ಅಮೆರಿಕ ವಿದೇಶಾಂಗ ಇಲಾಖೆ ಹಂಗಾಮಿ ವಕ್ತಾರರಾದ ಪಟೇಲ್

Social Share

ವಾಷಿಂಗ್ಟನ್, ಮಾ.10- ಭಾರತೀಯ ಮೂಲದ ವೇದಾಂತ್ ಪಟೇಲ್ ಅವರು ಅಮೆರಿಕ ವಿದೇಶಾಂಗ ಇಲಾಖೆಯ ಹಂಗಾಮಿ ವಕ್ತಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹಾಲಿ ವಕ್ತಾರರಾಗಿರುವ ನೆಡ್ ಪ್ರೈಸ್ ಅವರು ಈ ತಿಂಗಳು ನಿವೃತ್ತರಾಗಲಿದ್ದು, ಅವರ ಸ್ಥಾನದಲ್ಲಿ ಭಾರತೀಯ ಮೂಲದ ಅಮೆರಿಕನ್ ಪಟೇಲ್ ಮುಂದುವರೆಯಲಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕ ವಿದೇಶಾಂಗ ಇಲಾಖೆ ಹಂಗಾಮಿ ವಕ್ತಾರರಾಗಿ ಪಟೇಲ್ ಅವರು ಮುಂದುವರೆಯಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಪ್ರಕಟಿಸಿದ್ದಾರೆ. 2021ರಿಂದ ನೆಡ್ ಪ್ರೈಸ್ ಅವರು ಯುಎಸ್ ಡಿಪಾಟ್ರ್ಮೆಂಟ್ ಆಫ್ ಸ್ಟೇಟ್ ವಕ್ತಾರರಾಗಿ ಕೆಲಸ ಮಾಡಲು ಪ್ರಾರಂಭಿಸಿ ಇದುವರೆಗೂ 200ಕ್ಕೂ ಹೆಚ್ಚು ಸುದ್ದಿಗೋಷ್ಠಿ ನಡೆಸಿದ ಹಿರಿಮೆ ಹೊಂದಿದ್ದಾರೆ.

ಗೋ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಡಿದು ಕೊಂದ ಗುಂಪು

ವಿಶ್ವಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಅಮೆರಿಕ ಸರ್ಕಾರಕ್ಕೆ ನೆಡ್ ಪ್ರೈಸ್ ಸಹಾಯ ಮಾಡಿದ್ದಾರೆ ಮತ್ತು ಇತರ ರಾಷ್ಟ್ರಗಳಿಗೆ ಯುಎಸ್ ಪ್ರತಿಪಾದಿಸುವ ಪಾರದರ್ಶಕತೆ ಮತ್ತು ಮುಕ್ತತೆ ಮಾದರಿಯಾಗಿದೆ ಎಂದು ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ.

ನೆಡ್‍ಪ್ರೈಸ್ ಅವರ ದೊಡ್ಡ ಹೃದಯ, ವಿದೇಶಾಂಗ ನೀತಿಯ ಆಳವಾದ ತಿಳುವಳಿಕೆ, ವಿದೇಶಾಂಗ ಇಲಾಖೆ ಮತ್ತು ಅವರ ತಂಡಕ್ಕೆ ಅವರ ತೀವ್ರ ನಿಷ್ಠೆ. ಅವರೊಂದಿಗೆ ಫಾಕ್ಸ್‍ಹೋಲ್‍ನಲ್ಲಿ ಸಮಯ ಕಳೆದಿದ್ದಕ್ಕಾಗಿ ಧನ್ಯವಾದಗಳು, ಮತ್ತು ಅವನು ಹೆಚ್ಚು ದೂರ ಹೋಗುತ್ತಿಲ್ಲ ಎಂದು ತುಂಬಾ ಸಂತೋಷವಾಗಿದೆ! ಪಟೇಲ್ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಹುಟ್ಟಿ ರುವ ಪಟೇಲ್ ಅವರು ಕ್ಯಾಲಿಫೋರ್ನಿಯಾದಲ್ಲಿ ಬೆಳೆದರು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ-ರಿವರ್ಸೈಡ್ ಮತ್ತು ಪ್ರೋರಿಡಾ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ.

ಜಂತರ್‌ಮಂತರ್‌ನಲ್ಲಿ ಕೆ.ಕವಿತಾ ಉಪವಾಸ ಸತ್ಯಾಗ್ರಹ

ಪಟೇಲ್ ಅವರು ಅಧ್ಯಕ್ಷ ಬಿಡೆನ್ ಅವರ ಸಹಾಯಕ ಪತ್ರಿಕಾ ಕಾರ್ಯದರ್ಶಿ ಮತ್ತು ವಕ್ತಾರರಾಗಿ ಸೇವೆ ಸಲ್ಲಿಸಿದರು, ಅಲ್ಲಿ ಅವರು ಮಾಧ್ಯಮ ಸಂಬಂಧಗಳು ಮತ್ತು ಸಂವಹನ ಕಾರ್ಯತಂತ್ರವನ್ನು ನಿರ್ವಹಿಸುವಲ್ಲಿ ತಮ್ಮ ಕೌಶಲ್ಯಗಳ ಮೂಲಕ ಗಮನ ಸೆಳೆದಿದ್ದರು.

Indian, American, Vedant Patel, Interim, Spokesman, US State, Department,

Articles You Might Like

Share This Article