ಅಮೆರಿಕಾದಲ್ಲಿ ಭಾರತೀಯಳ ಮೇಲೆ ಧರ್ಮಾಂದರ ದಾಳಿ

Social Share

ವಾಷಿಂಗ್ಟನ್,ಜ.17- ರಿಪಬ್ಲಿಕನ್ ನ್ಯಾಷನಲ್ ಕಮಿಟಿ (ಆರ್‍ಎನ್‍ಸಿ) ಅಧ್ಯಕ್ಷ ಸ್ಥಾನಕ್ಕೆ ಸ್ರ್ಪಧಿಸುತ್ತಿರುವ ಪ್ರಮುಖ ಭಾರತೀಯ-ಅಮೆರಿಕನ್ ಅಟಾರ್ನಿ ಹರ್ಮೀತ್ ಲ್ಲೋನ್ ಅವರು ತಮ್ಮ ಧರ್ಮದ ಕಾರಣಕ್ಕಾಗಿ ಸ್ವಪಕ್ಷೀಯ ನಾಯಕರಿಂದ ದಾಳಿಯನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಕ್ಯಾಲಿಫೋರ್ನಿಯಾದ ರಿಪಬ್ಲಿಕನ್ ಪಕ್ಷದ ಸಹ-ಅಧ್ಯಕ್ಷರಾಗಿದ್ದ ಕೆಲಸ ಮಾಡಿದ್ದ 54 ವರ್ಷದ ಲ್ಲೋನ್ ಈ ಪ್ರಬಲ ಸ್ಥಾನಕ್ಕೆ ರೊನ್ನಾ ಮೆಕ್‍ಡೇನಿಯಲ್ ವಿರುದ್ಧ ಸ್ರ್ಪಧಿಸಿದ್ದಾರೆ. ತಾವು ಸಿಖ್ ಧರ್ಮಾಚರಣೆ ಮಾಡುತ್ತಿದ್ದು, ಈ ಕಾರಣಕ್ಕಾಗಿಯೇ ತಮ್ಮ ವಿರುದ್ಧ ಮತಾಂಧ ದಾಳಿ ನಡೆಯುತ್ತಿದೆ. ಆದರೆ ತಾವು ಹೆದರುವುದಿಲ್ಲ, ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸರಣಿ ಟ್ವೀಟ್‍ಗಳ ಮೂಲಕ ತಮ್ಮ ಮೇಲಿನ ದಾಳಿಗಳ ಹಾಗೂ ಬೆದರಿಕೆಗಳ ಬಗ್ಗೆ ವಿವರಣೆ ನೀಡಿರುವ ಅವರು, ಸ್ಪಷ್ಟವಾಗಿ ಹೇಳಬೇಕೆಂದರೆ, ಧರ್ಮದ ಕಾರಣಕ್ಕೆ ನನಗೆ ಅಡ್ಡಿ ಪಡಿಸಲಾಗುತ್ತಿದೆ. ನನಗೆ ಅಥವಾ ನನ್ನ ತಂಡಕ್ಕೆ ಬರುವ ಯಾವುದೇ ಬೆದರಿಕೆಗಳು ಅಥವಾ ಮತಾಂಧ ದಾಳಿಗಳು ನನ್ನನ್ನು ಕಂಗೇಡಿಸುವುದಿಲ್ಲ. ಆರ್‍ಎನ್‍ಯಲ್ಲಿ ಉತ್ತರದಾಯಿತ್ವ, ಪಾರದರ್ಶಕತೆ, ಧನಾತ್ಮಕ ಬದಲಾವಣೆ ತರಬೇಕು ಎಂಬ ನನ್ನ ಉದ್ದೇಶದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಸಮಗ್ರತೆ ಮತ್ತು ಸಭ್ಯತೆ ತಮ್ಮ ಧ್ಯೇಯವಾಗಿದೆ ಎಂದು ಹೇಳಿದ್ದಾರೆ.

ನಿಷೇಧಿತ ಗಾಳಿಪಟ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಕ್ರಮ

ಬೆದರಿಕೆಗಳು ಮುಂದುವರೆದಿವೆ, ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಪರಂಪರೆಯ ಕುರಿತು ನಾನು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದಾಗ ಅದಕ್ಕೆ ರೊನ್ನಾ ಅವರ ಬೆಂಬಲಿಗರೊಬ್ಬರು ಪ್ರತಿಕ್ರಿಯಿಸಿ, ಇಂತಹ ಸಂದೇಶಗಳನ್ನು ನಿಲ್ಲಿಸದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ನನ್ನ ತಂಡದ ವ್ಯಕ್ತಿಯೊಬ್ಬರಿಗೂ ಬೆದರಿಕೆ ಬಂದಿದೆ. ಪಕ್ಷದ ಅತ್ಯುನ್ನತ ಸ್ಪರ್ಧೆಯ ವಿಷಯದಲ್ಲಿ ಅವರು ಮೌನವಾಗಿರದಿದ್ದರೆ ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ಕಷ್ಟವಾಗಲಿದೆ ಎಂದಿದ್ದಾರೆ.

ಅಲ್ಪಸಂಖ್ಯಾತ ಧರ್ಮದ ಸದಸ್ಯನಾಗಿ ತಾವು ಅಂತಹ ದಾಳಿಗಳನ್ನು ಎಂದಿಗೂ ಕ್ಷಮಿಸುವುದಿಲ್ಲ. ಚುನಾವಣೆಯಲ್ಲಿ ಸಕಾರಾತ್ಮಕ ಪ್ರಚಾರವನ್ನು ನಡೆಸಲು ಪ್ರತಿಜ್ಞಾ ಮಾಡಿದ್ದು, ಅದನ್ನು ಮುಂದುವರಿಸುವುದಾಗಿ ದಿಲ್ಲೋನ್ ಸ್ಪಷ್ಟಪಡಿಸಿದ್ದಾರೆ. ರಿಪಬ್ಲಿಕನ್ ನ್ಯಾಷನಲ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ಜನವರಿ 17ರಂದು ಚುನಾವಣೆ ನಡೆಯಲಿದೆ.

Indian-American, Harmeet Dhillon, attacked, Republicans,

Articles You Might Like

Share This Article