ್ದೇಶಕರು ಎಲ್ಲಾ ವಿಮಾನ ನಿಲ್ದಾಣಗಳ ಉದ್ಯೋಗಿಗಳಿಗೆ ಬಿಎ ಪರೀಕ್ಷೆಯನ್ನು ಕಡ್ಡಾಯಗೊಳಿಸಿದ್ದಾರೆ. ಈ ಪರೀಕ್ಷೆಯನ್ನು ವಿಮಾಯಾನ ಸೇವೆ ನಿರ್ವಹಿಸುವ ಸಂಸ್ಥೆಗಳು ರ್ಯಾಂಡಮ್ ಆಗಿ ನಡೆಸುತ್ತಿವೆ.

ಮೊದಲ ಬಾರಿ ಹಾಲ್ಕೋಹಾಲ್ ಸಿಕ್ಕಿಬಿದ್ದವರಿಗೆ ಮೂರು ತಿಂಗಳ ಅವಧಿಯವರೆಗೆ ಅವರ ಪೈಲೆಟ್ ಲೈಸೆನ್ಸ್‍ನ್ನು ಅಮಾನತುಗೊಳಿಸುವುದು, ಕರ್ತವ್ಯದಿಂದ ಹೊರಗಿಡುವ ಶಿಕ್ಷೆ ವಿಧಿಸಲಾಗುತ್ತದೆ. ಇದೇ ರೀತಿ ತಪ್ಪು ಮರುಕಳಿಸಿದರೆ ಒಂದು ವರ್ಷ ಲೈಸೆನ್ಸ್ ಅಮಾನತುಗೊಳಿಸಿ ಸೇವೆಯಿಂದ ಹೊರಗಿಡಲಾಗುತ್ತದೆ.

ಪ್ರತಿಯೊಬ್ಬರು ಪರೀಕ್ಷೆಗೊಳಪಡಬೇಕು. ಪರೀಕ್ಷೆಗೆ ಒಳಪಡದೆ ತಪ್ಪಿಸಿಕೊಂಡು ಹೊರ ಹೋಗಲು ಯತ್ನಿಸುವವರಿಗೂ ಈ ದಂಡನೆ ಅನ್ವಯಿಸಲಿದೆ.
ವಿಮಾನಯಾನ ಪ್ರಾಕಾರ ಮದ್ಯದ ಅಮಲಿನಲ್ಲಿ ಕೆಲಸ ನಿರ್ವಹಿಸುತ್ತಿರುವ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದೆ. ತಮ್ಮ ಉದ್ಯೋಗಿಗಳ ಪೈಕಿ ಮದ್ಯಪಾನ ಮಾಡಿ ಸಿಕ್ಕಿಬಿದ್ದವರಲ್ಲಿ 18 ಮಂದಿ ಪ್ರಾಧಿಕಾರದ ನೌಕರರಾಗಿದ್ದು, 15 ಮಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಾಗಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರುವ ಇಬ್ಬರು ಕಾರ್ಮಿಕರು ಬಿಐಎಎಲ್‍ನ ಉದ್ಯೋಗಿಗಳಲ್ಲ ಎಂದು ಸ್ಪಷ್ಟಪಡಿಸಲಾಗಿದೆ. 2022 ಮಾರ್ಚ್ ನಂತರ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ತಿಳಿಸಲಾಗಿದೆ

. ಅದಾನಿ ಮತ್ತು ಜಿಎಂಆರ್ ಗ್ರೂಪ್‍ಗಳು ತಮ್ಮ ಸಂಸ್ಥೆಯಲ್ಲಿ ಸಿಕ್ಕಿಬಿದ್ದ ಮದ್ಯವ್ಯಸನಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂಬೈ ವಿಮಾನ ನಿಲ್ದಾಣದಲ್ಲಿ ಅತಿಹೆಚ್ಚು ಮಂದಿ ಸಿಕ್ಕಿಬಿದ್ದಿದ್ದು, ದೆಹಲಿ ವಿಮಾನ ನಿಲ್ದಾಣ 2ನೇ ಸ್ಥಾನದಲ್ಲಿದೆ. ಪೈಲೆಟ್‍ಗಳಷ್ಟೇ ಅಲ್ಲದೆ ಏರೋಬ್ರಿಡ್ಜ್ ಆಪರೇಟ್‍ಗಳು, ಲೋಡರ್‍ಗಳು, ವೈರ್‍ಮ್ಯಾನ್‍ಗಳು, ರ್ಯಾಂಪ್ ಮೇಲ್ವಿಚಾರಕರು, ಗ್ರೌಂಡ್ ಸಪೋರ್ಟ್ ಸೇವಾ ತಂಡ, ಏರ್‍ಕ್ರಾಫ್ಟ್ ಪಾರುಗಾಣಿಕ, ಅಗ್ನಿಶಾಮಕ ಸೇವೆಗಳ ಸಿಬ್ಬಂದಿಗಳನ್ನು ಬಿಎ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಅಗರ್ತಲ, ಅಮೃತಸರ, ಔರಂಗಬಾದ್, ಉದಯಪುರ, ತಿರುಚಿ, ತಿರುಪತಿ, ಪುಣೆ, ನಾಸಿಕ್, ನಾಗಪುರ, ಹುಬ್ಬಲ್, ಗಯಾ, ಕೊಯಮತ್ತೂರು, ಕಾಲಿಕಟ್ ಸೇರಿದಂತೆ 35 ವಿಮಾನ ನಿಲ್ದಾಣಗಳ 56 ಮಂದಿ ಮದ್ಯಪಾನ ಸೇವಿಸಿದ್ದಾರೆ ಎಂದು ಪತ್ತೆಯಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ, ಶಿಸ್ತು ಉಲ್ಲಂಘನೆ ಮಾಡಿರುವ ಈ ಪೈಲೆಟ್‍ಗಳ ವಿರುದ್ಧ 2002ರ ನಿಯಮಾನುಸಾರ ಕಠಿಣ ಕ್ರಮ ಜರುಗಿಸಲಾಗುತ್ತಿದೆ.